ಹಿಂದಿ ಚಲನಚಿತ್ರೋದ್ಯಮದಲ್ಲಿ ಅಂದ್ರೆ ಬಾಲಿವುಡ್ (Bollywood) ನಲ್ಲಿ ಪ್ರೀತಿ ಮತ್ತು ದ್ವೇಷದ ಸಂಬಂಧ ಹೊಂದಿರುವ ಅನೇಕ ಸೆಲೆಬ್ರಿಟಿಗಳಿದ್ದಾರೆ. ಪ್ರತಿದಿನ ಮೀಡಿಯಾದಲ್ಲಿ ಬಾಲಿವುಡ್ ನ ಅನೇಕ ಜನರ ಬ್ರೇಕ್‌ಅಪ್‌ಗಳು ಮತ್ತು ಪ್ಯಾಚ್‌ಅಪ್‌ಗಳ ಸುದ್ದಿಗಳು ಸಾಮಾನ್ಯವಾಗಿ ಕಂಡು ಬರುತ್ತೆ. ನಟ-ನಟಿಯರು ಸಂಬಂಧದಲ್ಲಿರುವುದರ ಜೊತೆಗೆ, ಅನೇಕ ನಿರ್ದೇಶಕರ ಹೆಸರುಗಳು ಅನೇಕ ನಟಿಯರೊಂದಿಗೆ ತಳುಕು ಹಾಕಿಕೊಂಡಿವೆ. ಕೆಲವರು ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದರೆ, ಕೆಲವು ನಿರ್ದೇಶಕರು ತಮ್ಮ ಪ್ರೀತಿಯನ್ನು ಸಮಾಧಿ ಮಾಡಿದ್ದಾರೆ. ಅವರಲ್ಲಿ ಈ ಸ್ಟಾರ್ ನಿರ್ದೇಶಕ ಕೂಡ ಒಬ್ಬರು.
ಹೌದು, ಮದುವೆಯಾಗಿದ್ದರೂ ಸಹ, ನಾಯಕಿಯೊಬ್ಬರ ರ್ಪೀತಿಯಲ್ಲಿ ಬಿದ್ದ ಇವರು ಬಾಲಿವುಡ್ ನ ಸ್ಟಾರ್ ನ್ರಿದೇಶಕ. ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಬಾಕ್ಸ್ ಆಫಿಸ್ ಹಿಟ್ ಗಳನ್ನು ಸಹ ನೀಡಿದ್ದಾರೆ. ಇವರು ಬೇರಾರು ಅಲ್ಲ ರೋಹಿತ್ ಶೆಟ್ಟಿ (Rohit Shetty). ಹೌದು, ನಿರ್ದೇಶಕ ರೋಹಿತ್ ಶೆಟ್ಟಿ ಒಂದು ಕಾಲದಲ್ಲಿ ಪ್ರಾಚಿ ದೇಸಾಯಿ ಅವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು ಮತ್ತುಅಷ್ಟೇ ಯಾಕೆ ಇವರಿಬ್ಬರು ಲಿವ್ ಇನ್ ರಿಲೇಶನ್’ಶಿಪ್ ನಲ್ಲಿದ್ದರೂ ಎಂದು ಹೇಳಲಾಗುತ್ತದೆ.
ರೋಹಿತ್ ಮತ್ತು ಪ್ರಾಚಿಯ ರೊಮ್ಯಾಂಟಿಕ್ ರಿಲೇಶನ್ ಶಿಪ್
ಮಾಧ್ಯಮ ವರದಿಗಳ ಪ್ರಕಾರ, ರೋಹಿತ್ ಶೆಟ್ಟಿ ಅವರು ಪ್ರಾಚಿ ದೇಸಾಯಿ ಜೊತೆ ಬೋಲ್ ಬಚ್ಚನ್ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಪ್ರೀತಿಯಲ್ಲಿ ಬಿದ್ದಿದ್ದರು. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಅಜಯ್ ದೇವಗನ್ ಮತ್ತು ಆಸಿನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರೋಹಿತ್ ಮತ್ತು ಪ್ರಾಚಿ ಪರಸ್ಪರ ಹತ್ತಿರವಾಗಿದ್ದರು ಮತ್ತು ಶೆಟ್ಟಿ ಜೈಪುರದಲ್ಲಿ ನಟಿಗಾಗಿ ರೊಮ್ಯಾಂಟಿಕ್ ಡಿನ್ನರ್ (Romantic Dinner) ಸಹ ಆಯೋಜಿಸಿದ್ದರು ಎಂದು ವರದಿ ಹೇಳಿದೆ.
ಪತ್ನಿಗೆ ಡಿವೋರ್ಸ್ ಕೊಡಲು ಸಿದ್ಧತೆ
ರೋಹಿತ್ ಮತ್ತು ಪ್ರಾಚಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಸಹ ವರದಿ ಹೇಳುತ್ತದೆ. ವರದಿಯ ಪ್ರಕಾರ, ರೋಹಿತ್ ಶೆಟ್ಟಿ ಬ್ಯಾಂಕರ್ ಮಾಯಾ ಅವರನ್ನು 2005 ರಲ್ಲಿ ವಿವಾಹವಾದರು. ಮದುವೆಯಾಗಿದ್ದರೂ ರೋಹಿತ್ ಪ್ರಾಚಿ ಜೊತೆ ಸಂಬಂಧ ಹೊಂದಿದ್ದರು, ಮತ್ತು ಪ್ರಾಚಿ ಮತ್ತು ರೋಹಿತ್ ಪರಸ್ಪರ ಭೇಟಿಯಾಗಲು ಪ್ರಾರಂಭಿಸಿದಾಗ, ರೋಹಿತ್ ಪತ್ನಿ ಮಾಯಾ ಶೆಟ್ಟಿಗೆ ಅದರ ಬಗ್ಗೆ ತಿಳಿಯಿತು. ರೋಹಿತ್ ಮಾಯಾಗೆ ಡಿವೋರ್ಸ್ (ready to divorce wife) ಕೊಡಲು ಸಹ ನಿರ್ಧರಿಸಿದ್ದರು, ಕೊನೆಗೆ ರೋಹಿತ್ ತನ್ನ ಮಗನ ಕಾರಣದಿಂದಾಗಿ ಪ್ರಾಚಿಯಿಂದ ದೂರವಾದರು ಎನ್ನುತ್ತೆ ವರದಿ.
ಸೀರಿಯಲ್ ನಿಂದ ಸಿನಿಮಾದಲ್ಲಿ ಮಿಂಚಿದ ಪ್ರಾಚಿ
ಪ್ರಾಚಿ (Prachi Desai) ‘ಕಸಮ್ ಸೆ' ಸೀರಿಯಲ್ ಮೂಲಕ ಟಿವಿಗೆ ಪಾದಾರ್ಪಣೆ ಮಾಡಿದರು, ಈ ಸೀರಿಯಲ್ ನಲ್ಲಿ ಅವರು 'ಬಾನಿ' ಎಂಬ ಪಾತ್ರವನ್ನು ನಿರ್ವಹಿಸಿದರು. ಈ ಸೀರಿಯಲ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಸ್ವಲ್ಪ ಸಮಯದ ನಂತರ, ಅವರು ಬಾಲಿವುಡ್ ಜಗತ್ತಿಗೆ ಪ್ರವೇಶಿಸಿದರು. ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ, ಐ, ಮಿ ಔರ್ ಮೈ ಮತ್ತು ಅಜರ್ ನಂತಹ ಹಲವು ಸಿನಿಮಾಗಳಲ್ಲಿ ಪ್ರಾಚಿ ದೇಸಾಯಿ ನಟಿಸಿದ್ದಾರೆ.