ಗುಲಾಬಿ ಬಣ್ಣದ ಸೀರೆಯುಟ್ಟು ದೇವಿಗೆ ಶಿರಭಾಗಿ ನಮಸ್ಕರಿಸಿದ Janhvi Kapoor: ಇದು ನಮ್ಮ ಸಂಸ್ಕೃತಿ ಎಂದ ಫ್ಯಾನ್ಸ್‌!

Published : Oct 24, 2023, 03:40 AM IST

ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಟ್ರೆಡಿಷನಲ್‌ ಆಗಿ ಸೀರೆಯುಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಗುಲಾಬಿ ಬಣ್ಣದ ಆರ್ಗಾನ್ಝಾ ಸೀರೆ ಉಟ್ಟಿದ್ದ ಜಾನ್ವಿ ಅವರ ಲುಕ್ ತುಂಬಾ ಕ್ಯೂಟ್ ಆಗಿತ್ತು.

PREV
17
ಗುಲಾಬಿ ಬಣ್ಣದ ಸೀರೆಯುಟ್ಟು ದೇವಿಗೆ ಶಿರಭಾಗಿ ನಮಸ್ಕರಿಸಿದ Janhvi Kapoor: ಇದು ನಮ್ಮ ಸಂಸ್ಕೃತಿ ಎಂದ ಫ್ಯಾನ್ಸ್‌!

ತ್ರಿಶೂರ್‌ನಲ್ಲಿ ನಡೆದ ನವರಾತ್ರಿ ಕಾರ್ಯಕ್ರಮದಲ್ಲಿ ಜಾನ್ವಿ ಕಪೂರ್‌ ಹಬ್ಬದ ಉಡುಗೆಯಲ್ಲಿ ಅಂದವಾಗಿ ಕಾಣಿಸಿಕೊಂಡಿದ್ದು, ಅವರು ಸೀರೆ ಧರಿಸಿ ಮುದ್ದಾಗಿ ಕಾಣಿಸುತ್ತಿದ್ದರು. ಇವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಕ್ಯೂಟ್‌ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. 

27

ಇದೇ ನವರಾತ್ರಿ ಪೂಜಾ ಕಾರ್ಯಕ್ರಮದಲ್ಲಿ ಜಾನ್ವಿ ಕಪೂರು ಅವರು ದೇವಿಗೆ ಸಾಂಪ್ರದಾಯಿಕ ನಮಸ್ಕಾರವನ್ನು ಮಾಡಿದ್ದಾರೆ. ಅಂದರೆ, ದೇವಿಯ ಮುಂದೆ ಶಿರಭಾಗಿ ನಮಸ್ಕಾರಿಸಿದ್ದಾರೆ. ಈಕೆ ಇಷ್ಟೊಂದು ಭಕ್ತಿಯಿಂದ ದೇವಿಗೆ ನಮಸ್ಕರಿಸಿರುವುದನ್ನು ನೋಡಿದ ಅಭಿಮಾನಿಗಳು ' ಆಹಾ ಏನು ಸಂಸ್ಕೃತಿ' ಎಂದು ಶ್ಲಾಘಿಸುತ್ತಿದ್ದಾರೆ.

37

ಜಾನ್ವಿ ಕಪೂರ್‌ ಅವರು ದೇವಿಗೆ ಶಿರಭಾಗಿ ನಮಸ್ಕರಿಸುವ ವಿಡಿಯೋವನ್ನು ಪೇಪರಾಝೊ ತಾಣವು ಹಂಚಿಕೊಂಡಿದೆ. ಈಕೆ ನೆಲಕ್ಕೆ ಶಿರವನ್ನು ತಾಗಿಸಿ ನಮಸ್ಕರಿಸುವ ವಿಡಿಯೋ ಇದಾಗಿದೆ. 

47

'ದೇವರ ಮುಂದೆ ಜಾನ್ವಿ ಯಾವಾಗಲೂ ದಕ್ಷಿಣ ಭಾರತದ ಸಾಂಪ್ರದಾಯಿಕ ರೀತಿಯ ನಮಸ್ಕಾರ ಮಾಡುತ್ತಾರೆ' ಎಂದು ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. 'ಸೌಂದರ್ಯ ಮತ್ತು ಸಂಸ್ಕಾರದ ಯುಗಳ ಗೀತೆ' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

57

ಜಾನ್ವಿ ಅವರು ಗುಲಾಬಿ ಬಣ್ಣದ ಆರ್ಗಾನ್ಝಾ ಸಿಲ್ಕ್‌ ಸಾರಿ ಉಟ್ಟಿದ್ದರು. ಇದು ಮನೀಶ್‌ ಮಲ್ಹೋತ್ರಾ ವಿನ್ಯಾಸದ ಸೀರೆ. ಈ ಸೀರೆಯ ಜತೆಗೆ ಸುಂದರವಾದ ವಜ್ರದ ನೆಕ್ಲೇಸ್ ಮತ್ತು ಕಿವಿಯೋಲೆಗಳು ಜಾನ್ವಿ ಅಂದವನ್ನು ಹಲವು ಪಟ್ಟು ಹೆಚ್ಚಿಸಿದ್ದವು. ಬೈತೆಲೆ ತೆಗೆದು ಪುಟಾಣಿ ಬಿಂದಿ ಇಟ್ಟಿದ್ದರು. 

67

ಜಾನ್ವಿ ಕಪೂರ್ ಅವರು ಇನ್ನು ದೇವರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೂನಿಯರ್ ಎನ್​ಟಿಆರ್ ಅವರ ಬಹುನಿರೀಕ್ಷಿತ ಚಿತ್ರದ ಮೂಲಕ ಜಾನ್ವಿ ಸೌತ್​ಗೆ ಎಂಟ್ರಿ ಕೊಡುತ್ತಿದ್ದಾರೆ.

77

ಜಾನ್ವಿ ಅವರು ತಮ್ಮಿಷ್ಟದ ಬಟ್ಟೆ ಧರಿಸುತ್ತಾರೆ. ಅವರು ಬೇರೆಯವರ ಅಭಿಪ್ರಾಯಗಳಿಗೆ ಎಂದಿಗೂ ಗಮನ ಕೊಟ್ಟಿಲ್ಲ. ಸದ್ಯ ಶಿಖರ್ ಪಹಾರಿಯಾ ಜೊತೆ ಜಾನ್ವಿ ಕಪೂರ್ ಸಾಕಷ್ಟು ಬಾರಿ ಸುತ್ತಾಡಿದ್ದಾರೆ. ಇಬ್ಬರೂ ಶೀಘ್ರವೇ ಮದುವೆ ಆಗುತ್ತಾರಂತೆ.

Read more Photos on
click me!

Recommended Stories