ಸಮಂತಾರ ಜೊತೆ ಡಿವೋರ್ಸ್ to ಬಾಲಿವುಡ್ ಎಂಟ್ರಿ: ನಾಗಚೈತನ್ಯರ ಇಂಟರೆಸ್ಟಿಂಗ್ ವಿಷಯಗಳು
First Published | Nov 23, 2022, 5:00 PM ISTನವೆಂಬರ್ 23 ದಕ್ಷಿಣ ನಟ ನಾಗ ಚೈತನ್ಯ (Naga Chaitanya) ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರು ದಕ್ಷಿಣ ಮತ್ತು ಹಿಂದಿ ಚಿತ್ರರಂಗದ ಖ್ಯಾತ ನಟ ನಾಗಾರ್ಜುನ ಅವರ ಪುತ್ರ. ನಾಗ ಚೈತನ್ಯ ಅವರಿಗೆ ಮೊದಲ ಚಿತ್ರ ಬಹಳ ಸುಲಭವಾಗಿ ಸಿಕ್ಕಿತ್ತಾದರೂ, ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಬಲದ ಮೇಲೆ ಚಿತ್ರರಂಗದಲ್ಲಿ ಸ್ಥಾನವನ್ನು ಗಳಿಸಿದ್ದಾರೆ. ಕಳೆದ 12 ವರ್ಷಗಳಲ್ಲಿ 12ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಇವುಗಳಲ್ಲಿ ಹೆಚ್ಚಿನವು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿವೆ. ನಾಗ ಚೈತನ್ಯಗೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.