Yogi Adityanath Biopic: ತೆರೆ ಮೇಲೆ ರಾರಾಜಿಸಲಿದೆ ಉತ್ತರ ಪ್ರದೇಶದ ಸಂತನ ಜೀವನಗಾಥೆ; ಯೋಗಿ ಪಾತ್ರಧಾರಿ ಯಾರು?
ಈಗಾಗಲೇ ಸಾಕಷ್ಟು ರಂಗದಲ್ಲಿ ಕೆಲಸ ಮಾಡಿರುವವರ ಬಯೋಪಿಕ್ ತೆರೆಕಂಡಿದೆ. ಈಗ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಬಯೋಪಿಕ್ ತೆರೆ ಕಾಣುವ ಸಮಯ ಹತ್ತಿರ ಬಂದಿದೆ.
ಈಗಾಗಲೇ ಸಾಕಷ್ಟು ರಂಗದಲ್ಲಿ ಕೆಲಸ ಮಾಡಿರುವವರ ಬಯೋಪಿಕ್ ತೆರೆಕಂಡಿದೆ. ಈಗ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಬಯೋಪಿಕ್ ತೆರೆ ಕಾಣುವ ಸಮಯ ಹತ್ತಿರ ಬಂದಿದೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಜೀವನಗಾಥೆ ತೆರೆ ಮೇಲೆ ಬರಲು ರೆಡಿಯಾಗಿದೆ. ʼಅಜೆಯ್- ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿʼ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.
ಆಧ್ಯಾತ್ಮಿಕ, ರಾಜಕೀಯ ಹಾದಿಯೆಡೆಗೆ ಯೋಗಿ ಬದುಕು ಬದಲಾದ ಕುರಿತು ಸಿನಿಮಾವಿದೆ. ಆರಂಭದ ವರ್ಷಗಳಲ್ಲಿ ಇವರ ಜೀವನ ಹೇಗಿತ್ತು? ಯಾವಾಗ ಸನ್ಯಾಸ ಸ್ವೀಕಾರ ಮಾಡಿದರು? ರಾಜಕೀಯದತ್ತ ಯಾವಾಗ ಮುಖ ಮಾಡಿದರು ಎಂಬ ಬಗ್ಗೆ ಈ ಬಯೋಪಿಕ್‌ನಲ್ಲಿ ಇರಲಿದೆಯಂತೆ.
ಶಂತನು ಗುಪ್ತ ಬರೆದಿದ್ದ ʼದಿ ಮಾಂಕ್ ಹು ಬಿಕೇಮ್ ಚೀಫ್ ಮಿನಿಸ್ಟರ್ʼ ಪುಸ್ತಕದಿಂದ ಪ್ರೇರೇಪತವಾಗಿ ಈ ಸಿನಿಮಾ ಮಾಡಲಾಗುತ್ತಿದೆ. ಇಲ್ಲಿ ಡ್ರಾಮಾ, ಎಮೋಶನ್ಸ್, ಆಕ್ಷನ್, ತ್ಯಾಗವೂ ಇರಲಿದೆಯಂತೆ.
ಅನಂತ್ ಜೋಶಿ ಎನ್ನುವವರು ಈ ಸಿನಿಮಾದಲ್ಲಿ ಯೋಗಿ ಪಾತ್ರ ಮಾಡಲಿದ್ದಾರಂತೆ. ಪರೇಶ್ ರಾವಲ್, ದಿನೇಶ್ ಲಾಲ್ ಯಾದವ್, ಅಜಯ್ ಮೆಂಗಿ, ಪವನ್ ಮಲ್ಹೋತ್ರ, ಗರಿಮಾ ಸಿಂಗ್, ರಾಜೇಶ್ ಖತ್ತರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
"ಯೋಗಿ ಆದಿತ್ಯನಾಥ್ ಬದುಕು ಸಾಕಷ್ಟು ಚಾಲೆಂಜ್‌ಗಳಿಂದ ಕೂಡಿದೆ. ಗಟ್ಟಿಯಾದ ಕಥೆ ಮೂಲಕ ಇವರ ಜೀವನಗಾಥೆಯನ್ನು ಹೇಳಲಿದ್ದೇವೆ. ನಿಜಕ್ಕೂ ಇದು ಕುತೂಹಲಕರವಾಗಲಿದೆ” ಎಂದು ನಿರ್ಮಾಪಕ ರಿತು ಮೆಂಗಿ ಅವರು ಹೇಳಿದ್ದಾರೆ. 2025ರಲ್ಲಿಯೇ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ.