ನಟಿ ಮಾಧುರಿ ದೀಕ್ಷಿತ್ (Madhuri Dixit) ಬಾಲಿವುಡ್ ಸಿನಿಮಾ ಇಂಡಷ್ಟ್ರಿಯ ಅತ್ಯಂತ ಯಶಸ್ವಿ ಮತ್ತು ಸುಂದರ ನಟಿಯರಲ್ಲಿ ಒಬ್ಬರು. ಒಂದು ಕಾಲದಲ್ಲಿ ಆಕೆ ಕೇವಲ ಸಂಜಯ್ ದತ್ ನನ್ನು ಮಾತ್ರ ಅಲ್ಲ, ಜೊತೆಗೆ ಒಬ್ಬ ಕ್ರಿಕೆಟಿಗನನ್ನೂ ಪ್ರೀತಿಸುತ್ತಿದ್ದರು, ಆದರೆ ಆ ಪ್ರೀತಿ ಕೂಡ ತುಂಬಾ ಸಮಯ ಮುಂದುವರೆಯಲಿಲ್ಲ.
90 ರ ದಶಕದಲ್ಲಿ, ಟೀಮ್ ಇಂಡಿಯಾದ ಮಾಜಿ ಉಪನಾಯಕ ಅಜಯ್ ಜಡೇಜಾ ಮತ್ತು ನಟಿ ಮಾಧುರಿ ದೀಕ್ಷಿತ್ ಅವರ ಪ್ರಣಯದ ಸುದ್ದಿ ಹೆಚ್ಚು ಚರ್ಚೆಯಾಗಿತ್ತು ಆದರೆ ಆ ಸಂದರ್ಭದಲ್ಲಿ ಸದ್ದು ಮಾಡಿದ್ದ ಒಂದು ಸುದ್ದಿ, ಇಬ್ಬರ ರೊಮ್ಯಾಂಟಿಕ್ ಲೈಫಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು.
ಬಾಲಿವುಡ್ ಮತ್ತು ಕ್ರಿಕೆಟ್ (Bollywood and Cricket) ನಡುವಿನ ಸಂಬಂಧ ತುಂಬಾ ಹಳೆಯದು. ಅನೇಕ ಕ್ರಿಕೆಟಿಗರು ಬಾಲಿವುಡ್ ಸ್ಟಾರ್ ನಟಿಯರನ್ನು ವಿವಾಹವಾಗಿದ್ದಾರೆ. 90 ರ ದಶಕದಲ್ಲಿ, ಮಾಧುರಿ ಮತ್ತು ಜಡೇಜಾ ಅವರ ಸಂಬಂಧದ ಬಗ್ಗೆ ಭಾರಿ ಚರ್ಚೆಯಾಗುತ್ತಿತ್ತು.
ಜಡೇಜಾ (Ajay Jadeja) ಬಾಲಿವುಡ್ ಸೆನ್ಸೇಷನ್ ಆಗಿರುವ ಹಾಗೂ ಸೌಂದರ್ಯ ದೇವತೆಯಂತಿರುವ ಮಾಧುರಿ ಅವರನ್ನು ಪ್ರೀತಿಸುತ್ತಿದ್ದರು. ಮತ್ತೊಂದೆಡೆ, ಮಾಧುರಿ ಕೂಡ ಜಡೇಜಾ ಅವರನ್ನು ಮದುವೆಯಾಗಲು ಬಯಸಿದ್ದರು. ಅಷ್ಟಕ್ಕೂ ಈ ಪ್ರೀತಿ ಶುರುವಾಗಿದ್ದು ಹೇಗೆ?
ಫೋಟೋಶೂಟ್‌ನಿಂದ ಪ್ರಾರಂಭವಾಯಿತು ಪ್ರೇಮ
ಆ ಸಮಯದಲ್ಲಿ ಜಡೇಜಾ ಟೀಮ್ ಇಂಡಿಯಾದ ಉಪನಾಯಕರಾಗಿದ್ದರು ಮತ್ತು ಹುಡುಗಿಯರಿಗಂತೂ ಜಡೇಜಾ ಅಂದ್ರೆ ಕ್ರೇಜ್ ಇತ್ತು, ಮಾಧುರಿ ಮತ್ತು ಅಜಯ್ ಜಡೇಜಾ ಅವರ ಪ್ರೇಮಕಥೆಯು ಮ್ಯಾಗಜಿನ್ ಒಂದರ ಫೋಟೋಶೂಟ್ (photoshoot) ಸಮಯದಲ್ಲಿ ಪ್ರಾರಂಭವಾಯಿತು.
ಜಡೇಜಾ ರಾಜಮನೆತನದಿಂದ ಬಂದವರು
ಇಬ್ಬರೂ ಪತ್ರಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಡೇಟಿಂಗ್ ವದಂತಿಗಳು ಕೂಡ ತೀವ್ರಗೊಂಡವು. ಅಜಯ್ ಜಡೇಜಾ ರಾಜಮನೆತನಕ್ಕೆ ಸೇರಿದವರಾಗಿದ್ದರಿಂದ, ಮದುವೆಯ ವಿಷಯಕ್ಕೆ ಬಂದಾಗ, ಜಡೇಜಾ ಅವರ ಕುಟುಂಬವು ಅವರ ಮಾತನ್ನು ಕೇಳಲಿಲ್ಲ ಮತ್ತು ಮದುವೆಯನ್ನು ಸಂಪೂರ್ಣವಾಗಿ ನಿರಾಕರಿಸಿತ್ತು ಎನ್ನಲಾಗಿದೆ.
ಆ ಸಂಬಂಧ 1999 ರಲ್ಲಿ ಕೊನೆಗೊಂಡಿತು
ಏತನ್ಮಧ್ಯೆ, ಜಡೇಜಾ ಅವರ ವೃತ್ತಿಜೀವನವೂ ಸಹ ಬಹು ದೊಡ್ಡ ತಿರುವು ಪಡೆದುಕೊಂಡಿತು, ಜಡೇಜಾ ಟೀಮ್ ಇಂಡಿಯಾಕ್ಕೆ ಭಾರವಾಗತೊಡಗಿದರು ಮತ್ತು 1999 ರಲ್ಲಿ, ಅಜಯ್ ಜಡೇಜಾ ಮತ್ತು ಮಾಧುರಿ ದೀಕ್ಷಿತ್ ನಡುವಿನ ಸಂಬಂಧವು ಕೊನೆಗೊಂಡಿತು.
ಮ್ಯಾಚ್ ಫಿಕ್ಸಿಂಗ್ ನಿಂದಾಗಿ ಸಂಬಂಧ ಮುರಿದುಬಿತ್ತು.
ಜಡೇಜ ಮ್ಯಾಚ್ ಫಿಕ್ಸಿಂಗ್‌ನಲ್ಲಿ (match fixing) ಸಿಕ್ಕಿಬಿದ್ದರು, ಹೀಗಾಗಿ ಅವರ ಪ್ರೇಮಕಥೆ ಕನಸಿನಂತೆ ಅಪೂರ್ಣವಾಗಿಯೇ ಉಳಿಯಿತು. ಜಡೇಜಾ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದ ವಿಷಯ ಸಾಕಷ್ಟು ವಿವಾದವನ್ನು ಸೃಷ್ಟಿಸಿತು ಮತ್ತು ಇದಾದ ನಂತರ, ಮಾಧುರಿ ಕುಟುಂಬವೂ ಕೂಡ ಜಡೇಜಾರಿಂದ ದೂರ ಉಳಿಯಿತು.
1455 ಕೋಟಿ ನಿವ್ವಳ ಮೌಲ್ಯ
ಆ ಸಮಯದಲ್ಲಿ ರಾಜಮನೆತನದವರಾದ ಅಜಯ್ ಜಡೇಜಾ ಅವರನ್ನು ಜಾಮ್ನಗರದ ಮಹಾರಾಜ ಎಂದು ಘೋಷಿಸಲಾಯಿತು ಮತ್ತು ಇದರಿಂದಾಗಿ ಅವರು ಆಸ್ತಿ ಮೌಲ್ಯ ಕೂಡ ಹೆಚ್ಚಾಯಿತು. ಈಗ ಅವರು 1455 ಕೋಟಿಗಳ ಮಾಲೀಕರಾಗಿದ್ದಾರೆ, ಮಾಧುರಿ ಮತ್ತು ಅಜಯ್ ವಿವಾಹವಾಗಿದ್ದರೆ, ನಟಿ ಇಂದು ಹಲವು ಕೋಟಿಗಳ ಒಡೆಯರಾಗುತ್ತಿದ್ದರು.