ಟಾಪ್‌ ನಟಿಯಾದರೇನು, ಕತ್ರೀನಾಗೂ ಮಗು ಮಾಡಿಕೊಳ್ಳಲು ತಪ್ಪಿಲ್ಲ ಫ್ಯಾಮಿಲಿ ಪ್ರೇಷರ್!

Published : Sep 09, 2023, 01:04 PM ISTUpdated : Sep 09, 2023, 05:55 PM IST

ವಿಕ್ಕಿ ಕೌಶಲ್  (Vicky Kaushal) ತನ್ನ ಅಸಾಧಾರಣ ನಟನಾ ಕೌಶಲ್ಯ ಮತ್ತು ಡೌನ್ ಟು ಅರ್ಥ್ ಸ್ವಭಾವದಿಂದ ಫ್ಯಾನ್ಸ್‌ ಹೃದಯ ಗೆದ್ದಿದ್ದಾರೆ. ಅವರು 2018 ರಲ್ಲಿ ಕತ್ರಿನಾ ಕೈಫ್ (katrina Kaif) ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು, ಮತ್ತು ಅಂತಿಮವಾಗಿ, ಡಿಸೆಂಬರ್ 2021 ರಲ್ಲಿ ಇಬ್ಬರೂ ವಿವಾಹವಾದರು. ಅಂದಿನಿಂದ, ದಂಪತಿ ತಮ್ಮ ಪರಸ್ಪರರ ಪ್ರೀತಿಯಿಂದ  ಮತ್ತು ತಮ್ಮ ನಡುವಿನ ಕೆಮಿಸ್ಟ್ರಿಯಿಂದ ಎಲ್ಲರನ್ನು ಸೆಳೆಯುತ್ತಿದ್ದಾರೆ. ಇತೀಚಿನ ಸಂದರ್ಶನದಲ್ಲಿ ವಿಕ್ಕಿ ಕೌಶಲ್ ತನ್ನ ಕುಟುಂಬವು ತನಗೆ ಮತ್ತು ಕತ್ರಿನಾ ಕೈಫ್‌ಗೆ ಮಗುವನ್ನು ಹೊಂದಲು ಒತ್ತಾಯಿಸುತ್ತಿದ್ದರಾ ಎಂಬ ಬಗ್ಗೆ ಮಾತನಾಡಿದ್ದಾರೆ.

PREV
19
ಟಾಪ್‌ ನಟಿಯಾದರೇನು, ಕತ್ರೀನಾಗೂ ಮಗು ಮಾಡಿಕೊಳ್ಳಲು ತಪ್ಪಿಲ್ಲ ಫ್ಯಾಮಿಲಿ ಪ್ರೇಷರ್!

ಪ್ರಸ್ತುತ ತನ್ನ ಮುಂಬರುವ ಚಿತ್ರ ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿಯನ್ನು ಪ್ರಚಾರ ಮಾಡುತ್ತಿರುವ ವಿಕ್ಕಿ ಕೌಶಲ್, ಈಗ ತನ್ನ ಹೆಂಡತಿ ಕತ್ರಿನಾ ಕೈಫ್ ಬಗ್ಗೆ ತನ್ನ ಹೆತ್ತವರಿಗೆ ತಿಳಿಸಿದ ಬಗ್ಗೆ ತೆರೆದುಕೊಂಡರು.

29

ವಿಕ್ಕಿ ಕೌಶಲ್ ಕತ್ರಿನಾ ಕೈಫ್ ಜೊತೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ತನ್ನ ಪೋಷಕರಿಗೆ ಹೇಳಿದ್ದನ್ನು ನೆನಪಿಸಿಸಿಕೊಂಡಿದ್ದಾರೆ. 
 

39

ರೇಡಿಯೋ ಸಿಟಿ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ವಿಕ್ಕಿ ಕೌಶಲ್ ಅವರು ತಮ್ಮ ಈಗ-ಪತ್ನಿ ಕತ್ರಿನಾ ಕೈಫ್ ಅವರೊಂದಿಗಿನ ಸಂಬಂಧದ ಬಗ್ಗೆ ತಮ್ಮ ಕುಟುಂಬಕ್ಕೆ ತಿಳಿಸಿದಾಗ ಹೇಗಿತ್ತು ಪ್ರತಿಕ್ರಿಯೆ ಎಂಬುದನ್ನು ಹೇಳಿಕೊಂಡಿದ್ದಾರೆ. 
 

49

ಕತ್ರಿನಾ ಜೊತೆ ಡೇಟಿಂಗ್ ಮಾಡುತ್ತಿದ್ದಾನೆ ಎಂದು ಗೊತ್ತಾದ ಮನೆಯಲ್ಲಿ ಮೊದಲ ವ್ಯಕ್ತಿ ಯಾರು ಎಂದು ನಿರೂಪಕರು ಕೇಳಿದಾಗ, ಅವರು ತಮ್ಮ ತಾಯಿ ಮತ್ತು ತಂದೆ ಎಂದು ಉತ್ತರಿಸಿದರು.

59

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯಾಗಿ ಸುಮಾರು ಎರಡು ವರ್ಷಗಳಾಗಿದ್ದು, ಅವರು 'ಒಳ್ಳೆಯ ಸುದ್ದಿ' ಪ್ರಕಟಿಸುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ.

69

ವಿಕ್ಕಿ ಕೌಶಲ್ ತನ್ನ ಕುಟುಂಬವು ತನ್ನ ಮತ್ತು ಕತ್ರಿನಾಗೆ 'ಒಳ್ಳೆಯ ಸುದ್ದಿ'ಗಾಗಿ ಒತ್ತಡ ಹೇರುತ್ತಿದೆ ಎಂಬುದನ್ನೂ ಬಹಿರಂಗಪಡಿಸಿದ್ದಾರೆ.
 

79

ಸಂದರ್ಶನದಲ್ಲಿ, ನಟನನ್ನು ಅವರ ಕುಟುಂಬ ಸದಸ್ಯರು ಮಗುವನ್ನು ಹೊಂದುವ ಯೋಜನೆಗಳ ಬಗ್ಗೆ ಒತ್ತಡ ಹೇರುತ್ತಿದ್ದಾರೆಯೇ ಎಂದು ಕೇಳಲಾಯಿತು. ಯಾರು ಒತ್ತಡ ಹಾಕುತ್ತಿಲ್ಲ. ಅವತು ತುಂಬಾ ಕೂಲ್‌ ಇದ್ದಾರೆ ಎಂದು ವಿಕ್ಕಿ ಉತ್ತರಿಸಿದ್ದಾರೆ.

89

ವಿಕ್ಕಿ ಕೌಶಲ್ ಅವರು ನಟಿ ಕತ್ರಿನಾ ಕೈಫ್ ಅವರೊಂದಿಗಿನ ಸಂಬಂಧದ ಆಸೆಯನ್ನು ಕಾಫಿ ವಿತ್ ಕರಣ್‌ನ ಶೋನಲ್ಲಿ ವ್ಯಕ್ತಪಡಿಸಿದ  ಸ್ವಲ್ಪ ದಿನದಲ್ಲಿಯೇ ಇಬ್ಬರ ನಡುವೆ ಪ್ರೀತಿ ಅರಳಿತು,

99

ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 9, 2021 ರಂದು ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು  ಮತ್ತು ಇಂದು ಬಾಲಿವುಡ್‌ನ ಈ ಫೇಮಸ್‌ ಜೋಡಿ  ಸಂತೋಷದ ದಾಂಪತ್ಯದಲ್ಲಿದ್ದಾರೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories