ಪಿಂಕ್ ಟ್ಯೂಬ್ ಬಾಡಿಕಾನ್ ಡ್ರೆಸ್‌ನಲ್ಲಿ ಊರ್ವಶಿ ರೌಟೇಲಾ ಮಾದಕ ಲುಕ್‌ ವೈರಲ್‌

First Published | Nov 23, 2022, 5:06 PM IST

ಊರ್ವಶಿ ರೌಟೇಲಾ (Urvashi Rautela) ಬಾಲಿವುಡ್‌ನ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಇತ್ತೀಚೆಗೆ ದುಬೈನಲ್ಲಿ ನಡೆದ ಫಿಲ್ಮ್‌ಫೇರ್ ಮಿಡಲ್ ಈಸ್ಟ್ ಅವಾರ್ಡ್‌ನಲ್ಲಿ ಅವರು ಭಾಗವಹಿಸಿದ್ದರು. ಈ ಪ್ರಶಸ್ತಿ ಸಮಾರಂಭದಲ್ಲಿ  ಪಿಂಕ್ ಟ್ಯೂಬ್ ಬಾಡಿಕಾನ್ ಉಡುಪಿನಲ್ಲಿ ಕಾಣಿಸಿಕೊಂಡ ನಟಿ ಊರ್ವಶಿ ರೌಟೇಲಾ ಎಲ್ಲರ ಗಮನ ಸೆಳೆದರು. ಊರ್ವಶಿ ಅವರ ಈ ಲುಕ್‌ನ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಬಳಕೆದಾರರು ಅವರ ಬಗ್ಗೆ ಮತ್ತು ಕ್ರಿಕೆಟಿಗ ರಿಷಬ್ ಪಂತ್ ಬಗ್ಗೆ ವಿವಿಧ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲ ಊರ್ವಶಿ ಧರಿಸಿರುವ ಈ ಡ್ರೆಸ್‌ ಬೆಲೆ ಕೇಳಿದರೆ ಶಾಕ್‌ ಆಗುವುದು ಗ್ಯಾರಂಟಿ.

ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಊರ್ವಶಿ ರೌಟೇಲಾ ಹಾಗೂ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಅವರ ಸಂಬಂಧದ ಬಗ್ಗೆ ಚರ್ಚೆ ಶುರುವಾಗಿದೆ. ಅಂದಹಾಗೆ, ಅನೇಕ ಬಳಕೆದಾರರು ಊರ್ವಶಿ ಅವರ ಲುಕ್‌ ಹಾಗೂ ಔಟ್‌ಫಿಟ್‌ ಅನ್ನು ಸಹ ಹೊಗಳಿದ್ದಾರೆ

ಊರ್ವಶಿ ರೌಟೇಲಾ ಅವರ ನೋಟವನ್ನು  ಅನೇಕ ಅಭಿಮಾನಿಗಳು ಹೊಗಳಿದರೆ ಇನ್ನೂ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅವರನ್ನು ಕೆಟ್ಟದಾಗಿ ಟ್ರೋಲ್ (Troll) ಮಾಡಲು ಪ್ರಾರಂಭಿಸಿದ್ದಾರೆ ಮತ್ತು  ರಿಷಬ್ ಪಂತ್ ಅವರಿಂದ ನಟಿಗೆ ದೂರ ಉಳಿಯುವಂತೆ ಅಭಿಮಾನಿಗಳು ಸಲಹೆ ನೀಡಿದ್ದಾರೆ. 

Tap to resize

'ರಿಷಬ್ ಪಂತ್ ಪ್ರಭಾವಿತರಾಗುವುದಿಲ್ಲ, ಪ್ರಯತ್ನಿಸಬೇಡಿ' ಎಂದು ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು, ‘ರಿಷಬ್ ಪಂತ್ ಬೆನ್ನಟ್ಟುವುದನ್ನು  ನಿಲ್ಲಿಸಿ’ ಎಂದಿದ್ದಾರೆ.

ನಟಿ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅವರ ಕೆಲವು ಮಾದಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ,  ಅನೇಕ ಅಭಿಮಾನಿಗಳು ಅವರನ್ನು ಕೈಲಿ ಜೆನ್ನರ್ ಎಂದು ಕರೆಯುತ್ತಾರೆ.

ಊರ್ವಶಿ ತನ್ನ ಗುಲಾಬಿ ಬಣ್ಣದ ಟ್ಯೂಬ್‌ ಬಾಡಿಕಾನ್‌ ಡ್ರೆಸ್‌ ಅನ್ನು ಉದ್ದನೆಯ ಫೆದರ್‌ ದುಪ್ಪಟ್ಟಾದೊಂದಿಗೆ ಸಂಯೋಜಿಸಿದ್ದಾರೆ' ಅದೇ ಸಮಯದಲ್ಲಿ ಅವರು ಧರಿಸಿರುವ ಗೌನ್‌ ಬೆಲೆ 50 ಲಕ್ಷ ರೂ. ಎಂದು ವರದಿಗಳು ಹೇಳುತ್ತಿವೆ. 

ಊರ್ವಶಿ ಸ್ಮೋಕಿ ಐಶ್ಯಾಡೋ, ನ್ಯೂಟ್ರಲ್ ಲಿಪ್ ಕಲರ್, ಬ್ರಿಲಿಯಂಟ್ ಹೈಲೈಟರ್ ಊರ್ವಶಿ ಅವರನ್ನು ಇನ್ನು ಹೆಚ್ಚು ಸುಂದರಗೊಳಿಸಿದೆ. ಅವರು ತನ್ನ ಲುಕ್‌ ಅನ್ನು ವಜ್ರದ ಕಿವಿಯೋಲೆಗಳು ಮತ್ತು ಉಂಗುರಗಳೊಂದಿಗೆ ಪೂರ್ಣಗೊಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಊರ್ವಶಿ ಅವರು ದಕ್ಷಿಣದ ಸೂಪರ್‌ಸ್ಟಾರ್ ಚಿರಂಜೀವಿ ಅವರೊಂದಿಗೆ ವಾಲ್ಟೇರ್ ವೀರಯ್ಯನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ರಣದೀಪ್ ಹೂಡಾ ಅವರೊಂದಿಗೆ 'ಇನ್‌ಸ್ಪೆಕ್ಟರ್ ಅವಿನಾಶ್' ಸಿನಿಮಾ ಕೂಡ ಹೊಂದಿದ್ದಾರೆ.

Latest Videos

click me!