2026ರ ಬಾಕ್ಸ್ ಆಫೀಸ್ ಕ್ವೀನ್ ಯಾರು? ಸೌತ್ ಸುಂದರಿಯರಿಗೂ ಸ್ಥಾನ, ಟಾಪ್ 5 ಪಟ್ಟಿಯಲ್ಲಿ ಯಾರಿದ್ದಾರೆ ನೋಡಿ!

Published : Nov 21, 2026, 05:32 PM IST

Box Office Queen : 2026 ಬಾಕ್ಸ್ ಆಫೀಸ್ ಪಾಲಿಗೆ ಸಾಕಷ್ಟು ಉತ್ತಮ ವರ್ಷವಾಗಿದೆ. ಈ ವರ್ಷ ಇಲ್ಲಿಯವರೆಗೆ ಹಲವು ದೊಡ್ಡ ಸಿನಿಮಾಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಆದರೆ ಇಂದು ನಾವು 2026ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ನಟಿಯರು ಯಾರು ನೋಡೋಣ.

PREV
16
2026ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಟಿಯರು ಯಾರು?

ಸಿನಿಮಾ ಜಗತ್ತಿಗೆ 2026ರ ವರ್ಷ ಸಾಕಷ್ಟು ಉತ್ತಮವಾಗಿದೆ. ಇದೀಗ ಈ ವರ್ಷ ಮುಕ್ತಾಯದ ಹಂತಕ್ಕೆ ಬಂದಿದೆ. ಬಾಕ್ಸ್ ಆಫೀಸ್ ದೃಷ್ಟಿಯಿಂದಲೂ ಈ ವರ್ಷ ಉತ್ತಮ ಪ್ರದರ್ಶನ ಕಂಡಿದೆ. ಈ ವರ್ಷ ಒಂದಕ್ಕಿಂತ ಒಂದು ಅದ್ಭುತ ಸಿನಿಮಾಗಳು ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿವೆ. ಇವುಗಳಲ್ಲಿ ಕೆಲವು ಸಿನಿಮಾಗಳು ಕೋಟ್ಯಂತರ ರೂಪಾಯಿ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿವೆ. ಸಿನಿಮಾಗಳ ಜೊತೆಗೆ 2026ರ ವರ್ಷ ನಟಿಯರ ಪಾಲಿಗೂ ಉತ್ತಮವಾಗಿತ್ತು. 2026ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ತಮ್ಮ ಪ್ರಭಾವ ಬೀರಿದ ಐವರು ಭಾರತೀಯ ನಟಿಯರು ಯಾರು ನೋಡೋಣ.

26
ಸಾರಾ ಅರ್ಜುನ್

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' ಸಿನಿಮಾದ ನಟಿ ಸಾರಾ ಅರ್ಜುನ್. ವರದಿಗಳ ಪ್ರಕಾರ, 'ಧುರಂಧರ್ 2' ಸಿನಿಮಾ ವಿಶ್ವದಾದ್ಯಂತ 1,813.39 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾದಲ್ಲಿ ಸಾರಾ ಅರ್ಜುನ್ ಮತ್ತು ರಣವೀರ್ ಸಿಂಗ್ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

36
ಲಾರಾ ದತ್ತಾ

ಎರಡನೇ ಸ್ಥಾನದಲ್ಲಿ 90ರ ದಶಕದ ಜನಪ್ರಿಯ ನಟಿ ಲಾರಾ ದತ್ತಾ ಅವರಿದ್ದಾರೆ. ನಟಿ 2026ರಲ್ಲಿ ಎರಡು ದೊಡ್ಡ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಬಹುತಾರಾಗಣದ 'ವೆಲ್‌ಕಮ್ ಟು ದಿ ಜಂಗಲ್' ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಸಿನಿಮಾ ವಿಶ್ವದಾದ್ಯಂತ 192.75 ಕೋಟಿ ಗಳಿಕೆ ಮಾಡಿದೆ. ಇನ್ನು ನಟಿಯ ಎರಡನೇ ಸಿನಿಮಾ 'ರಾಮಾಯಣ'. ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಸಿನಿಮಾ ಇಲ್ಲಿಯವರೆಗೆ ವಿಶ್ವದಾದ್ಯಂತ 1,574.60 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಲಾರಾ ದತ್ತಾ ಎರಡೂ ಸಿನಿಮಾಗಳಿಂದ ಒಟ್ಟು 1,767.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದಾರೆ.

46
ರಕುಲ್ ಪ್ರೀತ್ ಸಿಂಗ್

ಮೂರನೇ ಸ್ಥಾನದಲ್ಲಿ ರಕುಲ್ ಪ್ರೀತ್ ಸಿಂಗ್ ಇದ್ದಾರೆ. ನಟಿ 2026ರಲ್ಲಿ ಎರಡು ಪ್ರಮುಖ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಕುಲ್ ಪ್ರೀತ್ ಸಿಂಗ್ ಮೊದಲಿಗೆ 'ಪತಿ ಪತ್ನಿ ಔರ್ ವೋ ದೋ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ್ದು, ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 67.96 ಕೋಟಿ ಗಳಿಸಿತ್ತು. ನಟಿಯ ಎರಡನೇ ಸಿನಿಮಾ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ'. ಈ ಸಿನಿಮಾ ವಿಶ್ವದಾದ್ಯಂತ 1,574.60 ಕೋಟಿ ಗಳಿಸಿದ್ದು, ಈ ಮೂಲಕ ನಟಿಯ ಎರಡೂ ಸಿನಿಮಾಗಳು ಒಟ್ಟಾಗಿ 1,642.56 ಕೋಟಿ ರೂಪಾಯಿ ಗಳಿಕೆ ಮಾಡಿವೆ.

56
ಸಾಯಿ ಪಲ್ಲವಿ

ನಾಲ್ಕನೇ ಸ್ಥಾನದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಇದ್ದಾರೆ. ನಟಿ 2026ರಲ್ಲಿ ಇಲ್ಲಿಯವರೆಗೆ ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಮೊದಲ ಸಿನಿಮಾ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಜೊತೆಗಿನ 'ಏಕ್ ದಿನ್'. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿದ್ದು, ಕೇವಲ 5.52 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇನ್ನು ನಟಿಯ ಎರಡನೇ ಸಿನಿಮಾ 'ರಾಮಾಯಣ'. ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಇಲ್ಲಿಯವರೆಗೆ 1,574.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇವರ ಮೂರನೇ ಸಿನಿಮಾ 'ಓಂ ಚಾಪ್ಟರ್ 1'. ಈ ಸಿನಿಮಾ ನವೆಂಬರ್ 20ರಂದು ಬಿಡುಗಡೆಯಾಗಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ 17.70 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ನಟಿ ತಮ್ಮ ಮೂರು ಸಿನಿಮಾಗಳಿಂದ ಇಲ್ಲಿಯವರೆಗೆ ಒಟ್ಟು 1,597.82 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾರೆ.

66
ಮಮಿತಾ ಬೈಜು

ಈ ಪಟ್ಟಿಯ ಕೊನೆಯ ಸ್ಥಾನದಲ್ಲಿ ಮಲಯಾಳಂ ನಟಿ ಮಮಿತಾ ಬೈಜು ಇದ್ದಾರೆ. ಮಮಿತಾ 2026ರಲ್ಲಿ ಇಲ್ಲಿಯವರೆಗೆ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಟಿಯ ಮೊದಲ ಸಿನಿಮಾ 'ಜನ ನಾಯಕನ್' 327.81 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಎರಡನೇ ಸಿನಿಮಾ 'ಕಾರಾ' 54.82 ಕೋಟಿ ರೂಪಾಯಿ ಗಳಿಸಿದೆ. ಮೂರನೇ ಸಿನಿಮಾ 'ವಿಶ್ವನಾಥ್ ಅಂಡ್ ಸನ್ಸ್' 212.34 ಕೋಟಿ ರೂಪಾಯಿ ಗಳಿಕೆ ಮಾಡಿದ್ದರೆ, ನಾಲ್ಕನೇ ಸಿನಿಮಾ 'ಬೆತ್ಲೆಹೆಮ್ ಕುಟುಂಬ ಯುನಿಟ್' 333.09 ಕೋಟಿ ರೂಪಾಯಿ ಗಳಿಸಿದೆ. ಈ ನಾಲ್ಕೂ ಸಿನಿಮಾಗಳ ಮೂಲಕ ಮಮಿತಾ ಬೈಜು ವಿಶ್ವದಾದ್ಯಂತ ಒಟ್ಟು 928.06 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories