ರಶ್ಮಿಕಾ ಮಂದಣ್ಣರನ್ನ ಡಾರ್ಲಿಂಗ್‌ ಎಂದು ಹಾಡಿ ಹೊಗಳತ್ತಿರುವ ವಿಜಯ್ ದೇವರಕೊಂಡ!

First Published | Sep 30, 2023, 4:54 PM IST

ರಶ್ಮಿಕಾ ಮಂದಣ್ಣ  (Rashmika Mandanna) ಮತ್ತು ವಿಜಯ್‌ ದೇವರಕೊಂಡ (Vijay Devarakonda) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ರೂಮರ್‌ ಜೋಡಿಗಳು ಸೋಶಿಯಲ್‌ ಮೀಡಿಯಾದಲ್ಲಿ  ಪರಸ್ಪರ ಪ್ರೀತಿಯ ಸಂಭಾಷಣೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅದರ ಜೊತೆಗೆ ವಿಜಯ್‌ ಅವರು ರಶ್ಮಿಕಾ ಅವರನ್ನು ಡಾರ್ಲಿಂಗ್‌ ಎಂದು ಉಲ್ಲೇಖಿಸಿರುವುದು ಸಖತ್‌ ವೈರಲ್‌ ಆಗಿದೆ.

ಸೆಪ್ಟೆಂಬರ್ 28 ರಂದು, ರಣಬೀರ್ ಕಪೂರ್  ಆಭಿನಯದ  ಆನಿಮಲ್‌ ಟೀಸರ್ ಬಿಡುಗಡೆಯಾಯಿತು.  ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ   ರಣಬೀರ್ ಅವರ ಲವ್‌ ಇಂಟರೆಸ್ಟ್‌ ಆಗಿ   ಗೀತಾಂಜಲಿ ಪಾತ್ರ ನಿರ್ವಹಿಸುತ್ತಿದ್ದಾರೆ.

Tap to resize

ಅನಿಮಲ್ ಟೀಸರ್‌ನಲ್ಲಿ ರಶ್ಮಿಕಾ ಮಂದಣ್ಣ ಅವರ ಪಾತ್ರವು  ಅವರ ಬಾಯ್ ಫ್ರೆಂಡ್ ಎಂದು ವದಂತಿಗಳಿರುವ ವಿಜಯ್ ದೇವರಕೊಂಡ ಅವರನ್ನು ಸಂಪೂರ್ಣವಾಗಿ ಗೆದ್ದಿದೆ.

 X ಸೋಸಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ನಲ್ಲಿ,  ವಿಜಯ್‌ ದೇವರಕೊಂಡ ಟೀಸರ್ ಅನ್ನು ಪೋಸ್ಟ್ ಮಾಡಿದರು ಮತ್ತು ರಶ್ಮಿಕಾ ಮಂದಣ್ಣ ಮತ್ತು ನಿರ್ದೇಶಕರಿಗೆ ಚಲನಚಿತ್ರದೊಂದಿಗೆ ಶುಭ ಹಾರೈಸಿದರು. ರಣಬೀರ್ ಕಪೂರ್‌ಗೆ  ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

'ನನ್ನ ಡಾರ್ಲಿಂಗ್ಸ್‌ಗೆ @imvangasandeep @iamRashmika ಮತ್ತು ನನ್ನ ಮೆಚ್ಚಿನ RKಗೆ ಶುಭ ಹಾರೈಸುತ್ತೇನೆ ಮತ್ತು ಜನ್ಮದಿನದ ಶುಭಾಶಯಗಳು! ಎಂದು ವಿಜಯ್‌ ದೇವರಕೊಂಡ ಬರೆದಿದ್ದಾರೆ.

'ಥ್ಯಾಂಕ್ಯೂ @TheDeverakonda. You be the bestestestttttt!' ಎಂದು ರಶ್ಮಿಕಾ ಮಂದಣ್ಣ  ವಿಜಯ್‌ ಅವರಿಗೆ ಉತ್ತರಿಸಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರ ಈ ಸಂಭಾಷಣೆ ಎಲ್ಲರ ಗಮನ ಸೆಳೆದಿದ್ದು, ಮತ್ತೊಮ್ಮೆ ಅವರ ಸಂಬಂಧದ ರೂಮರ್‌ಗಳಿಗೆ ಪುಷ್ಠಿ ನೀಡಿದಂತಾಗಿದೆ.

ವಿಜಯ್ ದೇವರಕೊಂಡ  ಈ ಹಿಂದೆ ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ಅರ್ಜುನ್ ರೆಡ್ಡಿಯಲ್ಲಿ ಕೆಲಸ ಮಾಡಿದ್ದಾರೆ, ಇದು ಅವರ ವೃತ್ತಿಜೀವನದ ಅತಿದೊಡ್ಡ ಹಿಟ್‌ಗಳಲ್ಲಿ ಒಂದಾಗಿದೆ. 

ವಿಜಯ್ ದೇವರಕೊಂಡ ಅವರು   ರಶ್ಮಿಕಾ ಮಂದಣ್ಣ ಅವರೊಂದಿಗೆ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಹಾಗೂ ಈ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಬಹಳ ಸಮಯದಿಂದ ಚರ್ಚೆಯಲ್ಲಿದೆ.

ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ರಣಬೀರ್ ಕಪೂರ್ ಪ್ರೀತಿ ಗೀತಾಂಜಲಿ ಪಾತ್ರದಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ಕಳೆದ ವಾರ  ಚಿತ್ರದ ತನ್ನ ಪಾತ್ರದ ಪೋಸ್ಟರ್ ಅನ್ನು ಹಂಚಿಕೊಂಡು 'ನಿಮ್ಮ ಗೀತಾಂಜಲಿ' ಎಂದು  ಬರೆದಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಗೀತ ಗೋವಿಂದಂ, ಡಿಯರ್ ಕಾಮ್ರೇಡ್, ಕಿರಿಕ್ ಪಾರ್ಟಿ, ಚಮಕ್, ಅಂಜನಿ ಪುತ್ರ, ಸೀತಾ ರಾಮಂ, ವರಿಸು,  ಪುಷ್ಪ: ದಿ ರೈಸ್ ಮತ್ತು ಸರಿಲೇರು ನೀಕೆವ್ವರು ಮುಂತಾದ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ.

ರಶ್ಮಿಕಾ ಮಂದಣ್ಣ ಮುಂಬರುವ ದಿನಗಳಲ್ಲಿ ಬ್ಯುಸಿ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಆನಿಮಲ್‌ ಹೊರತು ಪಡಿಸಿ ನಟಿ  ಪುಷ್ಪ 2, ರೈನ್ಬೋ, ಮತ್ತು D51 ಚಿತ್ರಗಳಲ್ಲಿ ಧನುಷ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.
 

गोल्ड प्लेटेड kundan और pearl के हैवी झुमके फेस्टिवल में खूब चलते हैं

ರಶ್ಮಿಕಾ ಮಂದಣ್ಣ ಕಳೆದ ವರ್ಷ ಗುಡ್‌ಬೈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.ನಂತರ  ಈ ವರ್ಷ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನುನಲ್ಲಿ ಕಾಣಿಸಿಕೊಂಡರು. 

स्टोन के मैचिंग झुमके सेम कलर ऑउटफिट के साथ बहुत सुंदर लगेंगे

ರಶ್ಮಿಕಾ ಮಂದಣ್ಣ ಮುಂಬರುವ ದಿನಗಳಲ್ಲಿ ಬ್ಯುಸಿ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಆನಿಮಲ್‌ ಹೊರತು ಪಡಿಸಿ ನಟಿ  ಪುಷ್ಪ 2, ರೈನ್ಬೋ, ಮತ್ತು D51 ಚಿತ್ರಗಳಲ್ಲಿ ಧನುಷ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!