ರೋಡಲ್ಲಿ ರೀಲ್ಸ್ ಮಾಡ್ಕೊಂಡಿದ್ದ ಸುಂದರಿ ಈಗ ಟಾಪ್ ಹೀರೋಯಿನ್; ಕಾಲ್‌ಶೀಟ್‌ಗೆ ಡೈರೆಕ್ಟರ್ಸ್ ವೇಟಿಂಗ್!

Published : Sep 23, 2025, 07:05 PM IST

ರೋಡ್, ರೋಡಲ್ಲಿ ರೀಲ್ಸ್ ಮಾಡುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತಿದ್ದ ಯುವತಿ ಇದೀಗ ಸ್ಟಾರ್ ನಟಿ. ಎಂಥಾ  ಗ್ಲಾಮರ್‌ಗೂ ಸೈ ಎಂದ ನಟಿ ಚಿತ್ರರಂಗದಲ್ಲಿ ಕಿಚ್ಚೆಬ್ಬಿಸಿದ್ದಾಳೆ. ಈ ನಟಿಗಾಗಿ ನಿರ್ದೇಶಕರು ಕಾಲ್‌ಶೀಟ್‌ಗೆ ವೇಟಿಂಗ್ ಮಾಡ್ತಿದ್ದಾರೆ. ಕನ್ನಡ ಡೈರೆಕ್ಟರ್ಸ್ ಕಾಯ್ತಿದ್ದಾರೆ.

PREV
16
ರೋಡಲ್ಲಿ ರೀಲ್ಸ್ ಮಾಡ್ತಿದ್ದ ಸುಂದರಿ

ಚಿತ್ರರಂಗದಲ್ಲಿ ಹೊಸ ಮುಖಗಳಿಗೆ ಕೊರತೆಯಿಲ್ಲ. ಪ್ರತಿ ವರ್ಷವೂ ಹೊಸ ಪ್ರತಿಭೆಗಳು ಬೆಳ್ಳಿ ತೆರೆ ಮೇಲೆ ಮಿಂಚಲು ಸಿದ್ಧರಾಗುತ್ತಾರೆ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಮಾಡಿಕೊಂಡು ಸಾಮಾನ್ಯರಂತೆ ಇದ್ದ ಯುವತಿಯೊಬ್ಬಳು ಖ್ಯಾತ ನಿರ್ದೇಶಕನ ಕಣ್ಣಿಗೆ ಬಿದ್ದು, ಈಗ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡಿರುವುದು ನಿಜಕ್ಕೂ ಒಂದು ಅಚ್ಚರಿಯ ಕಥೆ.

26
ರೀಲ್ಸ್‌ಗಳ ಮೂಲಕ ಪ್ರಸಿದ್ಧಿಗೆ

23 ವರ್ಷದ ಈ ಬೆಡಗಿ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ, ಕೇವಲ ರಸ್ತೆಗಳಲ್ಲಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್‌ಗಳನ್ನು ಮಾಡುತ್ತಿದ್ದರು. ಇವರ ನೃತ್ಯ, ಅಭಿನಯ ಮತ್ತು ಸೌಂದರ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇವರ ಈ ಟ್ಯಾಲೆಂಟ್‌ ಅನ್ನು ಗುರುತಿಸಿದವರು ಸಾಕ್ಷಾತ್ ಸೆನ್ಸೇಶನಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (ಆರ್‌ಜಿವಿ).

36
ಮೊದಲ ಸಿನಿಮಾ ಆರ್‌ಜಿವಿ ಸಾರಿ

ಆರ್‌ಜಿವಿ ಅವರು ಆರಾಧ್ಯದೇವಿಯ ರೀಲ್ಸ್‌ಗಳನ್ನು ನೋಡಿ ಪ್ರಭಾವಿತರಾಗಿ, ಅವರಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಹುಡುಕಾಟ ನಡೆಸಿದರು. ಆರ್‌ಜಿವಿ ಅವರೇ ಖುದ್ದು ನಾಯಕಿಯ ಹುಡುಕಾಟ ನಡೆಸಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಅಂತಿಮವಾಗಿ ಶ್ರೀಲಕ್ಷ್ಮಿ ಸತೀಶ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿ 'ಆರ್‌ಜಿವಿ ಸಾರಿ' ಎಂಬ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದರು.

46
ಗ್ಲಾಮರ್ ಅಥವಾ ಸಾಂಪ್ರದಾಯಿಕ: ಎಲ್ಲದಕ್ಕೂ ನಾನು ಸಿದ್ಧ!

'ಆರ್‌ಜಿವಿ ಸಾರಿ' ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಆದರೂ, ಆರಾಧ್ಯದೇವಿಯ ಸೌಂದರ್ಯ ಮತ್ತು ಹಾಡುಗಳಲ್ಲಿನ ಅವರ ಮನಮೋಹಕ ನೋಟಗಳು ಈಗಾಗಲೇ ಸಾಕಷ್ಟು ಪ್ರೇಕ್ಷಕರನ್ನು ಆಕರ್ಷಿಸಿವೆ. ಅವರ ಸೌಂದರ್ಯ ಮತ್ತು ಗ್ಲಾಮರ್ ನೋಡಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೀರೆಯಲ್ಲಿ ಅಪ್ಸರೆಯಂತೆ ಕಂಗೊಳಿಸಿ ರಾಮ್ ಗೋಪಾಲ್ ವರ್ಮಾ ಕೈಗೆ ಸಿಕ್ಕ ಸುಂದರಿಯ ಅವತಾರ ನೋಡಿ!

56
ಗ್ಲಾಮರ್ ಎನ್ನುವುದು ವೃತ್ತಿಯ ಭಾಗ

ಈ ಸಂದರ್ಭದಲ್ಲಿ ಮಾತನಾಡಿದ ಆರಾಧ್ಯದೇವಿ, 'ನನಗೆ ಗ್ಲಾಮರ್ ಎನ್ನುವುದು ವೈಯಕ್ತಿಕ ವಿಚಾರ. ಆದರೆ ಅದು ನನ್ನ ವೃತ್ತಿಯ ಒಂದು ಭಾಗ. ಅವಕಾಶ ಸಿಕ್ಕರೆ ಗ್ಲಾಮರಸ್ ಅಥವಾ ಸಾಂಪ್ರದಾಯಿಕ ಯಾವುದೇ ಪಾತ್ರಕ್ಕೂ ನಾನು ಸಿದ್ಧಳಿದ್ದೇನೆ. ನನ್ನ ಕೌಶಲ್ಯ ಪ್ರದರ್ಶಿಸಲು ನಾನು ಸಿದ್ಧ' ಎಂದು ಹೇಳಿಕೊಂಡಿದ್ದಾರೆ.

66
ಕನ್ನಡ ಚಿತ್ರರಂಗದಿಂದಲೂ ಬೇಡಿಕೆ

ಆರಾಧ್ಯದೇವಿ ಅವರ ಈ ಮಾತುಗಳು ಈಗ ವೈರಲ್ ಆಗಿದ್ದು, ಹಲವು ನಿರ್ದೇಶಕರು ಅವರ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದಾರೆ. ಅವರ ಮೊದಲ ಚಿತ್ರವೇ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡರೆ, ಅವರು ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಾಯಕಿಯಾಗಿ ಹೊರಹೊಮ್ಮುವುದು ಖಚಿತ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories