ಮೂರು ಮಕ್ಕಳ ತಾಯಿ ಸ್ಟಾರ್ ನಟಿ ರಂಭಾ ಸೌಂದರ್ಯದಲ್ಲಿ ಇಂದಿಗೂ ಅಪ್ಸರೆ!

Published : Sep 30, 2023, 03:21 PM IST

90 ರದಶಕದಲ್ಲಿ ಏಳು ಭಾಷೆಗಳಲ್ಲಿ ಮಿಂಚಿದ ನಟಿ ರಂಭಾ ಮದುವೆಯಾಗಿ ಮೂರು ಮಕ್ಕಳಾದ ಬಳಿಕ ಸಿನಿಮಾರಂಗದಿಂದಲೇ ದೂರವಾದರು. ಈಗ ಇವರೆಲ್ಲಿದ್ದಾರೆ? ಏನು ಮಾಡ್ತಿದ್ದಾರೆ ನೋಡೋಣ.   

PREV
110
ಮೂರು ಮಕ್ಕಳ ತಾಯಿ ಸ್ಟಾರ್ ನಟಿ ರಂಭಾ ಸೌಂದರ್ಯದಲ್ಲಿ ಇಂದಿಗೂ ಅಪ್ಸರೆ!

90 ರ ದಶಕದಲ್ಲಿ ಕನ್ನಡ, ತಮಿಳು, ಮಲಯಾಲಂ, ತೆಲುಗು ಸೇರಿ ಏಳು ಚಿತ್ರರಂಗದಲ್ಲಿ ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಮೋಡಿ ಮಾಡಿದ ನಟಿ ರಂಭಾ. ಸೌಂದರ್ಯಕ್ಕೆ ಇನ್ನೊಂದು ಹೆಸರು ರಂಭಾ (Rambha) ಎನ್ನಬಹುದು. ಅಂತಹ ಬ್ಯೂಟಿ ಇವರದ್ದು.
 

210

ರಂಭಾ ಸಿನಿರಂಗದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿ ಇರುವಾಗಲೇ ಮದುವೆಯಾಗಿ, ನಂತರ ಸಿನಿಮಾರಂಗವನ್ನು ಶಾಶ್ವತವಾಗಿ ತೊರೆದರು. ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕಂತೂ ದೂರದ ಟೊರೆಂಟೋದಲ್ಲಿ  ಫ್ಯಾಮಿಲಿ ಜೊತೆ ಸೆಟಲ್ ಆಗಿದ್ದಾರೆ.
 

310

2010 ರಲ್ಲಿ ಶ್ರೀಲಂಕಾ ಮೂಲದ ಕೆನಾಡದ ಬ್ಯುಸಿನೆಸ್ ಮದುವೆಯಾಗಿ ಇಬ್ಬರು ಪುತ್ರಿಯರು ಮತ್ತು ಒಬ್ಬ ಮಗನ ಜೊತೆ ಟೊರೆಂಟೋದಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಮಗನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, (birthday celebration)  ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.
 

410

ರಂಭಾ ಬಗ್ಗೆ ಹೇಳೊದಾದ್ರೆ ಇವರು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ವಿಜಯಲಕ್ಷ್ಮಿ (Vijayalakshmi). 1992 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ `ಸರ್ಗಂ' ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟ  ವಿಜಯಲಕ್ಷ್ಮಿ ಅದೇ ವರ್ಷದಲ್ಲಿ ತೆರೆಕಂಡ ತೆಲುಗು ಚಿತ್ರ `ಆ ಒಕ್ಕಟಿ ಅಡಕ್ಕು' ಚಿತ್ರದಲ್ಲಿನ `ರಂಭಾ' ಪಾತ್ರದಿಂದ ಗಮನ ಸೆಳೆದರು. ಮುಂದೆ ಈ ಪಾತ್ರದ ಹೆಸರೇ ಇವರ ಹೆಸರಾಯಿತು.
 

510

ಕನ್ನಡ,ತೆಲುಗು,ತಮಿಳು,ಮಲಯಾಳಂ,ಹಿಂದಿ,ಭೋಜಪುರಿ,ಬೆಂಗಾಳಿ ಭಾಷೆಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಂಭಾ ಕೆಲವು ಕಿರುತೆರೆ ಶೋಗಳಲ್ಲಿ ಜಡ್ಜ ಆಗಿಯೂ ಕೆಲಸ ಮಾಡಿದ್ದಾರೆ.
 

610

ಕನ್ನಡ ಚಿತ್ರರಂಗದಲ್ಲಿ ಜಗ್ಗೇಶ್ ಜೊತೆಗೆ `ಸರ್ವರ್ ಸೋಮಣ್ಣ' ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಇವರು ನಂತರ ಓ ಪ್ರೇಮವೇ, ಭಾವ ಭಾಮೈದ', ಸಾಹುಕಾರ, ಪಾಂಡುರಂಗ ವಿಠ್ಠಲ, ಗಂಡುಗಲಿ ಕುಮಾರರಾಮ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
 

710

47 ನೇ ವಯಸ್ಸಲ್ಲೂ ಸಹ ಅದೇ ಚಾರ್ಮ್ ಉಳಿಸಿಕೊಂಡಿರುವ ರಂಭಾ ನೋಡಿದ್ರೆ, ಈವಾಗ್ಲೂ  ಅದೇ ಹೀರೋಯಿನ್ ಲುಕ್ ಕಾಣಿಸುತ್ತೆ. ಯಾರು ಸಹ ಇವರನ್ನು ಮೂರು ಮಕ್ಕಳ ತಾಯಿ ಎಂದು ಹೇಳಲು ಸಾಧ್ಯವೇ ಇಲ್ಲ. 
 

810

ಕೆಲವು ಸಮಯದ ಹಿಂದೆ ಇವರು ಸಂಸಾರದ ವಿಷಯದಲ್ಲಿ ಸುದ್ದಿಯಾಗಿದ್ದರು. ಇವರ ಗಂಡ ಇಂದ್ರ ಕುಮಾರ್ ಗೆ ಈಗಾಗಲೇ ಮದುವೆಯಾಗಿದೆ. ರಂಭಾಗೆ ಮೋಸ ಆಗಿದೆ. ಇಬ್ಬರು ಸದ್ಯದಲ್ಲೇ ಡಿವೋರ್ಸ್ ತೆಗೆದುಕೊಳ್ಳಲಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆದರೆ ರಂಭಾ ಇದೆಲ್ಲಾ ಫೇಕ್ ನ್ಯೂಸ್ ನಾವಿಬ್ಬರು ಚೆನ್ನಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದರು. 
 

910

ವಿದೇಶದಲ್ಲಿದ್ದರೂ ಸಹ ರಂಭಾ, ಯಾವಾಗಲೂ ಭಾರತೀಯ ಸಂಸ್ಕೃತಿಗಳನ್ನು ಪಾಲಿಸುವ ಮೂಲಕ ಸಹ ಸುದ್ದಿಯಲ್ಲಿರುತ್ತಾರೆ. ಹಬ್ಬಗಳ ಆಚರಣೆ, ಮಕ್ಕಳಿಗೆ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಸಹ ಕಲಿಸಿದ್ದಾರೆ. ಅವರು ಹಾಡುವ ವಿಡಿಯೋಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. 
 

1010

ಸೋಶಿಯಲ್ ಮೀಡಿಯಾದಲ್ಲಿ (social media) ಸದಾ ಸಕ್ರಿಯರಾಗಿರುವ ನಟಿ ರಂಭಾ ಹೆಚ್ಚಾಗಿ ತಮ್ಮ ಗಂಡ, ಮಕ್ಕಳ ಜೊತೆಗಿನ ಮುದ್ದಾದ ಫೋಟೋಗಳನ್ನು ಶೆರ್ ಮಾಡುತ್ತಿರುತ್ತಾರೆ. ರಂಭಾ ಹಿರಿಯ ಮಗಳನ್ನು ನೋಡಿ, ಅಮ್ಮನ ಝೆರಾಕ್ಸ್ ಕಾಪಿ ಎಂದು ಜನ ಹೊಗಳುತ್ತಿದ್ದಾರೆ. 
 

Read more Photos on
click me!

Recommended Stories