ಧನುಷ್- ಐಶ್ವರ್ಯಾ ವಿಚ್ಚೇದನಕ್ಕೆ ದಾಂಪತ್ಯದ್ರೋಹ ಕಾರಣನಾ? ಗಾಯಕಿ ಸುಚಿತ್ರ ಬಿಚ್ಚಿಟ್ರು ಶಾಕಿಂಗ್ ಸಂಗತಿ

First Published | May 14, 2024, 12:28 PM IST

ರಜನಿಕಾಂತ್ ಪುತ್ರಿ ಐಶ್ವರ್ಯಾ ಹಾಗೂ ನಟ ಧನುಷ್ ವಿಚ್ಚೇದನವಾಗಿ 2 ವರ್ಷವಾಯಿತು. ಇದುವರೆಗೂ ವಿಚ್ಛೇದನ ಕಾರಣವನ್ನು ಅವರಿಬ್ಬರೂ ಬಿಚ್ಚಿಟ್ಟಿಲ್ಲ. ಆದರೀಗ ಗಾಯಕಿ ಸುಚಿತ್ರಾ ಇವರ ವಿಚ್ಚೇದನಕ್ಕೆ ದಾಂಪತ್ಯ ದ್ರೋಹ ಕಾರಣ ಎಂದಿದ್ದಾರೆ..

ರಜನಿಕಾಂತ್ ಅವರ ಮಗಳು ಐಶ್ವರ್ಯ ರಜನಿಕಾಂತ್ ಅವರು ನಟ ಧನುಷ್ ಅವರನ್ನು ಪ್ರೀತಿಸಿ ಮದುವೆಯಾಗಿ ಸುಮಾರು ಎರಡು ದಶಕಗಳು ಕಳೆದ ಬಳಿಕ ದಂಪತಿ 2022ರಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದರು. 
 

ಇಬ್ಬರು ಗಂಡು ಮಕ್ಕಳ ಪೋಷಕರಾಗಿರುವ ಈ ಸೆಲೆಬ್ರಿಟಿ ದಂಪತಿ ತಮ್ಮ ಪ್ರತ್ಯೇಕತೆಯ ಹಿಂದಿನ ಕಾರಣವನ್ನು ಹಂಚಿಕೊಳ್ಳಲಿಲ್ಲ ಮತ್ತು ಪರಸ್ಪರರ ಬಗ್ಗೆ ಮಾತನಾಡುವುದನ್ನು ತಪ್ಪಿಸಿದರು. ಆದರೆ, ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ಗಾಯಕಿ ಸುಚಿತ್ರಾ ಮಾಜಿ ದಂಪತಿಗಳ ಬಗ್ಗೆ ಕೆಲವು ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ.

Tap to resize

ಧನುಷ್ ಮತ್ತು ಐಶ್ವರ್ಯ ಪರಸ್ಪರ ದಾಂಪತ್ಯ ದ್ರೋಹ
ಕುಮುದಂ ಎಂಬ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಸುಚಿತ್ರಾ ಅವರು ಧನುಷ್ ಮತ್ತು ಐಶ್ವರ್ಯ ಅವರ ಮದುವೆ ಮತ್ತು ಪ್ರತ್ಯೇಕತೆಯ ಬಗ್ಗೆ ಮಾತನಾಡಿದರು. ಮಾಜಿ ದಂಪತಿ ತಮ್ಮ ವೈವಾಹಿಕ ಜೀವನದ ಸಮಯದಲ್ಲಿ ಪರಸ್ಪರ ಮೋಸ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಐಶ್ವರ್ಯಾ ಎರಡು ನ್ಯಾಯ
'ಐಶ್ವರ್ಯಾ ಧನುಷ್ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾಳೆ. ಆದರೆ ಮದುವೆಯ ಉದ್ದಕ್ಕೂ ಅವಳು ಅದನ್ನೇ ಮಾಡಿದ್ದಾಳೆ. ಆಕೆಗೊಂದು ನ್ಯಾಯ ಆತನಿಗೊಂದು ನ್ಯಾಯವೇ?' ಎಂದು ಸುಚಿತ್ರಾ ಪ್ರಶ್ನಿಸಿದ್ದಾರೆ. 
 

'ಐಶ್ವರ್ಯ ಧನುಷ್ ಗೆ ಮೋಸ ಮಾಡಿದ್ದಾರೆ, ಧನುಷ್ ಐಶ್ವರ್ಯಗೆ ಮೋಸ ಮಾಡಿದ್ದಾರೆ. ಅವರು ವ್ಯವಸ್ಥಿತವಾಗಿ ಪರಸ್ಪರ ಮೋಸ ಮಾಡಿಕೊಂಡಿದ್ದ ದಂಪತಿಗಳು' ಎಂದು ಸುಚಿತ್ರಾ ಹೇಳಿದ್ದಾರೆ. 

ಡೇಟಿಂಗ್ ಸಾಮಾನ್ಯವೇ?
ಮಾಜಿ ದಂಪತಿಯು ಸಣ್ಣ ಪುಟ್ಟ ಫ್ಲಿಂಗ್ ಹೊಂದಿದ್ದರು. ಆಗಾಗ ಇತರರೊಂದಿಗೆ ಡೇಟಿಂಗ್ ಹೋಗುತ್ತಿದ್ದರು. ವಿವಾಹವಾದ ಮೇಲೆ ಇತರರೊಂದಿಗೆ ಡೇಟ್ ಹೋಗುವುದು ಸಾಮಾನ್ಯ ವಿಷಯವೇ ಎಂದು ಸುಚಿತ್ರಾ ಕೇಳಿದ್ದಾರೆ. 

ಧನುಷ್ ಉತ್ತಮ ಪೋಷಕ
ಸುಚಿತ್ರಾ ಅವರು ಧನುಷ್ ಜೊತೆ ಹಲವು ವರ್ಷಗಳಿಂದ ಉತ್ತಮ ಸಂಬಂಧ ಹೊಂದಿಲ್ಲ. ಹಾಗಿದ್ದೂ ಅವರು ಮಾತಾಡುವಾಗ, ಮಕ್ಕಳಿಗೆ ಐಶ್ವರ್ಯಾಗಿಂತ ಧನುಷ್ ಉತ್ತಮ ಪೋಷಕ ಎಂದಿದ್ದಾರೆ. ಅಲ್ಲದೆ, ಐಶ್ವರ್ಯಾ ಅವರನ್ನು ಕೆಟ್ಟ ತಾಯಿ ಎಂದು ಕರೆದಿದ್ದಾರೆ. 

ಏತನ್ಮಧ್ಯೆ, ಐಶ್ವರ್ಯಾ ರಜನಿಕಾಂತ್ ಮತ್ತು ಧನುಷ್ ಅಧಿಕೃತವಾಗಿ ಚೆನ್ನೈನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಎರಡು ವರ್ಷಗಳ ಹಿಂದೆ ಬೇರ್ಪಟ್ಟಿದ್ದ ಇವರಿಬ್ಬರು ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ. ಪರಸ್ಪರ ಗೌರವವಿದ್ದರೂ ಇಬ್ಬರೂ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಜೋಡಿ ಒಪ್ಪಿಕೊಂಡು ಸೌಹಾರ್ದಯುತ ವಿಚ್ಚೇದನಕ್ಕೆ ಮುಂದಾಗಿದ್ದಾರೆ. 

Latest Videos

click me!