ಶವರ್ ಕ್ಲಿಪ್ ವೈರಲ್ ವೀಡಿಯೋ ಸ್ಟಾರ್ ನಟಿ ತಮ್ಮ ಕರಿಯರ್ ಆರಂಭಿಸಿದ್ದು ಸೈಡ್ ಆ್ಯಕ್ಟರ್ ಆಗಿ

Published : May 14, 2024, 12:40 PM IST

ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ ತ್ರಿಷಾ ಕೃಷ್ಣನ್, ಸಿನಿಮಾದಲ್ಲಿ ನಾಯಕಿಯಾಗೋ ಮುನ್ನ ಆಲ್ಬಂ ಸಾಂಗ್, ಸಿನಿಮಾದಲ್ಲಿ ಸೈಡ್ ಆಕ್ಟರ್ , ಡ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಅನ್ನೋದು ಗೊತ್ತಾ?   

PREV
17
 ಶವರ್ ಕ್ಲಿಪ್ ವೈರಲ್ ವೀಡಿಯೋ  ಸ್ಟಾರ್ ನಟಿ ತಮ್ಮ ಕರಿಯರ್ ಆರಂಭಿಸಿದ್ದು ಸೈಡ್ ಆ್ಯಕ್ಟರ್ ಆಗಿ

ದಕ್ಷಿಣ ಭಾರತದ ಟಾಪ್ ನಟಿಯರ ಸಾಲಿನಲ್ಲಿ ತ್ರಿಷಾ ಕೃಷ್ಣನ್ (Trisha Krishnan) ಕೂಡ ಒಬ್ಬರು. ತಮ್ಮ ನಟನೆ, ಸೌಂದರ್ಯದಿಂದ ತ್ರಿಷಾ ಇಂದಿಗೂ  ಬಹು ಬೇಡಿಕೆಯ ನಟಿ. ಆದರೆ ನಿಮಗೆ ಗೊತ್ತಾ? ಹೀರೋಯಿನ್ ಆಗುವ ಮುನ್ನ ಸೈಡ್ ಆಕ್ಟರ್ ಆಗಿದ್ದರು.
 

27

ತ್ರಿಷಾ ಕೃಷ್ಣನ್ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು, ಕೇವಲ 17ನೇ ವಯಸ್ಸಿನಲ್ಲಿ. ಅದು ಹೀರೋಯಿನ್ ಆಗಿ ಅಲ್ಲ, ಬದಲಿಗೆ ಒಂದು ಕಾಲದಲ್ಲಿ ಫಾಲ್ಗುಣಿ ಪಾಠಕ್ ಅವರ ಪಾಪ್ಯುಲರ್ ಆಲ್ಬಂ ಒಂದರಲ್ಲಿ ಸೈಡ್ ಡ್ಯಾನ್ಸರ್ ಆಗಿ ಕೆಲಸ ಮಾಡುವ ಮೂಲಕ ತಮ್ಮ ಕರಿಯರ್ ಆರಂಭಿಸಿದರು. 
 

37

ಸ್ಮಾಲ್ ಸ್ಕ್ರೀನ್ ನಲ್ಲಿ ನಟಿಸೋ ನಟಿಯರಿಗೆ ಬಿಗ್ ಸ್ಕ್ರೀನ್ ನಲ್ಲಿ ಅವಕಾಶ ಸಿಕ್ಕಾಗ, ಅವರು ತಮ್ಮ ಅದ್ಭುತ ನಟನೆಯಿಂದ ಜನರ ಹೃದಯ ಗೆಲ್ಲುತ್ತಾರೆ.  ಅಪರಾಧ ಮನೋವಿಜ್ಞಾನದಲ್ಲಿ (Criminal Psychology) ವೃತ್ತಿಜೀವನ ಮಾಡಲು ಬಯಸಿದ್ದ ತ್ರಿಷಾ ಕೃಷ್ಣನ್ ತಮ್ಮ 17ನೇ ವಯಸ್ಸಿನಲ್ಲಿ ತಮ್ಮ ನಟನಾ ಕರಿಯರ್ (career) ಆರಂಭಿಸಿ, ಇಂದು ಹೇಗೆ ದಕ್ಷಿಣ ಭಾರತದ ಟಾಪ್ ನಟಿಯಾಗಿದ್ದಾರೆ ನೋಡೋಣ.  
 

47

ಮತ್ತೊಂದೆಡೆ, ನೀವು ಫಾಲ್ಗುಣಿ ಪಾಠಕ್ (Palguni Pathak) ಅವರ ಪ್ರಸಿದ್ಧ ಹಾಡನ್ನು ಖಂಡಿತಾ ಕೇಳಿರುತ್ತೀರಿ. ಅದರಲ್ಲೂ ಪ್ರೇಕ್ಷಕರು 'ಮೇರಿ ಚುನಾರ್ ಉಡ್-ಉಡ್-ಉಡ್ ಜಾಯೆ' ಹಾಡನ್ನು ಎಷ್ಟು ಇಷ್ಟ ಪಟ್ಟರೆಂಬುವುದು ನಿಮಗೆ ನೆನಪಿರಬಹುದು. ಈ ಹಾಡಿನಲ್ಲಿ ತ್ರಿಷಾ ಕೃಷ್ಣನ್ ಕೂಡ ನಟಿಸಿದ್ದರು. ಮುಖ್ಯ ಪಾತ್ರವಲ್ಲದಿದ್ದರೂ ಸಣ್ಣ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. 

57

ಬಳಿಕ ಸಿನಿಮಾಗಳಲ್ಲಿ, ನಾಯಕಿಯ ಗೆಳತಿಯರಾಗಿಯೂ ಸಣ್ಣ ಪುಟ್ಟ ಪಾತ್ರದಲ್ಲಿ ತ್ರಿಷಾ ನಟಿಸಿದ್ದರು. ಈಗ ದಕ್ಷಿಣದ ದೊಡ್ಡ ಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ತ್ರಿಷಾಗೆ ಮೊದಲ ಬಾರಿಗೆ ನಾಯಕಿಯಾಗಿ 'ಲೇಸಾ-ಲೇಸಾ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಚಿತ್ರದ ನಂತರ, ಅವರು ಅನೇಕ ತಮಿಳು ಮತ್ತು ತೆಲುಗು ಹಿಟ್ ಸಿನಿಮಾಗಳನ್ನು ನೀಡಿದ್ದರು. ಇದಲ್ಲದೆ, ಅವರು ಬಾಲಿವುಡ್ ಚಿತ್ರ 'ಖಟ್ಟಾ ಮೀಥಾ' ದಲ್ಲಿ ಕಾಣಿಸಿಕೊಂಡರು. ಇಂದಿಗೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ ಈ ನಟಿ. 
 

67

ತ್ರಿಷಾ ಕೃಷ್ಣನ್ ಹಲವು ವಿವಾದಗಳಲ್ಲಿ ಸಿಲುಕಿ ಹಾಕಿಕೊಂಡಿದ್ದರು. ಇವರ ಶವರ್ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ (social media) ವೈರಲ್ ಆಗಿತ್ತು. ಇದು 2010 ರದ್ದು, ಈ ವೀಡಿಯೊದಲ್ಲಿ, ಸ್ನಾನ ಮಾಡುತ್ತಿರುವ ಮಹಿಳೆ ತ್ರಿಷಾ ಅವರಂತೆ ಕಾಣಿಸುತ್ತಿದ್ದರು, ಬಳಿಕ ಇದು ಫೇಕ್ ವಿಡಿಯೋ, ಯಾರೋ ಬೇಕಂತಲೇ ಮಾಡಿದ್ದು ಅನ್ನೋದು ತಿಳಿದು ಬಂದಿತ್ತು. 

77

ಸದ್ಯ ತಮಿಳು, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತ್ರಿಷಾ ಕೈಯಲ್ಲಿ ಐದು ಸಿನಿಮಾಗಳಿವೆ. ವಿದಾ ಮುಯರ್ಚಿ, ರಾಮ್, ಐಡೆಂಟಿಟಿ, ಥಗ್ ಲೈಫ್ (Thug Life), ವಿಶ್ವಂಭರ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಈ ವರ್ಷ ಮುಂದಿನ ವರ್ಷ ತ್ರಿಷಾ ಫ್ಯಾನ್ಸ್ ಗಳು ತಮ್ಮ ನೆಚ್ಚಿನ ನಟಿಯ ಸಾಲು ಸಾಲು ಸಿನಿಮಾಗಳನ್ನು ನೋಡಬಹುದು.  

Read more Photos on
click me!

Recommended Stories