ನಾ ಗರ್ಭಿಣಿಯಾಗಿದ್ದಾಗ ಗಾಯಕ ಕುಮಾರ್ ಸನುಗೆ ಅಕ್ರಮ ಸಂಬಂಧವಿತ್ತು, ಮಾಜಿ ಪತ್ನಿ ಸ್ಫೋಟಕ ಮಾತು, ಮನೆಯಿಂದ ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಗರ್ಭಿಣಿ ಸಮಯದಲ್ಲೇ ಕೋರ್ಟ್‌ಗೆ ಎಳೆದುತಂದಿದ್ದರು. ನಾನು, ಗಾಯಕ ಕುಮಾರ್ ಸನು ವಿಚ್ಚೇದನೆ ಊಹಿಸಿಯೇ ಇರಲಿಲ್ಲ
ಬಾಲಿವುಡ್ ಜನಪ್ರಿಯ ಗಾಯಕ ಕುಮಾರ್ ಸನು ಮ್ಯೂಸಿಕ್ ಜಗತ್ತಿನಲ್ಲಿ ಯಶಸ್ವಿ ಗಾಯಕ. ಭಾರಿ ಬೇಡಿಕೆಯ ಹಾಗೂ ಬಹುತೇಕರಿಗೆ ನೆಚ್ಚಿನ ಗಾಯನಾಗಿ ಕುಮಾರ್ ಸನು ಗುರುತಿಸಿಕೊಂಡಿದ್ದಾರೆ. ಗಾಯಕನಾಗಿ ಭಾರಿ ಯಶಸ್ಸು ಕಂಡಿರುವ ಕುಮಾರ್ ಸನು ತಮ್ಮ ವೈಯುಕ್ತಿಕ ಜೀವನದಲ್ಲಿ ಹಲವು ಏರಿಳಿತ ಕಂಡಿದ್ದಾರೆ. ಪ್ರಮುಖವಾಗಿ ಮಾಜಿ ಪತ್ನಿ ರಿಟಾ ಭಟ್ಟಾಚಾರ್ಯ ಹಲವು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ತಾವು ಗರ್ಭಿಣಿಯಾಗಿದ್ದಾಗ, ಕುಮಾರ್ ಸನು ಹಾಗೂ ಅವರ ಕುಟುಂಬದಿಂದ ಅನುಭವಿಸಿದ ನೋವಿನ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
26
ಅಕ್ರಮ ಸಂಬಂಧ ಗೊತ್ತಾಯ್ತು
ಅಕ್ರಮ ಸಂಬಂಧ ಗೊತ್ತಾಯ್ತು
ನಾನು ಗರ್ಭಿಣಿಯಾಗಿದ್ದಾಗ ಗಾಯಕ ಕುಮಾರ್ ಸನುಗ ಅಕ್ರಮ ಸಂಬಂಧವಿರುವುದು ಪತ್ತೆಯಾಗಿತ್ತು. ನಾನು ಅತೀವ ಮಾನಸಿಕ ಹಿಂಸೆ ಅನುಭವಿಸಿದ್ದೆ. ಕುಮಾರ್ ಸನು ಕುಟುಂಬಸ್ಥರಿಂದಲೂ ನೋವು, ಕಿರುಕುಳ ಅನುಭವಿಸಿದ್ದೇನೆ. ನನ್ನ ಮೂಗಿನ ನೇರ ಕುಮಾರ್ ಸನು ಅಕ್ರಮ ಸಂಬಂಧ ನಡೆಯುತ್ತಿತ್ತು. ನನಗೆ ಗೊತ್ತಾದ ಮೇಲೆ ಎಲ್ಲರೂ ಸೇರಿ ಕಿರುಕುಳ ನೀಡಲು ಆರಂಭಿಸಿದರು ಎಂದು ರಿಟಾ ಭಟ್ಟಾಚಾರ್ಯ ಹೇಳಿದ್ದಾರೆ.
36
ಉತ್ತಮ ಗಾಯಕ, ಆದರೆ...
ಉತ್ತಮ ಗಾಯಕ, ಆದರೆ...
ಫಿಲ್ಮ್ ವಿಂಡೋ ಚಾಟ್‌ನಲ್ಲಿ ರಿಟಾ ತಮ್ಮ ನೋವಿನ ಕತೆ ಬಿಚ್ಚಿಟ್ಟಿದ್ದಾರೆ. ಕುಮಾರ್ ಸನು ಉತ್ತಮ ಗಾಯಕ, ಆದರೆ ಮನುಷ್ಯತ್ವ ಇಲ್ಲದ ವ್ಯಕ್ತಿ. ಕುಮಾರ್ ಸನು ಗಾಯಕನಾಗಲು ನಾನು ಶ್ರಮಪಟ್ಟಿದ್ದೇನೆ. ತುಂಬಾ ನೆರವು ನೀಡಿದ್ದೇನೆ. ಕುಮಾರ್ ಸನು ಗುರಿಯತ್ತ ಸಾಗುವ ವ್ಯಕ್ತಿಯಾಗಿರಲಿಲ್ಲ. ಆತನನ್ನು ಜನಪ್ರಿಯ ಸಿಂಗರ್ ಮಾಡಲು ನಾನು ಕಷ್ಟಪಟ್ಟಿದ್ದೇನೆ. ಆದರೆ ಆತನ ಅಕ್ರಮ ಸಂಬಂಧ ಗೊತ್ತಾಯ್ತು ಎಂದು ನನ್ನನ್ನು ದೂರ ಮಾಡಿದ ಎಂದು ರಿಟಾ ಹೇಳಿದ್ದಾರೆ.
ವೇದಿಕೆಗಳಲ್ಲಿ ಕಮಾರ್ ಸನು ಸುಳ್ಳು ಹೇಳುತ್ತಾರೆ. ಆತನ ಮುಂಬೈಗೆ ಕಳುಹಿಸಿದ್ದು ಕುಮಾರ್ ಸನು ಕುಟುಂಬವಲ್ಲ.ನಾನು, ಕುಮಾರ್ ಸನು ಜೊತೆಯಾಗಿ ಮುಂಬೈಗೆ ಬಂದಾಗ ನಮ್ಮಲ್ಲಿ ಏನೂ ಇರಲಿಲ್ಲ. ಉತ್ತಮ ಗಾಯಕ, ಪ್ರತಿಭೆ ಕುಮಾರ್ ಸನುವಿನಲ್ಲಿತ್ತು. ಆದರೆ , ವೇದಿಕೆ ಹುಡುಕುವ, ಪ್ರಯತ್ನಪುಡುವ ಮನಸ್ಸು ಇರಲಿಲ್ಲ. ಆತನ ಹಿಂದೆ ನಿಂತು ನೆರವು ನೀಡಿದ್ದೇನೆ. ನೆಲದ ಮೇಲೆ ಮಲಗುತ್ತಿದ್ದೇವು. ಕಷ್ಟದ ದಿನಗಳಿಂದ ನಾವು ಮೇಲೆ ಬಂದಿದ್ದೇವು. ಆತನ ಹಾಡು, ಪ್ರತಿಭೆಯಿಂದಲೇ ನಾವು ಬೆಳೆದಿದ್ದು ಅನ್ನೋದರಲ್ಲಿ ಎರಡು ಮಾತಿಲ್ಲ ಎಂದು ರಿಟಾ ಹೇಳಿದ್ದಾರೆ.
56
ಸಂಸಾರವೇ ಬೀದಿ ಬಂತು
ಸಂಸಾರವೇ ಬೀದಿ ಬಂತು
ಕಿರಿಯ ಮಗನ ಗರ್ಭಿಣಿಯಾಗಿದ್ದಾಗ ಕುಮಾರ್ ಸನು ಅಕ್ರಮ ಸಂಬಂಧ ಬಗ್ಗೆ ನನಗೆ ಗೊತ್ತಾಯಿತು. ಬಳಿಕ ರಂಪಾಟವೇ ನಡೆದು ಹೋಯಿತು. ಅಕ್ರಮ ಸಂಬಂಧ ಬಿಟ್ಟು ಮೂವರು ಮಕ್ಕಳ ಜೊತೆ ಚೆನ್ನಾಗಿರುತ್ತಾನೆ ಎಂದು ನಾನು ಬಯಸಿದ್ದೆ. ಆದರೆ ಆತ ನನ್ನನ್ನೇ ದೂರ ತಳ್ಳಿದ. ಗರ್ಭಿಣಿಯಾಗಿದ್ದಾಗಲೇ ಕೋರ್ಟ್‌ಗೂ ಎಳೆದ, ವಿಚ್ಚೇದನ ಮೂಲಕ ದೂರವಾದ ಎಂದು ರಿಟಾ ಹೇಳಿದ್ದಾರೆ.
66
ಕಿರಿಯ ಮಗನಿಂದಲೂ ದೂರ ದೂರ
ಕಿರಿಯ ಮಗನಿಂದಲೂ ದೂರ ದೂರ
ಕಿರಿಯ ಮಗನಿಂದಲೂ ಕುಮಾರ್ ಸನು ದೂರವಿದ್ದಾನೆ. ಆತನ ಜೊತೆ ಮಾತುಕತೆ ಇಲ್ಲ. ಆತನ ನಿಶ್ಚಿತಾರ್ಥಕ್ಕೂ ಕುಮಾರ್ ಸನು ಬರಲಿಲ್ಲ. ಕಿರಿಯ ಮಗನ ತಂದೆಯ ಆಗಮನ ಬಯಸಿದ್ದ. ಆದರೆ ಆತನಿಗೆ ತಂದೆಯ ಒಂದು ಚೂರು ಪ್ರೀತಿ ಸಿಗಲಿಲ್ಲ. ಈಗಲೂ ಇಲ್ಲ ಎಂದು ರಿಟಾ ತಮ್ಮ ನೋವು ತೋಡಿಕೊಂಡಿದ್ದಾರೆ.