Bigg Boss Season 10 ಆರಂಭ, ಈ ಮೂರು ಫೇಮಸ್‌ ಸೀರಿಯಲ್ ಮುಕ್ತಾಯ

Published : Sep 08, 2023, 05:56 PM IST

ಕನ್ನಡ ಬಿಗ್‌ಬಾಸ್ ಸೀಸನ್ 10ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ಬಾರಿ ಸ್ಪರ್ಧಿಗಳು ಯಾರು ಅಂತ ಎಲ್ಲರೂ ಕುತೂಹಲದಿಂದ ಕಾಯ್ತಿದ್ದಾರೆ. ಇದೆಲ್ಲದರ ಮಧ್ಯೆ ಬಿಗ್‌ಬಾಸ್ ಪ್ರಸಾರ ಆಗೋ ಕಾರಣ ಯಾವುದೆಲ್ಲಾ ಸೀರಿಯಲ್‌ ಮುಗಿಯುತ್ತೆ ಅಂತ ಪ್ರೇಕ್ಷಕರು ಗೊಂದಲದಲ್ಲಿದ್ದಾರೆ.

PREV
16
Bigg Boss Season 10 ಆರಂಭ, ಈ ಮೂರು ಫೇಮಸ್‌ ಸೀರಿಯಲ್ ಮುಕ್ತಾಯ

ಜನಪ್ರಿಯ ರಿಯಾಲಿಟಿ ಶೋ  ಬಿಗ್​ ಬಾಸ್​ ಸೀಸನ್​ 10 ಇನ್ನೇನು ಕೆಲವೇ ದಿನಗಳಲ್ಲಿ ಕಲರ್ಸ್​ ಕನ್ನಡದಲ್ಲಿ ಶುರುವಾಗಲಿದೆ. ಈಗಾಗ್ಲೇ ಬಿಗ್‌ಬಾಸ್‌ ಕನ್ನಡ 10 ನೇ ಆವೃತ್ತಿ ಫ್ರೋಮೋ ಸಹ ರಿಲೀಸ್ ಆಗಿದೆ.  ಸ್ಪರ್ಧಿಗಳಾಗಿ ಈ ಬಾರಿ ಯಾರೆಲ್ಲಾ ಬರ್ತಾರೆ ಅಂತ ಜನರು ಸಹ ಸಖತ್​ ಕ್ಯೂರಾಸಿಟಿಯಿಂದ ಕಾಯ್ತಾ ಇದ್ದಾರೆ. ಅಷ್ಟೇ ಅಲ್ಲ ಕಲರ್ಸ್ ಕನ್ನಡದಲ್ಲಿ ಬಿಗ್‌ಬಾಸ್ ಪ್ರಸಾರ ಆಗೋ ಕಾರಣ ಯಾವುದೆಲ್ಲಾ ಸೀರಿಯಲ್‌ ಮುಗಿಯುತ್ತೆ ಅನ್ನೋ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿದೆ.

26

ಕಲರ್ಸ್​ ಕನ್ನಡದಲ್ಲಿ ನೂತನ ಧಾರವಾಹಿ ಆರಂಭವಾಗ್ತಾ ಇದೆ. ಬೃಂದಾವನ ಎಂಬ ಧಾರವಾಹಿಯ ಟೈಟಲ್​ ಕೂಡ ಲಾಂಚ್​ ಮಾಡಲಾಗಿದೆ. ಅದಲ್ಲದೆ ಪ್ರತಿದಿನ ಒಂದೂವರೆ ಗಂಟೆಗಳ ಕಾಲ ಬಿಗ್ ಬಾಸ್ ಶೋ ಪ್ರಸಾರ ಆಗುತ್ತೆ. ಹೀಗಾಗಿ 3 ಧಾರಾವಾಹಿಗಳು ಮುಕ್ತಾಯ ಆಗಬೇಕು. ಹಾಗಾದರೆ ಬಿಗ್‌ಬಾಸ್ ಪ್ರಸಾರಕ್ಕಾಗಿ ಕಲರ್ಸ್ ಕನ್ನಡ ವಾಹಿನಿಯ ಯಾವ ಧಾರಾವಾಹಿಗಳು ಮುಕ್ತಾಯ ಆಗುತ್ತೆ?

36

ಲಕ್ಷಣ
ರಾತ್ರಿ 8.30 ಕ್ಕೆ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗ್ತಾ ಇರುವ ಧಾರವಾಹಿ ಲಕ್ಷಣ. ಇನ್ನು ಬಿಗ್​ ಬಾಸ್​ ಆರಂಭವಾಗುವ ಹಿನ್ನಲೆಯಲ್ಲೇ ಈ ಧಾರವಾಹಿಯನ್ನು ಮುಗಿಸಲಾಗುತ್ತದೆ ಎಂದು ತಿಳಿದುಬಂದಿದೆ. ಶ್ವೇತಾಳನ್ನು ನಂಬಿ ಶಕುಂತಲಾ ದೇವಿ ಮನೆ, ಆಸ್ತಿ ಕಳೆದುಕೊಂಡಿದ್ದಾಳೆ. ಈಗ ಶಕುಂತಲಾ ದೇವಿ ಮತ್ತೆ ಉದ್ಯಮ ಆರಂಭಿಸುತ್ತಾಳಾ? ಅಥವಾ ಶ್ವೇತಾ ಬದಲಾಗುತ್ತಾಳಾ? ಇದಕ್ಕೆ ತಾರ್ಕಿಕ ಅಂತ್ಯ ನೀಡಿ ಧಾರಾವಾಹಿ ನಿಲ್ಲಿಸುವ ಸಾಧ್ಯತೆಯಿದೆ.

46

ತ್ರಿಪುರ ಸುಂದರಿ
9:30 ಕ್ಕೆ ಪ್ರಸಾರವಾಗ್ತಾ ಇದ್ದ ಈ ಧಾರವಾಹಿ ಕೂಡಾ ಮುಗಿಯುವ ಹಂತದಲ್ಲಿದೆ. ಬಿಗ್ ಬಾಸ್​ನಿಂದಲೇ ಕರ್ನಾಟಕಕ್ಕೆ ಪರಿಚಯವಾಗಿರುವ ದಿವ್ಯಾ ಸುರೇಶ್​ ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ರಾಜಕುಮಾರನನ್ನು ಹುಡುಕಿಕೊಂಡು ಬಂದ ಗಂಧರ್ವ ಲೋಕದ ಕನ್ಯೆ ಆಮ್ರಪಾಲಿಗೆ ಪ್ರದ್ಯುಮ್ನನೇ ರಾಜಕುಮಾರ ಎಂಬುದೇ ಗೊತ್ತಾಗುತ್ತಾ ಎಂಬ ಪ್ರಶ್ನೆಗೆ ಉತ್ತರ ನೀಡಿ ಧಾರಾವಾಹಿ ನಿಲ್ಲಿಸುವ ಸಾಧ್ಯತೆಯಿದೆ.

56


ಪುಣ್ಯವತಿ
ಬಿಗ್​ ಬಾಸ್​ ಸೀಸನ್​ 9 ಮುಗಿದಾಗ ಈ ಪುಣ್ಯವತಿ ಧಾರಾವಾಹಿ ಆರಂಭವಾಗಿತ್ತು. ಈಗ ಸೀಸನ್​ 10 ಆರಂಭವಾಗುವ ಹೊತ್ತಿಗೆ ಪುಣ್ಯವತಿ ಧಾರಾವಾಹಿ ಮುಗಿಯುತ್ತಾ ಇದೆ. ನಂದನ್ ಹಾಗೂ ಪದ್ಮಿನಿ ಮದುವೆ ನಡೆಯಬೇಕಿತ್ತು. ಆದರೆ ಪದ್ಮಿನಿ ಹಸೆಮಣೆ ಏರೋ ಬದಲು ಪೂರ್ವಿ ತಾಳಿ ಕಟ್ಟಿಸಿಕೊಂಡಳು. ನಂದನ್‌ಗೆ ಪದ್ಮಿನಿ ಜೊತೆ ಬಾಳುವ ಆಸೆ. ಪೂರ್ವಿ ನಂದನ್‌ನ್ನು ಬಿಟ್ಟು ಕೊಡೋದಿಲ್ಲ ಎನ್ನುತ್ತಿದ್ದಾಳೆ. ನಂದನ್ ಜೊತೆ ಯಾರು ಬದುಕುತ್ತಾನೆ ಅನ್ನೋ ಪ್ರಶ್ನೆಗೆ ಉತ್ತರ ಕೊಡುವ ಮೂಲಕ ಈ ಧಾರಾವಾಹಿಯನ್ನು ಮುಕ್ತಾಯಗೊಳಿಸುವ ಸಾಧ್ಯತೆಯಿದೆ.

66

ಒಟ್ಟಿನಲ್ಲಿ ಬಿಗ್​ ಬಾಸ್​ ಸೀಸನ್​ 10 ಆರಂಭವಾಗುವ ಬೆನ್ನಲ್ಲೇ ಕಲರ್ಸ್​ ಕನ್ನಡದ ಈ 3 ಧಾರವಾಹಿಗಳು ಮುಕ್ತಾಯವಾಗ್ತಿದೆ. ಆದರೆ, ಈ ಧಾರಾವಾಹಿಗಳು ಮುಗಿಯುತ್ತೆ ಅಂತ ವಾಹಿನಿ ಇನ್ನೂ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ.

Read more Photos on
click me!

Recommended Stories