ಮಕ್ಕಳ ಗೌಪ್ಯತೆ ಕಾಪಾಡಿದ್ದಕ್ಕೆ ಪಾಪ್ಸ್‌ಗೆ ದುಬಾರಿ ಗಿಫ್ಟ್ ಹ್ಯಾಂಪರ್ ಕೊಟ್ಟ ವಿರುಷ್ಕಾ; ಉಡುಗೊರೆಯಲ್ಲೇನಿದೆ?

First Published | May 14, 2024, 4:13 PM IST

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ತಮ್ಮ ಮಕ್ಕಳ ಗೌಪ್ಯತೆ ಕಾಪಾಡಿಕೊಂಡು ಬಂದಿರುವುದರ ಗೌರವಾರ್ಥ ಪಾಪಾರಾಜಿಗಳಿಗೆ ದುಬಾರಿ ಉಡುಗೊರೆ ಕಳುಹಿಸಿದ್ದಾರೆ. 

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜನವರಿ 11, 2021 ರಂದು ತಮ್ಮ ಹೆಣ್ಣು ಮಗುವಿಗೆ ವಾಮಿಕಾ ಶರ್ಮಾ ಕೊಹ್ಲಿಯನ್ನು ಸ್ವಾಗತಿಸಿದರು. ಅಂದಿನಿಂದಲೂ ಮಗುವಿನ ಮುಖವನ್ನು ಜನರಿಗೆ ತೋರಿಸಿಲ್ಲ.

ಗೌಪ್ಯತೆ ಕಾಪಾಡುವಂತೆ ಪಾಪಾರಾಜಿಗಳಲ್ಲಿ ಬೇಡಿಕೊಂಡಿದ್ದರು. ಪಾಪರಾಜಿಗಳು ಸಹ ಅವರ ವಿನಂತಿಯನ್ನು ಉತ್ಸಾಹದಿಂದ ಅನುಸರಿಸುತ್ತಾರೆ.

Tap to resize

ವಿರಾಟ್ ಮತ್ತು ಅನುಷ್ಕಾ ಅವರ ಎರಡನೇ ಮಗು ಅಕಾಯ್ ಕೊಹ್ಲಿ ಕೂಡಾ ಹುಟ್ಟಿದಂದಿನಿಂದ ದಂಪತಿ ಮಗುವಿನ ಮುಖ ಎಲ್ಲೂ ತೋರಿಸಿಲ್ಲ. ಮಗುವಿನ ಚಿತ್ರಗಳನ್ನು ಕ್ಲಿಕ್ ಮಾಡಬೇಡಿ ಎಂಬ ದಂಪತಿಗಳ ಕೋರಿಕೆಗೆ ಪಾಪಾರಾಜಿಗಳು ಬದ್ಧರಾಗಿದ್ದಾರೆ.
 

ಇದೀಗ ಪಾಪಾರಾಜಿಗಳು ತಮ್ಮ ಮನವಿಯನ್ನು ಗೌರವಿಸಿದ್ದಕ್ಕಾಗಿ ವಿರುಷ್ಕಾ ದಂಪತಿ ಅವರಿಗೆ ದುಬಾರಿ ಉಡುಗೊರೆ ಕಳುಹಿಸಿದ್ದಾರೆ. 

ಮೇ 14, 2024 ರಂದು, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮಕ್ಕಳ ಚಿತ್ರಗಳನ್ನು ಕ್ಲಿಕ್ ಮಾಡದಿರುವ ವಿನಂತಿಯನ್ನು ಶ್ರದ್ಧೆಯಿಂದ ಅನುಸರಿಸಿದ್ದಕ್ಕಾಗಿ ಕ್ಯಾಮರಾಮನ್‌ಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಇದಲ್ಲದೆ, ದಂಪತಿ ಮೆಚ್ಚುಗೆಯ ಟೋಕನ್ ಆಗಿ ಎಲ್ಲರಿಗೂ ಗಿಫ್ಟ್ ಹ್ಯಾಂಪರ್ ಕಳುಹಿಸಿದ್ದಾರೆ. 

ತಮ್ಮ ಸೋಷ್ಯಲ್ ಮೀಡಿಯಾಗಳಲ್ಲಿ ವಿರಾಟ್, ಅನುಷ್ಕಾ ಇಬ್ಬರೂ 'ನಮ್ಮ ಮಕ್ಕಳ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಮತ್ತು ನಿಮ್ಮ ಅಚಲವಾದ ಸಹಕಾರಕ್ಕಾಗಿ ನಮ್ಮ ಪ್ರಾಮಾಣಿಕವಾಗಿ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ. 

ಫೋಟೋದಲ್ಲಿ ಕಾಣಿಸುವಂತೆ ಹ್ಯಾಂಪರ್‌ನಲ್ಲಿ ಪವರ್ ಬ್ಯಾಂಕ್, ಸಣ್ಣ ಸೈಡ್ ಬ್ಯಾಗ್, ಸ್ಮಾರ್ಟ್ ವಾಚ್ ಮತ್ತು ವಾಟರ್ ಬಾಟಲ್ ಸೇರಿದಂತೆ ಹಲವು ಗ್ಯಾಜೆಟ್‌ಗಳು ಇವೆ.

'ಇಂದು, ನಮ್ಮ ನಿವಾಸದಲ್ಲಿ ನಾವು ಚಿಂತನಶೀಲ ಉಡುಗೊರೆ ವಿತರಣೆಯನ್ನು ಸ್ವೀಕರಿಸಿದ್ದೇವೆ. ಗೌರವಾನ್ವಿತ ದಂಪತಿಗಳಾದ ವಿರಾಟ್ ಮತ್ತು ಅನುಷ್ಕಾ ಅವರು ಉಡುಗೊರೆಯನ್ನು ಕಳುಹಿಸಿದ್ದಾರೆ' ಎಂದು ಪಾಪಾರಾಜೋ ಒಬ್ಬರು ವಿಡಿಯೋ ಹಂಚಿಕೊಂಡು ಬರೆದಿದ್ದಾರೆ. 

Latest Videos

click me!