'ಡರ್ಟಿ ಪಿಕ್ಚರ್‌'ನಲ್ಲಿ ಬೆತ್ತಲಾಗಿದ್ದ ವಿದ್ಯಾ ಬಾಲನ್‌, ಸಿಲ್ಕ್ ಸ್ಮಿತಾ ಪಾತ್ರ ಮಾಡಿದ ನಂತರ ಜೀವನಾನೇ ಬದಲಾಯ್ತಂತೆ!

Published : Sep 10, 2023, 11:29 AM IST

ಡರ್ಟಿ ಪಿಕ್ಚರ್‌ನಲ್ಲಿ, ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಮಾದಕವಾಗಿ ನಟಿಸಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ನಟಿ ವಿದ್ಯಾಬಾಲನ್‌. ತೆರೆಯಲ್ಲಿ ಬೆತ್ತಲಾಗಿದ್ದ ನಟಿಯ ಬೋಲ್ಡ್‌ ಲುಕ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಸದ್ಯ ಈ ನಟಿ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

PREV
18
'ಡರ್ಟಿ ಪಿಕ್ಚರ್‌'ನಲ್ಲಿ ಬೆತ್ತಲಾಗಿದ್ದ ವಿದ್ಯಾ ಬಾಲನ್‌, ಸಿಲ್ಕ್ ಸ್ಮಿತಾ ಪಾತ್ರ ಮಾಡಿದ ನಂತರ ಜೀವನಾನೇ ಬದಲಾಯ್ತಂತೆ!

ಬಾಲಿವುಡ್ ನಟಿ ವಿದ್ಯಾಬಾಲನ್‌ ಸಣ್ಣಪುಟ್ಟ ಪಾತ್ರಗಳಿಂದ ತೊಡಗಿ ಈಗ ಹಿಂದಿ ಸಿನಿಮಾಗಳಲ್ಲಿ ಫಿಮೇಲ್ ಲೀಡ್ ರೋಲ್ ಮಾಡುತ್ತಿರುವ ನಟಿ. ಬಂಗಾಳಿ ಚಿತ್ರರಂಗಕ್ಕೆ ತೆರಳುವ ಮೊದಲು ದೂರದರ್ಶನದಲ್ಲಿ ವೃತ್ತಿ ಜೀವನ ಪ್ರಾರಂಭಿಸಿದರು. 27 ವರ್ಷದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

28

ಇದನ್ನು ಅನೇಕರು ಚಲನಚಿತ್ರದಲ್ಲಿ ಲೇಟ್ ಎಂದು ಪರಿಗಣಿಸುತ್ತಾರೆ. ಆದರೆ ಅಂದಿನಿಂದ, ವಿದ್ಯಾ ಬಾಲನ್‌ 100 ಕೋಟಿ ಹಿಟ್‌ಗಳನ್ನು ನೀಡಿದ್ದಾರೆ, ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಫಿಮೇಲ್ ಲೀಡ್‌ ಚಲನಚಿತ್ರಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ.

38

ವಿದ್ಯಾ ಬಾಲನ್‌ಗೆ ತಾವು ಅಭಿನಯಿಸಿದ ಸಿನಿಮಾಗಳಲ್ಲಿ ಅತೀ ಮೆಚ್ಚುಗೆಯಾದ ಪಾತ್ರ ಯಾವುದು ಎಂದು ಕೇಳಿದರೆ, ಬಹುತೇಕರು ಅವರ ಹಿಂದಿ ಚೊಚ್ಚಲ ಸಿನಿಮಾ ಪರಿಣೀತಾ ಅಥವಾ ಭೂಲ್ ಭುಲೈಯಾ ಎಂದು ಸೂಚಿಸುತ್ತಾರೆ. ಆದರೆ 2011 ರ ಹಿಟ್ ದಿ ಡರ್ಟಿ ಪಿಕ್ಚರ್‌ನಲ್ಲಿ ಸಿಲ್ಕ್ ಪಾತ್ರವು ತನ್ನ ಜೀವನವನ್ನು ಮತ್ತು ಬಾಲಿವುಡ್‌ನ ಅನೇಕ ನಟಿಯರ ಜೀವನವನ್ನು ಬದಲಿಸಿದ ಪಾತ್ರ ಎಂದು ವಿದ್ಯಾ ಹೇಳುತ್ತಾರೆ.

48

'ದಿ ಡರ್ಟಿ ಪಿಕ್ಚರ್ ನನ್ನ ಜೀವನವನ್ನು ಮಾತ್ರವಲ್ಲದೆ ಹಿಂದಿ ಚಲನಚಿತ್ರ ನಾಯಕಿಯರ ಕುರಿತಾದ ಅಭಿಪ್ರಾಯವನ್ನು ಬದಲಿಸಿದ ಪಾತ್ರ ಎಂದು ನಾನು ಖಂಡಿತವಾಗಿ ಭಾವಿಸುತ್ತೇನೆ' ಎಂದು ನಟಿ ಹೇಳುತ್ತಾರೆ. ಐಟಂ ಡ್ಯಾನ್ಸರ್ ಸಿಲ್ಕ್ ಸ್ಮಿತಾ ಅವರ ಜೀವನದಿಂದ ಸ್ಫೂರ್ತಿ ಪಡೆದ ಡರ್ಟಿ ಪಿಚ್ಚರ್ ಚಿತ್ರದಲ್ಲಿ ವಿದ್ಯಾ ಅವರು ಮೊದಲ ಬಾರಿಗೆ ಮನಮೋಹಕ ಪಾತ್ರವನ್ನು ನಿರ್ವಹಿಸಿದ್ದಾರೆ. 

58

ಮೊದಲಿಗೆ ವಿದ್ಯಾ ಬಾಲನ್ ಅವರಂಥಹಾ ಗಂಭೀರ ನಟಿ ಸಿಲ್ಕ್‌ ಪಾತ್ರದಲ್ಲಿ ನಟಿಸಬಹುದೇ ಎಂದು ಹಲವರು ಅನುಮಾನಿಸಿದ್ದರು. ಆದರೆ ವಿದ್ಯಾ ಸ್ಪಲ್ಪವೂ ತಲೆಕೆಡಿಸಿಕೊಳ್ಳಲ್ಲಿಲ್ಲ. 'ನಾನು ಆ ಪಾತ್ರವನ್ನು ನಿರ್ವಹಿಸಬಹುದೆಂದು ನನಗೆ ತಿಳಿದಿತ್ತು ಮತ್ತು ಚಿತ್ರ ಮುಗಿದ ಬಳಿಕ ಅದು ಎಲ್ಲರಿಗೂ ಸಂಪೂರ್ಣವಾಗಿ ಮನವರಿಕೆಯಾಯಿತು' ಎಂದು ತಿಳಿಸಿದ್ದಾರೆ. 

68

ಮಿಲನ್ ಲುಥ್ರಿಯಾ ನಿರ್ದೇಶಿಸಿದ ಈ ಚಿತ್ರವು 117 ಕೋಟಿ ರೂ.ಗೂ ಹೆಚ್ಚು ಗಳಿಸಿತು, 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಮೊದಲ ಮಹಿಳಾ ನಾಯಕತ್ವದ ಹಿಂದಿ ಚಲನಚಿತ್ರ ಎಂದು ಕರೆಸಿಕೊಂಡಿತು. ಚಿತ್ರದ ಯಶಸ್ಸು ತನ್ನ ಮತ್ತು ಇತರ ನಟಿಯರನ್ನು ಗಲ್ಲಾಪೆಟ್ಟಿಗೆಯಲ್ಲಿ ಸಕ್ಸಸರ್‌ ಎಂದು ಪರಿಗಣಿಸಲು ದಾರಿ ಮಾಡಿಕೊಟ್ಟಿತು ಎಂದು ವಿದ್ಯಾ ಹೇಳುತ್ತಾರೆ.

78

'ಈ ಚಿತ್ರದ ಯಶಸ್ಸಿನಿಂದ ಇದ್ದಕ್ಕಿದ್ದಂತೆ ಮಹಿಳಾ ನಟಿಯನ್ನು ಸಹ ಲೀಡ್ ರೋಲ್ ಮಾಡಬಹುದು ಎಂಬುದನ್ನು ಜನರು ಅರಿತುಕೊಂಡರು. ಜನರು ಸ್ತ್ರೀ ಕಥೆಗಳನ್ನು ಬರೆಯಲು, ತಯಾರಿಸಲು ಮತ್ತು ಹೇಳಲು ಹೆಚ್ಚು ಹೂಡಿಕೆ ಮಾಡಲು ಪ್ರಾರಂಭಿಸಿದರು.' ಎನ್ನುತ್ತಾರೆ ವಿದ್ಯಾ.

88

ಡರ್ಟಿ ಪಿಕ್ಚರ್‌ನಲ್ಲಿ ಇಮ್ರಾನ್ ಹಶ್ಮಿ, ನಾಸಿರುದ್ದೀನ್ ಶಾ ಮತ್ತು ತುಷಾರ್ ಕಪೂರ್ ಕೂಡ ನಟಿಸಿದ್ದಾರೆ. ಈ ಚಿತ್ರವು ವಿದ್ಯಾಗೆ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದೆ. ನಟಿ ಮುಂದಿನ ವರ್ಷ ಕಹಾನಿಯಲ್ಲಿ ಮತ್ತೊಂದು ಮಹಿಳಾ ನಾಯಕತ್ವದ ಹಿಟ್ ಅನ್ನು ನೀಡಿದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories