Bollywood Actress' Look: ಡಿಪ್ಪಿ ಸ್ಟನ್ನಿಂಗ್‌ ಸೀರೆ ಲುಕ್‌ಗೆ ರಣವೀರ್‌ ಫುಲ್‌ ಫಿದಾ; ಕಾಮೆಂಟ್‌ ವೈರಲ್‌!

First Published | Dec 4, 2021, 7:13 PM IST

ನಟಿಯಾಗಿ ದೀಪಿಕಾ ಪಡುಕೋಣೆ (Deepika Padukone) ಅವರ ಫ್ಯಾಶನ್ ಸೆನ್ಸ್‌ ಸದಾ ಎಲ್ಲರ ಗಮನ ಸೆಳೆಯುತ್ತದೆ. ನಟಿಯ ಸ್ಟೈಲಿಶ್ ಔಟ್‌ಫಿಟ್‌ನಿಂದ ಹಿಡಿದು ಅದರ ಕಲರ್‌ ಕಾಂಬಿನೇಷನ್‌ ಮತ್ತು ಅದರ ಆಯ್ಕೆಯವರೆಗೂ ಎಲ್ಲವೂ ಪರ್ಫೇಕ್ಟ್‌ ಆಗಿ ಇರುತ್ತದೆ. ದೀಪಿಕಾ ಪಾಶ್ಚಿಮಾತ್ಯ ಉಡುಗೆ ಅಥವಾ ಭಾರತೀಯರ ಪ್ರತಿ ಉಡುಪಿ ಇರಲಿ ಅದ್ಭುತವಾಗಿ ಕಾಣುತ್ತಾರೆ. ಕಪ್ಪು ಸೀರೆ ಉಟ್ಟ ದೀಪಿಕಾರ ಫೋಟೋ ಸಖತ್‌ ವೈರಲ್‌ ಆಗಿದೆ. ಅಭಿಮಾನಿಗಳ ಜೊತೆ ಆಕೆ ಪತಿ ರಣವೀರ್‌ ಸಿಂಗ್‌ (Raneer Singh) ಸಹ ಅವರ ಲುಕ್‌ಗೆ ಫುಲ್‌ ಫಿದಾ ಆಗಿದ್ದಾರೆ.

ದೀಪಿಕಾ ಪಡುಕೋಣೆ ಕಪ್ಪು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಪ್ಲೇನ್‌  ಸೀರೆ ಜೊತೆ ಡಿಸೈನರ್ ಬ್ಲೌಸ್‌ ಧರಿಸಿರುವ ಅವರ ಲುಕ್‌  ಬೆರಗುಗೊಳಿಸುತ್ತದೆ. ಸೀರೆ ತುಂಬಾ ಹಗುರವಾಗಿದು. ಇದರಲ್ಲಿ ನಟಿ ತುಂಬಾ ಕಂಫರ್ಟಬಲ್‌ ಆಗಿ ಕಾಣುತ್ತಿದ್ದಾರೆ.

ದೀಪಿಕಾ ಸೀರೆಯಲ್ಲಿ ವಿವಿಧ ಪೋಸ್‌ಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ ಹಾಗೂ  ಅದನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ದೀಪಿಕಾರ ಈ ಫೋಟೋಗಳಿಗೆ ಕಾಮೆಂಟ್‌ಗಳು ಮತ್ತು ಲೈಕ್‌ಗಳ ಮಹಾಪೂರವೇ ಹರಿದಿತ್ತು.   ದೀಪಿಕಾ, ಫೋಟೋಗೆ  ಹೃದಯದ ಎಮೋಜಿಯ ಶೀರ್ಷಿಕೆ ಹಾಕಿದ್ದಾರೆ.

Tap to resize

ದೀಪಿಕಾರ ಈ ಲುಕ್‌ ನೋಡಿ  ಅವರ ಪತಿ ರಣವೀರ್‌ ಸಿಂಗ್‌ ಸಹ ಉಸಿರಾಡುವುದನ್ನು ಮರೆತಿದ್ದಾರೆ. ದೀಪಿಕಾರ ಫೋಟೋಗೆ ರಣವೀರ್ ಸಿಂಗ್ 'ಡೆತ್ ಹೈ ಹೋ ಗಯಿ' ಎಂದು ಕಾಮೆಂಟ್‌ ,ಮಾಡಿದ್ದಾರೆ. ಇದರ ಜೊತೆ ಕಾಮೆಂಟ್‌ನಲ್ಲಿ  ಅನೇಕ ಹೃದಯ ಎಮೋಜಿಗಳನ್ನು ಹಾಕಿದ್ದಾರೆ. ನಟನ ಈ ಕಾಮೆಂಟ್‌ಗೆ ಅನೇಕ ಅಭಿಮಾನಿಗಳ ಪ್ರತಿಕ್ರಿಯೆಯೂ ಸಿಕ್ಕಿದೆ. 

ಬಳಕೆದಾರರಲ್ಲಿ ಒಬ್ಬರು, 'ಈ ಫೋಟೋದಿಂದ ನಿಮ್ಮ ಸಾವು ಸಂಭವಿಸಿದೆ, ಲಕ್ಷಾಂತರ ಮೃತ ದೇಹಗಳು ಸಹ ಜೀವಂತವಾಗಿವೆ' ಎಂದು ಬರೆದಿದ್ದಾರೆ. ಈ ಸೀರೆಯಲ್ಲಿ ದೀಪಿಕಾ ಬಾಂದ್ರಾದ ರಸ್ತೆಯಲ್ಲಿ ಕಾಣಿಸಿಕೊಂಡಾಗ ಅಲ್ಲಿ ಜನಸಾಗರವೇ ನೆರೆದಿತ್ತು. ಪಾಪರಾಜಿಗಳು ಅವರನ್ನು ರಂಗಮಂದಿರ ಬಾಂದ್ರಾದಲ್ಲಿ ಕ್ಯಾಮರಾದಲ್ಲಿ ಸೆರೆ ಹಿಡಿದರು.

ದೀಪಿಕಾ ಎಲ್ಲರನ್ನೂ ನಗುತ್ತಲೇ ಸ್ವಾಗತಿಸಿದರು. ಇದರೊಂದಿಗೆ ಆಕೆ ಕ್ಯಾಮರಾಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ನಟಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಕಾರಿನಲ್ಲಿ ಕುಳಿತು ಕೈ ಬೀಸಿ ಅಭಿಮಾನಿಗಳಿಗೆ ಬಾಯ್‌ ಹೇಳಿದರು ದೀಪಿಕಾ ಪಡುಕೋಣೆ.  

ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ  ‘83’ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾವು ಕಪಿಲ್‌ದೇವ್‌ ನಾಯಕತ್ವದ ಕ್ರಿಕೆಟ್‌ ಟೀಮ್‌  ದೇಶಕ್ಕೆ 1983ರಲ್ಲಿ ವಿಶ್ವಕಪ್‌ ಗೆದ್ದು ಕೊಟ್ಟ ಸಂಭ್ರಮವನ್ನು ಆಧರಿಸಿದ ಕಥೆಯನ್ನು ಹೊಂದಿದೆ. 

Latest Videos

click me!