ಐಪಿಲ್ ಮಾಜಿ ಅಧ್ಯಕ್ಷನ ಜೊತೆ ಯಾರೀಕೆ ಹಾಟ್‌ ಬಿಕಿನಿ ಸುಂದರಿ!

Published : Sep 08, 2023, 05:38 PM IST

ಭಾರತದ ಸೂಪರ್‌ ಮಾಡೆಲ್‌ ಜೊತೆ ಉದ್ಯಮಿ ಲಲಿತ್ ಮೋದಿ ತನ್ನ 59 ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಸುದ್ದಿ ಹಬ್ಬಿದೆ. ಮಾತ್ರವಲ್ಲ ಇಬ್ಬರೂ ಜೊತೆಗೆ ಇರುವ ಪೋಟೋ ವೈರಲ್ ಆಗಿದೆ. ಈ ಸೂಪರ್‌ ಮಾಡೆಲ್‌ ವಯಸ್ಸು 45 ಆದರೂ ಆಕೆಯ ಸೌಂದರ್ಯ ಮಾತ್ರ ಕಣ್ಣು ಕುಕ್ಕುವಂತಿದೆ. ಯಾರೀಕೆ ಮಾಡೆಲ್‌? ಆಕೆಯ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ.

PREV
112
ಐಪಿಲ್ ಮಾಜಿ ಅಧ್ಯಕ್ಷನ ಜೊತೆ ಯಾರೀಕೆ ಹಾಟ್‌ ಬಿಕಿನಿ ಸುಂದರಿ!

 90 ರ ದಶಕದ  ಭಾರತದ ಪ್ರಸಿದ್ದ ರೂಪದರ್ಶಿ ಉಜ್ವಲಾ ರಾವುತ್‌ ಜೊತೆಗೆ ಉದ್ಯಮಿ ಲಲಿತ್ ಮೋದಿ ಡೇಟಿಂಗ್‌ ನಡೆಸುತ್ತಿದ್ದಾರೆಂದು ಹೇಳಲಾಗಿದೆ. ಇದರ ಬಗ್ಗೆ ಇಬ್ಬರೂ ಕೂಡ ಯಾವುದೇ ಹೇಳಿಕೆ ನೀಡಿಲ್ಲ.

212

45 ವರ್ಷದ ಉಜ್ವಲಾ ರಾವುತ್ ಅವರು 90 ರ ದಶಕದಲ್ಲಿ ಪ್ರಮುಖ ರೂಪದರ್ಶಿಯಾಗಿದ್ದರು ಮತ್ತು 1996 ರ ಮಿಸ್ ಇಂಡಿಯಾದಲ್ಲಿ ಫೈನಲಿಸ್ಟ್ ಆಗಿದ್ದರು.
 

312

ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಶನ್ ಶೋಗಾಗಿ ನಡೆದ ಮೊದಲ ಭಾರತೀಯರಲ್ಲಿ ರೂಪದರ್ಶಿ  ಉಜ್ವಲಾ ರಾವುತ್ ಕೂಡ ಒಬ್ಬರಾಗಿದ್ದಾರೆ. 

412

1990 ರ ದಶಕದಲ್ಲಿ ಭಾರತೀಯ ಫ್ಯಾಷನ್ ರಂಗದಲ್ಲಿ ಮೊದಲ ಸೂಪರ್ ಮಾಡೆಲ್‌ಗಳಲ್ಲಿ ಒಬ್ಬರು ಉಜ್ವಲಾ ರಾವುತ್, ಅವರು 1978 ರಲ್ಲಿ ಜನಿಸಿದರು. 

512

ಉಜ್ವಲಾ ಅವರು ತಮ್ಮ ಹದಿಹರೆಯದಲ್ಲಿ ಮಾಡೆಲಿಂಗ್ ಪ್ರಾರಂಭಿಸಿದರು. ಆಕೆಯ ತಂದೆ ಮುಂಬೈ ಪೊಲೀಸ್‌ನಲ್ಲಿ ಮಾಜಿ ಡೆಪ್ಯುಟಿ ಕಮಿಷನರ್ ಆಗಿದ್ದರು.

612

ಉಜ್ವಲಾ 1996 ರಲ್ಲಿ ಫೆಮಿನಾ ಮಿಸ್ ಇಂಡಿಯಾದಲ್ಲಿ 17 ವರ್ಷ ವಯಸ್ಸಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಭಾಗವಹಿಸಿದ್ದರು. ಮತ್ತು ವರ್ಷದ ಫೆಮಿನಾ ಲುಕ್ ಶೀರ್ಷಿಕೆಯನ್ನು ಪಡೆದರು. 

712

1996 ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಎಲೈಟ್ ಮಾಡೆಲ್ ಲುಕ್ ಸ್ಪರ್ಧೆಯಲ್ಲಿ ಉಜ್ವಲಾ ಅವರು ಅಗ್ರ 15 ರಲ್ಲಿ ಸ್ಥಾನ ಪಡೆದರು. 

812

ವೈವ್ಸ್ ಸೇಂಟ್-ಲಾರೆಂಟ್, ರಾಬರ್ಟೊ ಕವಾಲಿ, ಹ್ಯೂಗೋ ಬಾಸ್, ಡೋಲ್ಸ್ & ಗಬ್ಬಾನಾ, ಗುಸ್ಸಿ, ಗಿವೆಂಚಿ, ವ್ಯಾಲೆಂಟಿನೋ, ಆಸ್ಕರ್ ಡೆ ಲಾ ರೆಂಟಾ ಮತ್ತು ಎಮಿಲಿಯೊ ಪುಕ್ಕಿ ಮುಂತಾದ ಅಂತರರಾಷ್ಟ್ರೀಯ ಬ್ರಾಂಡ್‌ಗಳು ಮತ್ತು ವಿನ್ಯಾಸಕಾರರ ಶೋನಲ್ಲಿ ಮಾಡೆಲ್‌ ಆಗಿ ಹೆಜ್ಜೆ ಹಾಕಿದ್ದಾರೆ.

912

2002 ಮತ್ತು 2003 ರಲ್ಲಿ ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಶನ್ ಶೋಗಾಗಿ two walksಗಳನ್ನು ಪ್ರದರ್ಶಿಸಿದ ಭಾರತದ ಮೊದಲ ವ್ಯಕ್ತಿಗಳಲ್ಲಿ  ಉಜ್ವಲಾ ಒಬ್ಬರು ಎನಿಸಿಕೊಂಡಿದ್ದಾರೆ.

1012

2012 ರಲ್ಲಿ ಮಿಲಿಂದ್ ಸೋಮನ್ ಅವರೊಂದಿಗೆ ವರ್ಷದ MTV ಸೂಪರ್ ಮಾಡೆಲ್‌ನಲ್ಲಿ ತೀರ್ಪುಗಾರರಾಗಿ ಟೆಲಿವಿಜನ್‌ ಜಗತ್ತಿಗೆ ಕಾಲಿಟ್ಟರು.

1112

ಉಜ್ವಲಾ ರಾವುತ್ ಜೂನ್ 2004 ರಲ್ಲಿ ಸ್ಕಾಟಿಷ್ ನಿರ್ದೇಶಕ ಮ್ಯಾಕ್ಸ್‌ವೆಲ್ ಸ್ಟೆರಿಯನ್ನು ವಿವಾಹವಾದರು. ಈ ಜೋಡಿಯು 2011 ರಲ್ಲಿ ವಿಚ್ಛೇದನ ಪಡೆಕೊಂಡಿತು. ಇವರಿಗೆ ಕ್ಷಾ (Ksha) ಎಂಬ ಮಗಳಿದ್ದಾಳೆ. ಇವರ ವಿಚ್ಛೇದನವು ವಿವಾದಾತ್ಮಕವಾಗಿತ್ತು.

 

1212

ಖ್ಯಾತ ವಕೀಲ ಮತ್ತು ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಲಂಡನ್‌ನಲ್ಲಿ ತಮ್ಮ ಮೂರನೇ  ವಿವಾಹವಾದಾಗ ಪಾರ್ಟಿ ಏರ್ಪಡಿಸಿದ್ದರು. ಕಾರ್ಯಕ್ರಮಗಳಲ್ಲಿ ತೆಗೆದುಕೊಂಡ ಫೋಟೋಗಳಲ್ಲಿ ಲಲಿತ್ ಮೋದಿ ಮತ್ತು ಉಜ್ವಲಾ ರಾವತ್ ಜೊತೆಯಾಗಿ ಪೋಸ್  ಕೊಟ್ಟಿದ್ದು,  ಇಬ್ಬರ ನಡುವೆ ಸಂಥಿಂಗ್ ಇದೆ ಎಂದು ಹಲವು ಮಿಡಿಯಾಗಳು ವರದಿ ಬಿತ್ತರಿಸಿದೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories