ಸಾವಿತ್ರಿ ಅಂದರೆ ನಮಗೆ ಮಹಾನಟಿ ಹೆಸರೇ ನೆನಪಿಗೆ ಬರುತ್ತದೆ. ತನ್ನ ನಟನೆಯಿಂದ ಅಷ್ಟೊಂದು ಸೆಳೆದಿದ್ದಾರೆ ಸಾವಿತ್ರಿ. ಸಿನಿಮಾಗಳಲ್ಲಿ ಮೊದಲ ತಲೆಮಾರಿನ ನಟಿಯಾಗಿ ಮಿಂಚಿದವರಲ್ಲಿ ಸಾವಿತ್ರಿ ಪ್ರಮುಖರು. ಚಿಕ್ಕಂದಿನಲ್ಲೇ ಸಿನಿಮಾಗೆ ಎಂಟ್ರಿ ಕೊಟ್ಟು, ಅಲ್ಪ ಕಾಲದಲ್ಲೇ ಅವರು ನಾಯಕಿಯಾಗಿ ಬೆಳೆದರು. ಸ್ಟಾರ್ ನಾಯಕಿಯಾಗಿ ಇಂಡಸ್ಟ್ರಿಯನ್ನು ಆಳಿದರು. ಸಾವಿತ್ರಿ ಡೇಟ್ಸ್‌ಗಾಗಿ ಇತ್ತ ಎನ್‌ಟಿಆರ್, ಎಎನ್‌ಆರ್, ಅತ್ತ ಎಂಜಿಆರ್, ಶಿವಾಜಿ ಗಣೇಶನ್ ಅವರಂತಹ ದೊಡ್ಡ ಸ್ಟಾರ್ಸ್ ಕೂಡ ಕಾಯಬೇಕಾಗುತ್ತಿತ್ತಂತೆ. ಅಷ್ಟೊಂದು ಮೋಡಿ ಮಾಡಿದ ಸಾವಿತ್ರಿ ಎಷ್ಟು ಫಾಸ್ಟ್ ಆಗಿ ಬೆಳೆದರೋ, ಅಷ್ಟೇ ವೇಗವಾಗಿ ಬಿದ್ದು ಹೋದರು ಎಂಬಂತೆ ಅವರ ವೃತ್ತಿ ಜೀವನ ಸಾಗಿತು. ಮದುವೆಯ ನಂತರ ಅವರ ಜೀವನದಲ್ಲಿ ಅನೇಕ ಏಳುಬೀಳುಗಳು ನಡೆದವು.