ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವೈರಲ್ ವೀಡಿಯೋ; ಮೌನ ಮುರಿದ ವಿಜಯ್ ದೇವರಕೊಂಡ

First Published | Nov 8, 2023, 5:21 PM IST

ಒಂದೆರಡು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ (Rashmika Mzndanna) ಅವರ  ಡೀಪ್‌ಫೇಕ್ ವೀಡಿಯೊವನ್ನು ಅಂತರ್ಜಾಲದಲ್ಲಿ ವೈರಲ್‌ ಆಗಿದ್ದು ಸಾಕಷ್ಟು ಸದ್ದು ಮಾಡಿದೆ. ಇದರ ವಿರುದ್ಧ ಹಲವು ಸೆಲೆಬ್ರಿಟಿಗಳು ಧ್ವನಿ ಎತ್ತಿ ರಶ್ಮಿಕಾಗೆ ಬೆಂಬಲ ಸೂಚಿಸಿದ್ದರು. ಈಗ ರಶ್ಮಿಕಾರ ರೂಮರ್ಡ್‌ ಬಾಯ್‌ಫ್ರೆಂಡ್‌ ಎನ್ನಲಾದ ನಟ ವಿಜಯ್‌ ದೇವರಕೊಂಡ (Vijay Devarakonda) ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 
 

ರಶ್ಮಿಕಾ ಮಂದಣ್ಣ  ಆಕೆಯ ಗೆಳೆಯ ಎನ್ನಲಾಗುತ್ತಿರುವ ವಿಜಯ್ ದೇವರಕೊಂಡ ಅಂತಿಮವಾಗಿ ವೈರಲ್ ಡೀಪ್‌ಫೇಕ್ ವೀಡಿಯೊಗೆ ಪ್ರತಿಕ್ರಿಯಿಸಿ, ಇನ್ಸ್ಟಾಗ್ರಾಮ್ ಸ್ಟೋರಿಯನ್ನೂ ಪೋಸ್ಟ್ ಮಾಡಿದ್ದಾರೆ.

ವಿಜಯ್ ದೇವರಕೊಂಡ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಡೀಪ್‌ಫೇಕ್‌ ಬಗ್ಗೆ  ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ Instagram ಸ್ಟೋರಿಯಲ್ಲಿ ಇದರ ಬಗ್ಗೆ ಹಂಚಿಕೊಂಡಿದ್ದಾರೆ.

Tap to resize

ಯಾರೊಂದಿಗೂ ಹೀಗಾಗಬಾರದು ಎಂದು ಪ್ರಸ್ತಾಪಿಸಿದ ವಿಜಯ್‌  ಅವರು, ಇಂತಹ ವಿಡಿಯೋ ಮಾಡುವವರ ವಿರುದ್ಧ ಕಠಿಣ ಕ್ರಮ ಮತ್ತು ಶಿಕ್ಷೆಗೆ ಆಗ್ರಹಿಸಿ ಪೋಸ್ಟ್ ಮಾಡಿದ್ದಾರೆ. 
 

'ಭವಿಷ್ಯಕ್ಕಾಗಿ ಅಗತ್ಯ ಮತ್ತು ಪ್ರಮುಖ ಕ್ರಮಗಳು. ಇದು ಯಾರಿಗೂ ಆಗಬಾರದು. ಅಲ್ಲದೆ, ತ್ವರಿತ ಕ್ರಮ ಅಹಗೂ ಶಿಕ್ಷೆಗಾಗಿ ಎಲ್ಲರಿಗೂ ಲಭ್ಯವಾಗುವ ಸಮರ್ಥ  ಸೈಬರ್ ವಿಂಗ್ ಇರಬೇಕು. ಇದರಿಂದ ಜನರು ಹೆಚ್ಚು ಸುರಕ್ಷಿತವಾಗಿರುತ್ತಾರೆ ಎಂದು ವಿಜಯ್‌ ದೇವರಕೊಂಡ ಬರೆದಿದ್ದಾರೆ. 

ರಶ್ಮಿಕಾ ಮಂದಣ್ಣ ಅವರ ಮಾರ್ಫಡ್  ವೀಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವಿಡಿಯೋ ತಕ್ಷಣವೇ ವೈರಲ್ ಆಗಿತ್ತು. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊ  ಡೀಪ್‌ಫೇಕ್‌ ಎಂದು ಸ್ಪಷ್ಟಪಡಿಸಿದರು. ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಕಠಿಣ ಕಾನೂನು ಕ್ರಮಕ್ಕೆ ಆದೇಶಿಸಿದ ನಂತರ ಇದು ನೆಟಿಜನ್‌ಗಳ ಗಮನ ಈ ಕಡೆ ಸೆಳೆಯಿತು.

'ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗಿದೆ ಮತ್ತು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿರುವ ಮತ್ತು ಹರಡುತ್ತಿರುವ ನನ್ನ ಡೀಪ್‌ಫೇಕ್ ವೀಡಿಯೊದ ಬಗ್ಗೆ ಮಾತನಾಡಬೇಕಾಗಿದೆ. ನನಗೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರಿಗೂ ಇಂಥದ್ದು ತುಂಬಾ ಭಯಾನಕವಾಗಿದೆ. ಅವರು ಇಂದು ತುಂಬಾ ಹಾನಿಗೆ ಗುರಿಯಾಗುತ್ತಾರೆ. ತಂತ್ರಜ್ಞಾನವು ಈಗ ಹೇಗೆ ಅತಿರೇಕವಾಗಿ ದುರುಪಯೋಗವಾಗುತ್ತಿದೆ. ಇಂದು ಮಹಿಳೆ ಮತ್ತು ನಟಿಯಾಗಿ ನನ್ನ ಬೆಂಬಲಕ್ಕೆ ಹಾಗು ರಕ್ಷಣೆಗೆ ಕುಟುಂಬದ ಸದಸ್ಯರು, ಸಿನಿ ಸಹೋದ್ಯೋಗಿಗಳು ಸೇರಿ ಹಲವರು ಇದ್ದಾರೆ. ಎಲ್ಲ ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಆದರೆ ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ನನಗೆ ಇದು ಸಂಭವಿಸಿದರೆ, ನಾನು ಇದನ್ನು ಹೇಗೆ ನಿಭಾಯಿಸಬಹುದೆಂದು ನನಗೆ ನಿಜವಾಗಿ ಊಹಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಹೆಚ್ಚಿನವರು ಇದರಿಂದ ಪ್ರಭಾವಿತರಾಗುವ ಮೊದಲು ನಾವು ಇದನ್ನು ಸಮುದಾಯವಾಗಿ ಮತ್ತು ತುರ್ತುಸ್ಥಿತಿಯೊಂದಿಗೆ ಪರಿಹರಿಸಬೇಕಾಗಿದೆ,' ಎಂದು ಅವರು ತಮ್ಮ Instagram ಸ್ಟೋರಿಯಲ್ಲಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿ ಬರೆದಿದ್ದಾರೆ.

Latest Videos

click me!