ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಮದುವೆ ಸಂಭ್ರಮದಲ್ಲಿದ್ದಾರೆ. ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ನಟಿ ಹನ್ಸಿಕಾ ಬಾವಿ ಪತಿಯನ್ನು ಪರಿಚಯಿಸಿದ್ದರು. ವಿಡಿಯೋ ಶೇರ್ ಮಾಡುವ ಮೂಲಕ ಮದುವೆ ವಿಚಾರವನ್ನು ಅಧಿಕೃತ ಗೊಳಿಸಿದ್ದರು. ಅಂದಹಾಗೆ ಕಾಲಿವುಡ್ ಸುಂದರಿ ಹನ್ಸಿಕಾ ಉದ್ಯಮಿ ಸೊಹೇಲ್ ಕಥರಿಯಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಹನ್ಸಿಕಾ ಮತ್ತು ಸೊಹೇಲ್ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ಸೊಹೇಲ್ ಕಥರಿಯಾ ಅವರಿಗೆ ಇದು ಎರಡನೇ ವಿವಾಹ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ಇದೀಗ ಹನ್ಸಿಕಾ ಜೊತೆ ಹಸೆಮಣೆ ಏರುತ್ತಿದ್ದಾರೆ.
ಈಗಾಗಲೇ ಮದುವೆ ಪೂರ್ವ ಶಾಸ್ತ್ರಗಳು ಪ್ರಾರಂಭವಾಗಿದ್ದು ಹನ್ಸಿಕಾ ಮತ್ತು ಸೊಹೇಲ್ ಫೋಟೋಗಳು ವೈರಲ್ ಆಗಿವೆ. ಇಬ್ಬರೂ ಕೆಂಪು ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಮಾತಾ ಕಿ ಚೌಕಿ ಸೆರಮನಿ ಇದಾಗಿದ್ದು ಹನ್ಸಿಕಾ ಮತ್ತು ಸೊಹೇಲ್ ಖುಷಿ ಖುಷಿಯಾಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಹನ್ಸಿಕಾ ಕೆಂಪು ಸೀರೆಯಲ್ಲಿ ಮಿಂಚಿದ್ರೆ ಸೊಹೇಲ್ ಕೆಂಪು ಶೇರ್ವಾನಿಯಲ್ಲಿ ಕಂಗೊಳಿಸಿದರು.
ಇಬ್ಬರ ಮದುವೆ ಶಾಸ್ತ್ರದ ಫೋಟೋಗಳಿಗೆ ಅಭಿಮಾನಿಗಳು ಲೈಕ್ಸ್ ಮತ್ತು ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ನಟಿ ಉತ್ತರ ಭಾರತದ ನಟಿ ಹನ್ಸಿಕಾ ಚದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಖ್ಯಾತಿ ಗಳಿಸಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಅಂದಹಾಗೆ ಇಬ್ಬರ ಮದುವೆ ಜೈಪುರದ 450 ವರ್ಷಗಳ ಹಿಂದಿನ ಮಂಟೋಡ ಕೋಟೆಯಲ್ಲಿ ನೆರವೇರಲಿದೆ. ಹನ್ಸಿಕಾ ಮದುವೆ ಸಮಾರಂಭದಲ್ಲಿ ಕುಟುಂಬದವರು, ತೀರ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಡಿಸೆಂಬರ್ 2 ರಾತ್ರಿಯಿಂದನೇ ಮದುವೆ ಸಮಾರಂಭ ಪ್ರಾರಂಭವಾಗಲಿದೆ. ಡಿಸೆಂಬರ್ 3ರಿಂದ ಮೆಹಂದಿ ಮತ್ತು ಅರಿಶಿಣ ಶಾಸ್ತ್ರದ ಸಂಭ್ರಮ ನಡೆಯುತ್ತಿದೆ. ಡಿಸೆಂಬರ್ 4ರಂದು ಹನ್ಸಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಾಗಿದ್ದಾರೆ ಸೊಹೇಲ್.