ಎಸ್ ಎಲ್ ಭೈರಪ್ಪ ನಿಧನ, ಮೇರು ಸಾಹಿತಿಯ ಕಾದಂಬರಿ ಆಧಾರಿತ ಪರ್ವ ಸಿನಿಮಾ ಏನಾಯ್ತು?

Published : Sep 24, 2025, 03:59 PM IST

ಎಸ್ ಎಲ್ ಭೈರಪ್ಪ ನಿಧನ, ಮೇರು ಸಾಹಿತಿಯ ಕಾದಂಬರಿ ಆಧಾರಿತ ಪರ್ವ ಸಿನಿಮಾ ಏನಾಯ್ತು? ಬಾಲಿವುಡ್ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ ಟೈಟಲ್ ಲಾಂಚ್ 2023ರಲ್ಲಿ ಆಗಿದೆ. ಆದರೆ ಈ ಬಾಲಿವುಡ್ ಸಿನಿಮಾ ಏನಾಗಿದೆ? 

PREV
17
ಎಸ್ ಎಲ್ ಭೈರಪ್ಪ ನಿಧನ, ಪರ್ವ ಸಿನಿಮಾ ಕತೆ ಏನು

ಎಸ್ ಎಲ್ ಭೈರಪ್ಪ ನಿಧನ, ಪರ್ವ ಸಿನಿಮಾ ಕತೆ ಏನು

ಭಾರತದ ಕಂಡ ಅತ್ಯಂತ ಶ್ರೇಷ್ಠ ಸಾಹಿತಿ ಎಸ್ ಎಲ್ ಭೈರಪ್ಪ, ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಸಾಹಿತ್ಯಕ್ಕೆ ಕೊಡುಗೆ ನೀಡಿರುವ ಭೈರಪ್ಪ ಕಾದಂಬರಿಗಳು ಹಾಟ್ ಕೇಕ್ ರೀತಿ ಮಾರಾಟವಾಗುತ್ತದೆ. ಮರು ಮುದ್ರಣದಲ್ಲೂ ಇತಿಹಾಸ ದಾಖಲಿಸಿದೆ. ಪದ್ಮ ಭೂಷಣ ಪ್ರಶಸ್ತಿ ವಿಜೇತ ಸಾಹಿತಿ ಎಸ್ ಎಲ್ ಭೈರಪ್ಪ ತಮ್ಮ 94ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾಹಿತ್ಯ ಲೋಕ, ಗಣ್ಯರು ಭೈರಪ್ಪ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಭೈರಪ್ಪ ಅವರ ಹಲವು ಕಾದಂಬರಿಗಳು ಸಿನಿಮಾ ಆಗಿ ತೆರೆ ಮೇಲೆ ದಾಖಲೆ ಬರೆದಿದೆ. ಈ ಪೈಕಿ ಭಾರಿ ಕತೂಹಲ ಮೂಡಿಸಿದ ಸಿನಿಮಾ ಪರ್ವ.

27
ವಿವೇಕ್ ಅಗ್ನಿಹೋತ್ರಿ ನಿರ್ದೇಶನ

ವಿವೇಕ್ ಅಗ್ನಿಹೋತ್ರಿ ನಿರ್ದೇಶನ

ಆಧುನಿಕ ಮಹಾಭಾರತ ಕತೆಯೇ ಪರ್ವ. ಮಹಾಭಾರತ ಮೂಲ ಕತೆ ಆಧರಿಸಿ ಬರೆದಿರುವ ಪರ್ವ ಕಾದಂಬರಿ ಅತೀ ಹೆಚ್ಚು ಚರ್ಚೆ, ಪ್ರಶಂಸೆ, ಟೀಕೆಗ ಗುರಿಯಾದ ಕಾಂದಂಬರಿಯೂ ಹೌದು. ಈ ಕಾದಂಬರಿಯನ್ನು ಬಾಲಿವುಡ್ ಖ್ಯಾತ ನಿರ್ದೇಶಕ, ಕಾಶ್ಮೀರ ಫೈಲ್ಸ್, ಕೇರಳ ಫೈಲ್ಸ್ ಸೇರಿದಂತೆ ಹಲವು ಇತಿಹಾಸ ಆಧಾರಿತ ಸಿನಿಮಾ ನಿರ್ದೇಶನ ಮಾಡಿರುವ ವಿವೇಕ್ ಅಗ್ನಿಹೋತ್ರಿ ಈ ಪರ್ವ ಸಿನಿಮಾ ನಿರ್ದೇಶನ ಜವಾಬ್ದಾರಿ ಹೊತ್ತಿಕೊಂಡಿದ್ದರು.

37
2023ರಲ್ಲಿ ಟೈಟಲ್ ಲಾಂಚ್

2023ರಲ್ಲಿ ಟೈಟಲ್ ಲಾಂಚ್

2023ರ ಅಕ್ಟೋಬರ್ 21ರಂದು ಬೆಂಗಳೂರಿನಲ್ಲಿ ಪರ್ವ ಸಿನಿಮಾ ಟೈಟಲ್ ಲಾಂಚ್ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಈ ಪರ್ವ ಸಿನಿಮಾ ಟೈಟಲ್ ಲಾಂಚ್ ಮಾಡಲಾಗಿತ್ತು. ಟೈಟಲ್ ಪೋಸ್ಟರ್ ಭಾರಿ ಕುತೂಹಲ ಹಾಗೂ ಮತ್ತೊಂದು ಅದ್ಬುತ ಮಹಾಭಾರತದ ದೃಶ್ಯಕಾವ್ಯ ತೆರೆ ಮೇಲೆ ನೋಡಲು ಅಭಿಮಾನಿಗಳು ಆಸಕ್ತರಾಗಿದ್ದರು.

47
ಪ್ರಕಾಶ್ ಬೆಳವಾಡಿ ನಾಟಕ ನೋಡಿದ್ದ ಅಗ್ನಿಹೋತ್ರಿ

ಪ್ರಕಾಶ್ ಬೆಳವಾಡಿ ನಾಟಕ ನೋಡಿದ್ದ ಅಗ್ನಿಹೋತ್ರಿ

ನಟ, ರಂಗಭೂಮಿ ಕಲಾವಿದ, ಸಾಹಿತಿ, ಚಿಂತಕ ಪ್ರಕಾಶ್ ಬೆಳವಾಡಿ ಪರ್ವ ಕಾದಂಬರಿಯನ್ನು ಇಂಗ್ಲೀಷ್ ನಾಟಕವಾಗಿ ಪ್ರಸ್ತುತಪಡಿಸಿದ್ದರು. ಈ ನಾಟಕ ನೋಡಿ ಪ್ರೇರಿತರಾಗಿದ್ದ ವಿವೇಕ್ ಅಗ್ನಿಹೋತ್ರಿ, ಪರ್ವ ಕಾದಂಬರಿಯನ್ನು ಓದಿದ್ದಾರೆ. ಬಳಿಕ ಭಾರಿ ಪ್ರಭಾವಿತರಾಗಿ ಪರ್ವ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದರು.

57
ಕಾಶ್ಮೀರ ಫೈಲ್ಸ್ ಸಿನಿಮಾ ನೋಡಿ, ಪರ್ವ ಸಿನಿಮಾ ಮಾಡುವಂತೆ ಭೈರಪ್ಪ ಸೂಚನೆ

ಕಾಶ್ಮೀರ ಫೈಲ್ಸ್ ಸಿನಿಮಾ ನೋಡಿ, ಪರ್ವ ಸಿನಿಮಾ ಮಾಡುವಂತೆ ಭೈರಪ್ಪ ಸೂಚನೆ

ಕಾಶ್ಮೀರ ಫೈಲ್ಸ್ ಸಿನಿಮಾ ನೋಡಿದ್ದ ಎಸ್ಎಲ್ ಭೈರಪ್ಪ, ಪರ್ವಾ ಕಾದಂಬರಿಯನ್ನು ಸಿನಿಮಾ ಮಾಡುವಂತೆ ಪ್ರಕಾಶ್ ಬೆಳವಾಡಿ ಬಳಿ ಹೇಳಿದ್ದರು. ಇದರಂತೆ ಅಗ್ನಿಹೋತ್ರಿ ಪರ್ವ ಸಿನಿಮಾ ಮಾಡಲು ಮುಂದಾಗಿದ್ದರು. 2023ರಿಂದ ಆರಂಭಿಕ ಹಂತದ ಕೆಲಸಗಳು ಆರಂಭಗೊಂಡಿತ್ತು.

67
ಭೈರಪ್ಪ ಆರೋಗ್ಯ ಹದಗೆಡುತ್ತಿದ್ದಂತೆ ಅರ್ಧಕ್ಕೆ ನಿಂತ ಸಿನಿಮಾ ಕೆಲಸ

ಭೈರಪ್ಪ ಆರೋಗ್ಯ ಹದಗೆಡುತ್ತಿದ್ದಂತೆ ಅರ್ಧಕ್ಕೆ ನಿಂತ ಸಿನಿಮಾ ಕೆಲಸ

2023ರಲ್ಲಿ ಎಸ್ಎಲ್ ಭೈರಪ್ಪ ಆರೋಗ್ಯ ಉತ್ತವಾಗಿತ್ತು. ಆದರೆ ವಿವೇಕ್ ಅಗ್ನಿಹೋತ್ರಿ, ಕಾಶ್ಮೀರ ಫೈಲ್ಸ್ ಹಾಗೂ ಬಂಗಾಳ ಫೈಲ್ಸ್ ಸಿನಿಮಾ ಕೆಲಸ ಆರಂಭಿಸಿದ್ದರು. ಹೀಗಾಗಿ ಪರ್ವ ಸಿನಿಮಾ ಕತೆ, ಸ್ಕ್ರೀನ್ ಪ್ಲೇ ಸೇರಿದತೆ ಇತರ ಕೆಲಸಗಳು ವಿಳಂಬವಾಗಿತ್ತು. 2024ರ ಅಂತ್ಯದ ವೇಳೆ ವಿವೇಕ್ ಅಗ್ನಿಹೋತ್ರಿ ಪರ್ವ ಸಿನಿಮಾಗಾಗಿ ಕೆಲಸ ಆರಂಭಿಸಿದ್ದರು. ಅಷ್ಟರಲ್ಲೇ ಭೈರಪ್ಪ ಆರೋಗ್ಯ ಹದಗೆಟ್ಟಿತ್ತು. ಮಹಾಭಾರತ ಕತೆಯಾಗಿರುವ ಕಾರಣ ಹೆಚ್ಚಿನ ಮುತುವರ್ಜಿ ವಹಿಸಲು ಅಗ್ನಿಹೋತ್ರಿ ನಿರ್ಧರಿಸಿದ್ದರು. ಇತ್ತ ಭೈರಪ್ಪ ಆರೋಗ್ಯ ಹದಗೆಟ್ಟ ಕಾರಣ ಸಿನಿಮಾ ಕೆಲಸಗಳು ಮತ್ತಷ್ಟು ವಿಳಂಬವಾಗತೊಡಗಿತು.

77
ಭೈರಪ್ಪ ಆರೋಗ್ಯ ಕ್ಷೀಣಿಸಿದಂತೆ ಸಿನಿಮಾ ಸ್ಥಗಿತ

ಭೈರಪ್ಪ ಆರೋಗ್ಯ ಕ್ಷೀಣಿಸಿದಂತೆ ಸಿನಿಮಾ ಸ್ಥಗಿತ

ಭೈರಪ್ಪ ಅವರ ಜೊತೆಗೆ ಹಲವು ಸುತ್ತಿನ ಮಾತುಕತೆ, ಚರ್ಚೆ ಬಳಿಕ ಸ್ಕ್ರಿಪ್ಟ್ ಅಂತಿಮಗೊಳಿಸಲು ಅಗ್ನಿಹೋತ್ರಿ ಮುಂದಾಗಿದ್ದರು. ಆದರೆ ಭೈರಪ್ಪ ಆರೋಗ್ಯ ಇದಕ್ಕೆ ಸಹಕರಿಸಲಿಲ್ಲ. ಹೀಗಾಗಿ ಸಿನಿಮಾ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಪ್ರಕಾಶ್ ಬೆಳವಾಡಿ ನೆರವಿನೊಂದಿಗೆ ಸಿನಿಮಾ ಮುಂದುವರಿಸುವ ಇಂಗಿತವನ್ನು ಅಗ್ನಿಹೋತ್ರಿ ವ್ಯಕ್ತಪಡಿಸಿದ್ದರು. ಆದರೆ ಸಿನಿಮಾದ ಆರಂಭಿಕ ಕೆಲಸಗಳು ಮಾತ್ರ ಪೂರ್ಣಗೊಂಡಿದೆ. ಇದುವರೆಗೂ ಪರ್ವ ಸಿನಿಮಾ ಸೆಟ್ಟೇರಿಲ್ಲ.

Read more Photos on
click me!

Recommended Stories