'ಪ್ರಣವಿಲ್ಲದೆ ಬದುಕಲು ಸಾಧ್ಯವೇ?..' ಶ್ರುತಿ ಹಾಸನ್ ಉತ್ತರ ಕೇಳಿ ಕಂಗಲಾದ ಅಭಿಮಾನಿ!

Published : Nov 20, 2026, 03:06 PM IST

ಖ್ಯಾತ ನಟ ಕಮಲ್ ಹಾಸನ್ ಪುತ್ರಿ ನಟಿ ಶ್ರುತಿ ಹಾಸ ಮುಚ್ಚುಮರೆಯಿಲ್ಲದೆ ನೇರ ಮಾತನಾಡುವ ನಟಿಯರಲ್ಲಿ ಒಬ್ಬರು. ಶ್ರುತಿ ಹಾಸನ ಖ್ಯಾತ ನಟನ ಪುತ್ರಿಯಾಗಿದ್ದರು ಸಿನಿಮಾ ಕ್ಷೇತ್ರದಲ್ಲಿ ಸ್ವಂತ ಪ್ರತಿಭೆಯಿಂದ ಮೇಲೆ ಬಂದವರು. ಇತ್ಚೀಚಿಗೆ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆ ಶ್ರುತಿ ಹಾಸನ ಶಾಕಿಂಗ್ ಉತ್ತರ ನೋಡಿ!

PREV
16
ಶ್ರುತಿ ಹಾಸನ್ ಉತ್ತರಕ್ಕೆ ಫ್ಯಾನ್ಸ್ ಶಾಕ್

ಖ್ಯಾತ ನಟ ಕಮಲ್ ಹಾಸನ್(actor Kamal Haasan) ಮುದ್ದಿನ ಮಗಳು ಹಾಗೂ ನಟಿ ಇವೆಲ್ಲವುಗಳಿಗಿಂತ ಮುಖ್ಯವಾಗಿ ಮುಕ್ತವಾಗಿ ಮಾತನಾಡುವ ಶ್ರುತಿ ಹಾಸನ್ ಬಗ್ಗೆ ವಿಶೇಷವಾಗಿ ಹೇಳುವಂತದ್ದೇನೂ ಇಲ್ಲ. ಅವರು ಯಾವುದನ್ನೇ ಆಗಲಿ ಮುಕ್ತವಾಗಿ, ನಿಂತ ಜಾಗದಲ್ಲೇ ನೇರವಾಗಿ ಮಾತನಾಡುವ ನಟಿ. ಖ್ಯಾತ ನಟನಾಗಿ ಮಗಳಾಗಿ ಚಿತ್ರರಂಗ ಪ್ರವೇಶಿಸಿದರೂ ಅವರು ತಮ್ಮದೇ ಆದ ಪ್ರತಿಭೆಯಿಂದ ಬೆಳೆದವರು, ಅಭಿಮಾನಿಗಳನ್ನ ಗಳಿಸಿದವರು.

26
ಶ್ರುತಿ ಹಾಸನ್ ಒಟಿಟಿ, ಸಿನಿಮಾ, ವೆಬ್ ಸೀರಿಸ್‌ಗಳಲ್ಲಿ ಬ್ಯುಸಿ

ಶೃತಿ ಹಾಸನ್ ತಮ್ಮ ನೇರ ನುಡಿಗಳಿಂದಾಗಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ನಟನೆಯಲ್ಲಿ ಮಾತ್ರವಲ್ಲದೆ ಉತ್ತಮ ಡ್ಯಾನ್ಸರ್, ಗಾಯಕಿಯೂ ಹೌದು.

ಶ್ರುತಿ ಹಾಸನ ಕ್ರಾಕ್, ವಕೀಲ್ ಸಾಬ್ ಚಿತ್ರಗಳ ಯಶಸ್ಸಿನ ನಂತರ ಇದೀಗ ಪ್ರಭಾಸ್ ನಟಿಸಿರುವ ಸಲಾರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಶ್ರುತಿ ಹಾಸನ್ ವೆಬ್ ಸರಣಿ ಹಾಗೂ ತಮಿಳು ಚಿತ್ರಗಳಲ್ಲೂ ಬ್ಯುಸಿಯಾಗಿದ್ದಾರೆ. ಇವೆಲ್ಲದರ ನಡುವೆಯೂ ಸೋಷಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಆಗಿರುವ ನಟಿ ಆಗಾಗ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿ ಗಮನ ಸೆಳೆಯುತ್ತಿರುತ್ತಾರೆ.

36
ಶ್ರುತಿ ಹಾಸನ ಯಾರೊಂದಿಗೆ ಡೇಟಿಂಗ್‌ನಲ್ಲಿದ್ದಾರೆ>

ಕೆಲವು ವರ್ಷಗಳ ಹಿಂದೆ ಶ್ರುತಿ ಹಾಸನ್ ಯುಕೆ ಮೂಲದ ಗಾಯಕ ಮೈಕೆಲ್ ಕೊರಾಸ್ಲಿ ಅವರನ್ನ ಪ್ರೀತಿಸುತ್ತಿದ್ದರು. ಇಬ್ಬರು ಕೆಲಕಾಲ ಡೇಟಿಂಗ್‌ನಲ್ಲಿದ್ದರು. ಬಳಿಕ ಅವರು ಪರಸ್ಪರ ದೂರವಾದರು. ನಂತರ ಶಾಂತನು ಹಜಾರಿಕಾ ಎಂಬ ಚಿತ್ರಕಲೆ ಕಲಾವಿದನನ್ನು ಪ್ರೀತಿಸಿದರು. ಟಾಲಿವುಡ್‌ನಲ್ಲಿ ಕೇಳಿಬರುವ ಸುದ್ದಿಯ ಪ್ರಕಾರ, ಈಗಲೂ ಮುಂಬೈನಲ್ಲಿ ಒಂದೇ ಫ್ಲಾಟ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ.

46
ಫ್ಯಾನ್ಸ್ ಕೇಳಿದ ಆ ಪ್ರಶ್ನೆಗೆ ಶ್ರುತಿ ಹಾಸನ್ ಕೋಪಗೊಂಡಿದ್ದೇಕೆ?

ಇತ್ತೀಚೆಗೆ ಶ್ರುತಿ ಹಾಸನ್ ಇನ್‌ಸ್ಟಾಗ್ರಾಮ್ ನಲ್ಲಿ ಅಭಿಮಾನಿ ಫಾಲೋವರ್ಸ್‌ಗಳ ಕಾಮೆಂಟ್ ಒಂದಕ್ಕೆ ತಾಳ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ ಇದೀಗ ಶ್ರುತಿ ಅವರ ಪ್ರತಿಕ್ರಿಯೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು, ಹೊಸ ಚರ್ಚೆಗಳನ್ನು ಹುಟ್ಟುಹಾಕಿತು. ಅಷ್ಟು ಅಭಿಮಾನಿ ಕೇಳಿದ ಪ್ರಶ್ನೆಯಾದರೂ ಏನು? ಯಾಕೆ ಕೋಪಗೊಂಡರು?

56
ಪ್ರಣವಿಲ್ಲದೆ ಬದುಕಲು ಸಾಧ್ಯವೇ? ಅಭಿಮಾನಿಯ ಶಾಕಿಂಗ್ ಪ್ರಶ್ನೆ

ಇನ್‌ಸ್ಟಗ್ರಾಂನಲ್ಲಿ ಅಭಿಮಾನಿಯೊಬ್ಬ ಮದುವೆ ಬಗ್ಗೆ ಪ್ರಶ್ನೆ ಕೇಳಿದಾಗ ಶ್ರುತಿ ಹಾಸನ್ ಕೋಪಗೊಂಡರು, ಅಲ್ಲಪ್ಪಾ ಜಗತ್ತಿನಲ್ಲಿ ಎಷ್ಟೋ ಸಮಸ್ಯೆಗಳಿವೆ ಅವೆಲ್ಲ ಬಿಟ್ಟು ಇದೆಲ್ಲ ಸಮಸ್ಯೆ ಏನು ಎಂದು ಮರುಪ್ರಶ್ನಿಸಿದರು.

ಪ್ರಣಯವಿಲ್ಲದೆ ಬದುಕಬಹುದೇ? ಆಹಾರ ಮತ್ತು ಲೈ*ಗಿಕತೆ ಇವೆರಡಲ್ಲಿ ಯಾವುದನ್ನ ಬಿಟ್ಟು ಬದಕಲು ಸಾಧ್ಯವಿಲ್ಲ ಎಂಬ ಅಭಿಮಾನಿಯ ಶಾಕಿಂಗ್ ಪ್ರಶ್ನೆಗೆ ತಾಳ್ಮೆಯಿಂದ ಉತ್ತರಿಸಿದ ಶ್ರುತಿ ಹಾಸನ, 'ನೀವು ಕೇಳಿದ ಪ್ರಶ್ನೆಗೆ ನಾನು ಏನು ಹೇಳಬೇಕು? ನೀವು ಆಹಾರವಿಲ್ಲದೆ ಬದುಕಲು ಸಾಧ್ಯವೇ? ನಿನಗೆ ಊಟನೇ ಇಲ್ಲದಿದ್ರೆ ಬದುಕೋಕೆ ಸಾಧ್ಯವಾ? ಆಹಾರವಿಲ್ಲದಿದ್ರೆ ನೀವು ಸಾಯುತ್ತೀರಿ ಎಂದು ನಿಮಗೆ ತಿಳಿದಿಲ್ಲವೆ? ಎಂದು ಮರುಪ್ರಶ್ನಿಸಿದ ಶ್ರುತಿ ಹಾಸನ್ ಒಂದು ಕ್ಷಣ ಅಭಿಮಾನಿಯ ಪ್ರಶ್ನೆಗೆ ಕೋಪಗೊಂಡರು.

66
ಶ್ರುತಿ ಹಾಸನ್ ಎರಡು ವರ್ಷ ಚಿತ್ರರಂಗದಿಂದ ದೂರ ಉಳಿದಿದ್ದೇಕೆ?

ಇದೇ ವೇಳೆ ಶ್ರುತಿ ಎರಡು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದಕ್ಕೂ ಅಭಿಮಾನಿಗಳು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಶ್ರುತಿ ಹಾಸನ್, ಸಿನಿಮಾಗಳಲ್ಲಿ ಅವಕಾಶದ ಕೊರತೆಯಿಂದಲ್ಲ, ಉದ್ದೇಶಪೂರ್ವಕವಾಗಿ ಆ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾರೆ. ಮುಂದುವರಿದು, ನಮ್ಮ ಪ್ರತಿಭೆ ಸುಧಾರಿಸಿಕೊಳ್ಳಲು ಸಮಯ ತೆಗೆದುಕೊಂಡಿದ್ದೇನೆ. ಸಿನಿಮಾ ಮಾಡುವಾಗ ಸಂಗೀತದ ಕಡೆ ಗಮನ ಕೊಡಲು ಆಗಲಿಲ್ಲ. ಈಗ ಎರಡಕ್ಕೂ ಸಮಾನ ಆದ್ಯತೆ ನೀಡಿದ್ದೇನೆ ಎಂದು ಹೇಳಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories