ಬಾಲಿವುಡ್‌ನ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಛಾವಾ ಬಿಡುಗಡೆಯಾಗಿ ತಿಂಗಳಾದ್ರೂ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. ಆರನೇ ವಾರಂತ್ಯಕ್ಕೂ ಚಿತ್ರದ ಗಳಿಕೆ ಮಾತ್ರ ನಿಲ್ಲದೇ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್ ಮಾಡುವ ಭರವಸೆಯನ್ನು ಚಿತ್ರ ಮೂಡಿಸಿದೆ.
ಛಾವಾ ಚಿತ್ರ ಬಿಡುಗಡೆಯಾಗಿ 39 ನೇ ದಿನಗಳು ಕಳೆದಿವೆ. ಶಾರೂಖ್ ಖಾನ್ ಸಿನಿಮಾ ದಾಖಲೆಗಳನ್ನು ಬ್ರೇಕ್ ಮಾಡುವ ಮೂಲವ ಛಾವಾ ಮುನ್ನುಗ್ಗುತ್ತಿದೆ. ಇಂದಿನ ಚಿತ್ರದ ಗಳಿಕೆಗೆ ಸಂಬಂಧಿಸಿದ ಬಾಕ್ಸ್ ಆಫಿಸ್ ಕಲೆಕ್ಷನ್ ದಾಖಲೆಯ ಅಂಕಿ ಅಂಶಗಳು ಹೀಗಿವೆ.
ಛಾವಾ ಬಾಕ್ಸ್ ಆಫೀಸ್ ಕಲೆಕ್ಷನ್
ಅಧಿಕೃತ ಅಂಕಿಅಂಶಗಳ ಪ್ರಕಾರ, ಛಾವಾ ಐದು ವಾರಗಳಲ್ಲಿ ಹಿಂದಿಯಿಂದ 571.40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ತೆಲಗು ಭಾಷೆಯಲ್ಲಿ ಎರಡು ವಾರಗಳಿಂದ 14.41 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹಿಂದಿ ಮತ್ತು ಭಾಷೆ ಸೇರಿ ಒಟ್ಟು 585.81 ಕೋಟಿ ರೂ.ಗಳನ್ನು ಗಳಿಸಿದೆ.
36, 37 ಮತ್ತು 38 ನೇ ದಿನಗಳಲ್ಲಿ ಛಾವಾ ಎರಡೂ ಭಾಷೆಗಳಲ್ಲಿ 2.1 ಕೋಟಿ, 3.65 ಕೋಟಿ ಮತ್ತು 4.65 ಕೋಟಿ ರೂ.ಗಳನ್ನು ಗಳಿಸಿದೆ. ಅಂದರೆ 38 ದಿನಗಳಲ್ಲಿ ಒಟ್ಟು ಸಂಗ್ರಹ 596.21 ಕೋಟಿ ರೂ. ಸಂಪಾದನೆ ಮಾಡಿಕೊಳ್ಳುವ ಮೂಲಕ ಹೊಸ ಹೊಸ ದಾಖಲೆಗಳನ್ನು ಬರೆಯುತ್ತ ಹೊರಟಿದೆ. ಇಂದು ಸಹ 0.76 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸಕ್ಕಿನ್ಲ್ಕ್ ವರದಿ ಮಾಡಿದೆ.
ಸ್ತ್ರೀ-2 ಹಿಂದಿಕ್ಕಿದ ಛಾವಾ
ಕೆಲವು ಸಿನಿಮಾಗಳು ಥಿಯೇಟರ್‌ನಲ್ಲಿ ಹೆಚ್ಚು ದಿನ ಉಳಿದ್ರೂ ಬಾಕ್ಸ್ ಆಫಿಸ್ ನಲ್ಲಿ ಕಲೆಕ್ಷನ್ ಮಾಡುವಲ್ಲಿ ವಿಫಲವಾಗುತ್ತದೆ. ಆದರೆ ಈ ಮಾತನ್ನು ಛಾವಾ ಸುಳ್ಳಾಗಿಸಿದೆ. ಆರಂಭದಲ್ಲಿ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ರೂ, ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 3 ಬಾಲಿವುಡ್ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಛಾವಾ ಬಡ್ತಿ ಪಡೆದುಕೊಂಡಿದೆ.
ರಾಜಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಸ್ತ್ರೀ-2 ಸಿನಿಮಾ 597.99 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 2023ರಲ್ಲಿ ಬಿಡುಗಡೆಯಾದ ಶಾರೂಖ್ ಖಾನ್ ಅಭಿನಯದ ಜವಾನ್ ಬರೋಬ್ಬರಿ 640.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದೀಗ ಶಾರೂಖ್ ಸಿನಿಮಾ ದಾಖಲೆಯನ್ನು ಛಾವಾ ಬ್ರೇಕ್ ಮಾಡುತ್ತಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.