ಚಿರಂಜೀವಿ ಟಾಲಿವುಡ್ಗೆ ದೊಡ್ಡಣ್ಣ. ಸಣ್ಣ ಹೀರೋ ಆಗಿ ಕೆರಿಯರ್ ಸ್ಟಾರ್ಟ್ ಮಾಡಿ ಮೆಗಾಸ್ಟಾರ್ ರೇಂಜ್ಗೆ ಬೆಳೆದಿದ್ದಾರೆ. ಯಾವುದೇ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲದೆ ತಮ್ಮ ಟ್ಯಾಲೆಂಟ್ನಿಂದ ಇಂಡಸ್ಟ್ರಿಯಲ್ಲಿ ಈ ಮಟ್ಟಕ್ಕೆ ತಲುಪಿದ್ದಾರೆ ಚಿರಂಜೀವಿ. ಆಕ್ಟಿಂಗ್, ಆಕ್ಷನ್ಸ್ ಜೊತೆಗೆ ಡ್ಯಾನ್ಸ್ನಿಂದ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ ಚಿರಂಜೀವಿ. ಇಂಡಸ್ಟ್ರಿಯಲ್ಲಿ ನಂಬರ್ ಒನ್ ಹೀರೋ ಆಗಿ ಬೆಳೆದರು. ಆಮೇಲೆ ತಮ್ಮ ವಾರಸುದಾರರನ್ನು ಒಂದೊಂದಾಗಿ ರಂಗಕ್ಕೆ ಇಳಿಸ್ತಾ... ಮೆಗಾ ಸಾಮ್ರಾಜ್ಯವನ್ನ ಟಾಲಿವುಡ್ನಲ್ಲಿ ಸ್ಥಾಪಿಸಿದರು ಚಿರಂಜೀವಿ.