Top 10 Richest Indian Heroes: ಸಿನಿಮಾ ತಾರೆಯರು ಎಂದರೆ ಅವರ ಬಳಿ ಬಹಳಷ್ಟು ಆಸ್ತಿ ಇದೆ ಎಂದೇ ಸಾಮಾನ್ಯ ಜನರು ಭಾವಿಸುತ್ತಾರೆ. ಅದಕ್ಕಾಗಿಯೇ ಅವರು ಸಿನಿಮಾ ಸೆಲೆಬ್ರಿಟಿಗಳನ್ನು ತಮ್ಮ ರೋಲ್ ಮಾಡೆಲ್ ಎನ್ನುವಂತೆ ಆರಾಧಿಸುತ್ತಾರೆ. ಅನುಕರಿಸುತ್ತಾರೆ. ಅವರ ರೀತಿಯಲ್ಲೇ ಬದುಕಬೇಕು ಎಂದು ತಮ್ಮ ಆಸ್ತಿ ಮತ್ತು ಐಷಾರಾಮಿ ಜೀವನದ ಬಗ್ಗೆ ನಿರಂತರವಾಗಿ ಕನಸು ಕಾಣುತ್ತಾರೆ. ಆದರೆ ಸತ್ಯ ಸಂಗತಿ ಏನು? ಈ ಸ್ಟೋರಿ ನೋಡಿ...
ಅದಕ್ಕಾಗಿ ಹಲವರು ಗೂಗಲ್‌ನಲ್ಲಿ ಸರ್ಚ್ ಮಾಡುತ್ತಾರೆ- 'ನಮ್ಮ ದೇಶದ ಅತ್ಯಂತ ಶ್ರೀಮಂತ ನಾಯಕ ನಟರು ಯಾರು? ಯಾರ ಬಳಿ ಹೆಚ್ಚು ಆಸ್ತಿಇದೆ? ಅವರು ಎಲ್ಲಿ ಇದ್ದಾರೆ?' ಹೀಗೆ ಸಿನಿಮಾ ತಾರೆಯರಿಗೆ ಸಂಬಂಧಿಸಿ ಗೂಗಲ್ ಸರ್ಚ್ ನಡೆಸುವವರ ಸಂಖ್ಯೆ ಅಧಿಕವಾಗಿದೆ. ಇದು ಬಹಳಷ್ಟು ಜನರಿಗೆ ಬಹಳ ಆಸಕ್ತಿದಾಯಕ ವಿಷಯವಾಗಿದೆ. ಈ ನಿಟ್ಟಿನಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ. ಈ ಪಟ್ಟಿಯಲ್ಲಿ ಯಾರು ಅಗ್ರಸ್ಥಾನದಲ್ಲಿದ್ದಾರೆ ಎಂದು ನೋಡೋಣ..
10 ರಿಂದ 1 ಎಣಿಕೆ ಮೂಲಕ ಬರೋದಾದ್ರೆ- ಕೊನೆಯದಾಗಿ, ಭಾರತದ ಟಾಪ್ 10 ಶ್ರೀಮಂತ ನಾಯಕ ಮೆಗಾ ಪವರ್ ಸ್ಟಾರ್ ರಾಮ್ ಚರಣ್. ಅವರ ಪ್ರಸ್ತುತ ನಿವ್ವಳ ಮೌಲ್ಯ 1,630 ಕೋಟಿ ರೂ. ಆದ್ದರಿಂದ, ಟಾಪ್ 10 ಶ್ರೀಮಂತ ಭಾರತೀಯ ನಾಯಕರ ಪಟ್ಟಿಯಲ್ಲಿ ಕಿರಿಯ ವಯೋಮಾನದ, ಏಕೈಕ ಯುವ ನಾಯಕ ನಟ ರಾಮ್ ಚರಣ್.