ಇನ್ನು ಅವರ ವೈಯಕ್ತಿಕ ಜೀವನಕ್ಕೆ ಬಂದೆ ಜಗದೀಪ್ ಗೆ ಮೂರು ಮದುವೆಯಾಗಿದೆ. ಮೊದಲ ಪತ್ನಿ ನಸೀಮ್ ಬೇಗಂ, ಇವರಿಗೆ ಹುಸೇನ್ ಜಾಫ್ರಿ, ಶಕೀರಾ ಶಫಿ, ಸುರೈಯಾ ಜಾಫ್ರಿ ಅಂತ ಮೂರು ಜನ ಮಕ್ಕಳು. ಇನ್ನು ಎರಡನೇ ಹೆಂಡತಿ ಸುಘ್ರಾ ಬೇಗಂ ಇವರಿಗೆ ಜಾವೇದ್ ಜಾಫ್ರಿ, ನಾವೇದ್ ಜಾಫ್ರಿ ಅಂತ ಇಬ್ಬರು ಮಕ್ಕಳು ಇದ್ದಾರೆ.
ಇನ್ನು ಮೂರನೇ ಹೆಂಡತಿ ನಜೀಮಾ ಇವರಿಗೆ ಒಂದೇ ಮಗು ಮುಸ್ಕಾನ್. ಇವರಲ್ಲಿ ಜಾವೇದ್, ನಾವೇದ್ 'ಬೂಗೀ ವೂಗೀ' ಶೋ ಜೊತೆ, ಸಿನೆಮಾಗಳಿಂದ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. 70 ವರ್ಷ ಸಿನೆಮಾ ಇಂಡಸ್ಟ್ರಿಗೆ ಸೇವೆ ಮಾಡಿದ ಜಗ್ದೀಪ್ 81 ವರ್ಷ ವಯಸ್ಸಿನಲ್ಲಿ ಅನಾರೋಗ್ಯದ ಕಾರಣ ಜುಲೈ 8ರ 2020ರಲ್ಲಿ ಮುಂಬೈನಲ್ಲಿ ತೀರಿಕೊಂಡರು. ಅವರ ಆಸ್ತಿ 100 ಕೋಟಿ ಎಂದು ಅಂದಾಜಿಸಲಾಗಿದೆ.