'ಜೊತೆಯಾಗಿ..ಹಿತವಾಗಿ...' ಒಂದೆರಡಲ್ಲ ವಿಶ್ವದಾಖಲೆಯ 130 ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ ಭಾರತೀಯ ಜೋಡಿ ಇದು!

Published : Aug 24, 2023, 04:08 PM IST

ಭಾರತೀಯ ಚಿತ್ರರಂಗದಲ್ಲಿ ಅನೇಕ ಸೂಪರ್ ಹಿಟ್ ಜೋಡಿಗಳು ಮೋಡಿ ಮಾಡಿವೆ. ಅದರಲ್ಲಿ ಅಮಿತಾಭ್ ಬಚ್ಚನ್-ಜಯಾ, ಧರ್ಮೇಂದ್ರ-ಹೇಮಾಮಾಲಿನಿ ಮತ್ತು ಶಾರುಕ್-ಕಾಜೋಲ್ ಜೋಡಿ ನಿಮಗೆಲ್ಲರಿಗೂ ಗೊತ್ತು. ಆದರೆ ಇವರೆಲ್ಲಾ ಕೆಲವು ಸಿನಿಮಾಗಳಲ್ಲಿ ಮಾತ್ರ ಜೋಡಿಯಾಗಿ ನಟಿಸಿದ್ದಾರೆ. ಆದರೆ ಇಲ್ಲೊಂದು ಜೋಡಿ ಈ ಕುರಿತು ವಿಶ್ವ ದಾಖಲೆ ಬರೆದಿದೆ. ಈ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ.

PREV
16
'ಜೊತೆಯಾಗಿ..ಹಿತವಾಗಿ...' ಒಂದೆರಡಲ್ಲ ವಿಶ್ವದಾಖಲೆಯ 130 ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ ಭಾರತೀಯ ಜೋಡಿ ಇದು!

ಸುಮಾರು 130 ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಮಲಯಾಳಂನ ಜೋಡಿ ವಿಶ್ವ ದಾಖಲೆ ಬರೆದಿದೆ. ಇದುವರೆಗೂ ಅವರ ದಾಖಲೆಯನ್ನು ಯಾರು ಮುರಿದಿಲ್ಲ. ಅದೇ ಪ್ರೇಮ್ ನಜೀರ್ ಮತ್ತು ಶೀಲಾ ಜೋಡಿ.

26

ಮಲೆಯಾಳಂನ ಈ ಸೂಪರ್ ಹಿಟ್ ಜೋಡಿ 130 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿ, ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಇದು ಭಾರತದ ಸಿನಿಮಾ ರಂಗದ ಅತಿದೊಡ್ಡ ಸಾಧನೆ.

36

ಪ್ರೇಮ್ ನಜೀರ್ ಅವರನ್ನು ಮಲಯಾಳಂ ಚಿತ್ರರಂಗದ ಮೊದಲ ಸೂಪರ್‌ಸ್ಟಾರ್ ಎಂದು ಪರಿಗಣಿಸಲಾಗಿದೆ. ಅವರನ್ನು ಪ್ರೀತಿಯಿಂದ ನಿತ್ಯಹರಿತ ನಾಯಕನ್ (ಎವರ್‌ಗ್ರೀನ್ ಹೀರೋ) ಎಂದು ಕರೆಯಲಾಗುತ್ತಿತ್ತು. ಹಾಗೂ ಶೀಲಾ ಅವರು ಕೂಡ ಮಳೆಯಾಳಿಗರ ಅಚ್ಚು ಮೆಚ್ಚಿನ ನಟಿ ಆಗಿದ್ದರು.
 

46

ಪ್ರೇಮ್ ನಜೀರ್ 1952 ರಲ್ಲಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು ಹಾಗೂ ಶೀಲಾ 1962 ರಲ್ಲಿ ಅಭಿನಯ ಆರಂಭಿಸಿದರು. ಅವರು ಮೊದಲ ಬಾರಿಗೆ ನಾಯಕಿಯಾಗಿ ಪ್ರೇಮ್ ನಜೀರ್ ಜೊತೆ ನಟಿಸಿದರು.
 

56

ಪ್ರೇಮ್ ನಜೀರ್ ಅವರು ಅತಿ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಗಿನ್ನಿಸ್ ವಿಶ್ವ ದಾಖಲೆಯನ್ನು (700 ಕ್ಕೂ ಹೆಚ್ಚು) ಹೊಂದಿದ್ದರು. ಇದರ ಬಳಿಕ ಬ್ರಹ್ಮಾನಂದಂ ಈ ದಾಖಲೆ ಮುರಿದಿದ್ದಾರೆ.

66

ಈ ಜೋಡಿಯ ಕೆಲವು ದೊಡ್ಡ ಹಿಟ್‌ಗಳಲ್ಲಿ ವೆಲುತ ಕತ್ರೀನಾ, ಕುಟ್ಟಿ ಕುಪ್ಪಯಂ, ಸ್ಥಾನಾರ್ಥಿ ಸಾರಮ್ಮ, ಕಡತನಾಟ್ಟು ಮಕ್ಕಂ, ಮತ್ತು ಕಣ್ಣಪ್ಪನುಣ್ಣಿ ಸೇರಿದಂತೆ ಇತರ ಸಿನಿಮಾಗಳಿವೆ.

Read more Photos on
click me!

Recommended Stories