2021ರ ಸಾಲಿನ ಹಾಗೂ 69ನೇ ಆವೃತ್ತಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಗುರುವಾರ ಘೋಷಣೆ ಮಾಡಿದೆ. ಹಲವು ಭಾಷೆಯ ಅತ್ಯುತ್ತಮ ಸಿನಿಮಾಗಳು, ನಟರು, ನಟಿಯರು ಪ್ರಶಸ್ತಿಯನ್ನು ಗೆದ್ದಿದ್ದಾರೆ. ಬಾಲಿವುಡ್‌ನಲ್ಲಿ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಅಭಿನಯಕ್ಕಾಗಿ ಆಲಿಯಾ ಭಟ್, 'ಮಿಮಿ' ಚಿತ್ರದಲ್ಲಿನ ಅಭಿನಯಕ್ಕೆ ಕೃತಿ ಸೆನೋನ್, ಪಂಕಜ್ ತ್ರಿಪಾಠಿ, ದಿ ಕಾಶ್ಮೀರ್ ಫೈಲ್ಸ್‌ನಲ್ಲಿ ವಿವಿ ಪ್ರೊಫೆಸರ್ ಪಾತ್ರ ನಿಭಾಯಿಸಿದ್ದ ಪಲ್ಲವಿ ಜೋಶಿ ಪ್ರಶಸ್ತಿ ಗಳಿಸಿದ್ದಾರೆ.
ಪ್ರತಿ ಬಾರಿ ನ್ಯಾಷನಲ್ ಅವಾರ್ಡ್ ಘೋಷಣೆಯಾದಾಗಲೂ ಬಾಲಿವುಡ್ ಕೆಲವೊಂದು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತದೆ. ಆದರೆ ಬಿಟೌನ್‌ನಲ್ಲಿ ಹಲವು ವರ್ಷಗಳಿಂದ ಸೂಪರ್ ಹಿಟ್ ಸಿನಿಮಾ ಮಾಡುತ್ತಾ ಬಂದಿದ್ದರೂ ನ್ಯಾಷನಲ್ ಅವಾರ್ಡ್ ಸಿಗದ ಹಲವು ಫೇಮಸ್ ನಟ-ನಟಿಯರಿದ್ದಾರೆ. ಅವರು ಯಾರೆಲ್ಲಾ ತಿಳಿಯೋಣ.
ಶಾರೂಕ್ ಖಾನ್
ಬಾಲಿವುಡ್‌ನ ಬಾದ್‌ಷಾ ಎಂದು ಕರೆಸಿಕೊಳ್ಳೋ ನಟ ಶಾರೂಕ್ ಖಾನ್. ತಮ್ಮ ಅತ್ಯದ್ಭುತ ನಟನೆಯಿಂದಲೇ ವಿಶ್ವಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ಬಹುತೇಕ ಸಿನಿಮಾಗಳೂ ಬಾಕ್ಸಾಫೀಸ್ ಹಿಟ್ ಆದಂಥವು. ಆದರೆ ಅದೆಷ್ಟೇ ಫೇಮ್ ದೊರಕಿದ್ದರೂ ಶಾರೂಕ್ ಖಾನ್‌ಗೆ ಇದುವರೆಗೂ ನ್ಯಾಷನಲ್ ಅವಾರ್ಡ್ ಸಿಕ್ಕಿಲ್ಲ. ಆದರೆ ಹಲವಾರು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಸಲ್ಮಾನ್ ಖಾನ್
ಕೋಟ್ಯಾಂತರ ಅಭಿಮಾನಿಗಳಿರುವ ನಟ ಸಲ್ಮಾನ್ ಖಾನ್ ಅಥವಾ ಸಲ್ಲುಮಿಯಾ. ಟೈಗರ್ ಜಿಂದಾ ಹೈ, ಭಜರಂಗಿ ಬಾಯಿಜಾನ್, ಏಕ್ ಥಾ ಟೈಗರ್ ಮೊದಲಾದ ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ನ್ಯಾಷನಲ್ ಅವಾರ್ಡ್ ಪಡೆದುಕೊಂಡಿಲ್ಲ.
ಹೃತಿಕ್ ರೋಷನ್
'ಕಹಾ ನಾ ಪ್ಯಾರ್ ಹೋ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರೂ ಅದ್ಯಾಕೋ ನ್ಯಾಷನಲ್ ಅವಾರ್ಡ್ ಹೃತಿಕ್ ರೋಷನ್ ಕೈ ಹಿಡಿದಿಲ್ಲ. ಡ್ಯಾನ್ಸ್, ಫಿಟ್‌ನೆಸ್ ಎಲ್ಲದರಲ್ಲೂ ಪರ್ಫೆಕ್ಟ್ ಆಗಿ ಹುಡುಗಿಯರ ಮನಸ್ಸು ಗೆಲ್ಲೋ ಹೃತಿಕ್ ಇವತ್ತಿಗೂ ನ್ಯಾಷನಲ್ ಅವಾರ್ಡ್ ವಂಚಿತರು.
ಅಮೀರ್ ಖಾನ್
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಸಿಕೊಳ್ಳೋ ಅಮೀರ್ ಖಾನ್ ಹಲವು ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಾರೆ. ಇವರ ತ್ರಿ ಈಡಿಯಟ್ಸ್, ಲಗಾನ್, ಪಿಕೆ ಮೊದಲಾದ ಸಿನಿಮಾಗಳು ಬಾಕ್ಸಾಫೀಸ್ ಧೂಳೆಬ್ಬಿಸಿತ್ತು. ಅಮೀರ್ ಖಾನ್ ಕೇವಲ ನಟ ಮಾತ್ರವಲ್ಲದೆ ನಿರ್ಮಾಪಕ, ನಿರ್ದೇಶಕರೂ ಹೌದು. ಆದರೆ ಇವರು ಸಹ ಇಲ್ಲಿಯವರೆಗೆ ನ್ಯಾಷನಲ್ ಅವಾರ್ಡ್ ಪಡೆದಿಲ್ಲ.
ದೀಪಿಕಾ ಪಡುಕೋಣೆ
ಡಿಪ್ಪಿ ಅಥವಾ ದೀಪಿಕಾ ಪಡುಕೋಣೆ ತಮ್ಮ ಅದ್ಭುತ ಅಭಿನಯದಿಂದಲೇ ಎಲ್ಲರ ಮನಸ್ಸು ಗೆದ್ದಿರುವ ನಟಿ. ಕೆರಿಯರ್ ಆರಂಭಿಸಿದ 'ಓಂ ಶಾಂತಿ ಓಂ' ಚಿತ್ರದಿಂದ ತೊಡಗಿ ಇತ್ತೀಚಿನ 'ಜವಾನ್' ಚಿತ್ರದಲ್ಲಿ ಎಲ್ಲಾ ರೀತಿಯ ನಟನೆಗೂ ಸೈ ಎಂದು ತೋರಿಸಿಕೊಟ್ಟಿದ್ದಾರೆ. ಹೆ ಜವಾನಿ-ಹೆ ದಿವಾನಿ, ಪೀಕು, ಬಾಜಿರಾವ್ ಮಸ್ತಾನಿ, ಪದ್ಮಾವತ್, ಮೊದಲಾದ ಉತ್ತಮ ಕಥಾಹಂದರವುಳ್ಳ ಚಿತ್ರದಲ್ಲಿ ನಟಿಸಿದ್ದರೂ ಇವರಿಗಿನ್ನೂ ನ್ಯಾಷನಲ್ ಅವಾರ್ಡ್ ಸಿಕ್ಕಿಲ್ಲ
ರಾಣಿ ಮುಖರ್ಜಿ
ರಾಣಿ ಮುಖರ್ಜಿ ತಮ್ಮ ಅತ್ಯದ್ಭುತ ನಟನೆಗೇ ಹೆಚ್ಚು ಹೆಸರುವಾಸಿಯಾಗಿದ್ದಾರೆ. ತಮ್ಮ ನಟನೆಯಿಂದಲೇ ರಾಣಿ ಮುಖರ್ಜಿ ಬಾಲಿವುಡ್‌ನಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬ್ಲ್ಯಾಕ್, ನೋ ಒನ್ ಕಿಲ್ಲಡ್ ಜಸ್ಸಿಕಾ ಮೊದಲಾದ ಚಲನಚಿತ್ರಗಳಲ್ಲಿ ರಾಣಿ ಅಭಿನಯ ಎಲ್ಲರ ಗಮನ ಸೆಳೆದಿತ್ತು.