Most Popular Star: ಪ್ರಭಾಸ್, ಸಲ್ಮಾನ್ ಹಿಂದಿಕ್ಕಿ ಮತ್ತೆ ಅಗ್ರಸ್ಥಾನ ಪಡೆದ ಶಾರುಖ್‌ ಖಾನ್!

Published : Oct 23, 2023, 05:43 PM ISTUpdated : Oct 23, 2023, 05:45 PM IST

Ormax Media, ಭಾರತದ ವಿಶೇಷ ಮಾಧ್ಯಮ ಸಲಹಾ ಸಂಸ್ಥೆಯು ಸೆಪ್ಟೆಂಬರ್ 2023 ರಂತೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಭಾರತದ ಅತ್ಯಂತ ಜನಪ್ರಿಯ ಪುರುಷ  ನಟರ ಪಟ್ಟಿಯ ಜೊತೆಗೆ ಮಹಿಳಾ ನಟಿಯರ ಪಟ್ಟಿಯನ್ನು ಸಾರ್ವಜನಿಕಗೊಳಿಸಲಾಯಿತು. ಇದರಲ್ಲಿ ಅಗ್ರಸ್ಥಾನ ಪಡೆದ ನಟನ ನಟಿಯರು ಯಾರು ಗೊತ್ತಾ?

PREV
19
Most Popular Star: ಪ್ರಭಾಸ್, ಸಲ್ಮಾನ್ ಹಿಂದಿಕ್ಕಿ ಮತ್ತೆ  ಅಗ್ರಸ್ಥಾನ ಪಡೆದ ಶಾರುಖ್‌ ಖಾನ್!

ಈ ಪಟ್ಟಿಯ ಪುರುಷರ ವಿಭಾಗದಲ್ಲಿ ಶಾರುಖ್ ಖಾನ್ ಅಗ್ರಸ್ಥಾನ ಪಡೆದರೆ, ಭಾರತದ ಮಹಿಳಾ ಜನಪ್ರಿಯ ತಾರೆಯಾಗಿ ನ್ಯಾಷನಲ್‌ ಆವಾರ್ಡ್‌ ಪಡೆದ ಆಲಿಯಾ ಭಟ್‌ ಆಲಂಕರಿಸಿದ್ದಾರೆ. 

29

'ಕಿಂಗ್ ಆಫ್ ರೋಮ್ಯಾನ್ಸ್' ಎಂದೂ ಕರೆಯಲ್ಪಡುವ ಶಾರುಖ್ ಖಾನ್ ಪ್ರಪಂಚದಾದ್ಯಂತದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಅಪಾರ ಅಭಿಮಾನಿಗಳನ್ನು ಹೊಂದಿದ ಅವರು ದಶಕಗಳಿಂದ ಭಾರತೀಯ ಚಲನಚಿತ್ರೋದ್ಯಮವನ್ನು ಆಳುತ್ತಿದ್ದಾರೆ. 

39

ಶಾರುಖ್‌ ಖಾನ್ ಅವರು ಅತ್ಯಂತ ಜನಪ್ರಿಯ ಪುರುಷ ತಾರೆಯರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವ ಮೂಲಕ  ಅವರು ಅತ್ಯುತ್ತಮ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. 

49

ಈ ವರ್ಷ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾಗಳನ್ನು ನೀಡಿದ ಶಾರುಖ್‌ ಹೊಸ ಶ್ರೇಯಾಂಕದಲ್ಲಿ ಭಾರತದ ಅತ್ಯಂತ ಜನಪ್ರಿಯ ತಾರೆಯಾಗಿ ತನ್ನ ಸ್ಥಾನವನ್ನು ಮರಳಿ ಪಡೆದಿದ್ದಾರೆ.

59

ಭಾರತದ ಅತ್ಯಂತ ಜನಪ್ರಿಯ ಪುರುಷ  ನಟರ ಪಟ್ಟಿಯಲ್ಲಿ ಶಾರುಖ್‌ ಖಾನ್‌ ಅವರು ಪ್ರಭಾಸ್, ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ. 

69

ನಂತರ ವಿಜಯ್ ಮತ್ತು ಪ್ರಭಾಸ್ ಇದ್ದಾರೆ. ಸಲ್ಮಾನ್ ಖಾನ್ ಐದನೇ ಸ್ಥಾನದಲ್ಲಿದ್ದರೆ, ಅಕ್ಷಯ್ ಕುಮಾರ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಜಿತ್ ಕುಮಾರ್, ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್, ಸೂರ್ಯ ಮತ್ತು ಮಹೇಶ್ ಬಾಬು ಕೂಡ ಪಟ್ಟಿಯಲ್ಲಿದ್ದಾರೆ.

79

ಭಾರತದ ಅತ್ಯಂತ ಜನಪ್ರಿಯ ಮಹಿಳಾ ತಾರೆಗಳ ಪಟ್ಟಿಯಲ್ಲಿ ಆಲಿಯಾ ಭಟ್ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಸಮಂತಾ ರುತ್ ಪ್ರಭು, ದೀಪಿಕಾ ಪಡುಕೋಣೆ ಹಾಗೂ  ನಯನತಾರಾ ಇದ್ದಾರೆ.

89

ಕೆಲಸದ ಮುಂಭಾಗದಲ್ಲಿ ಶಾರುಖ್‌ ಖಾನ್‌ ಅವರು ಡಿಸೆಂಬರ್ 22, 2023 ರಂದು ಬಿಡುಗಡೆಯಾಗಲಿರುವ ರಾಜ್‌ಕುಮಾರ್ ಹಿರಾನಿಯವರ 'ಡುಂಕಿ' ಚಿತ್ರದಲ್ಲಿ   ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ತಾಪ್ಸಿ ಪನ್ನು ಕೂಡ ನಟಿಸಿದ್ದಾರೆ.


 

99

ಆಲಿಯಾ ಭಟ್ ಅವರ ಮುಂದಿನ ಚಿತ್ರ 'ಜಿಗ್ರಾ' ಆಗಿದ್ದು, ಅವರು ಚಿತ್ರವನ್ನು ಸಹ ನಿರ್ಮಿಸಲಿದ್ದಾರೆ. ಆಲಿಯಾ ಇತ್ತೀಚೆಗಷ್ಟೇ ತನ್ನ ನಿರ್ಮಾಣದ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Read more Photos on
click me!

Recommended Stories