ಈ ಸಿನಿಮಾ ನೋಡಿ 38 ವಿಚ್ಚೇದನ ಪ್ರಕರಣ ಕ್ಯಾನ್ಸಲ್… ಅಂತದ್ದೇನಿದೆ ಈ ಚಿತ್ರದಲ್ಲಿ?

Published : Jan 29, 2026, 05:05 PM IST

Must Watch Film: ಸಿನಿಮಾ ನೋಡಿ ಕೆಟ್ಟೋಗ್ತಾರೆ ಅಂತ ಹೇಳಿರೋದನ್ನ ಕೇಳಿದ್ದೀರಿ. ಆದರೆ ಈ ಒಂದು ತಮಿಳು ಸಿನಿಮಾದಿಂದ 38 ವಿಚ್ಚೇದನ ಪ್ರಕರಣಗಳು ಕ್ಯಾನ್ಸಲ್ ಆಗಿವೆ ಅಂದ್ರೆ ನಂಬ್ತೀರಾ? ನಂಬಲೇಬೇಕು. ಯಾಕಂದ್ರೆ ಇದು ನಿಜ. ಅಷ್ಟಕ್ಕೂ ಈ ಚಿತ್ರ ಯಾವುದು? ಆ ಚಿತ್ರದ ಕಥೆಯಲ್ಲಿ ಏನಿದೆ ನೋಡೋಣ. 

PREV
17
ಸಿನಿಮಾ ನೋಡಿ ಹಾಳಾಗ್ತಾರ?

ಹೆಚ್ಚಾಗಿ ನಾವು ಸಿನಿಮಾ ನೋಡಿ ಹಾಳಾದ್ರು ಅನ್ನೋದನ್ನು ಕೇಳಿದ್ದೇವೆ. ಆದರೆ ಈ ಸಿನಿಮಾ ನೋಡಿದ ಮೇಲೆ ಆಗಿದ್ದು ಮಾತ್ರ ಬೇರೆ. ಈ ಚಿತ್ರ ರಿಲೀಸ್ ಆಗಿ ಎರಡೇ ವಾರಕ್ಕೆ ತ್ರಿಚಿಯಲ್ಲಿ 38 ವಿಚ್ಚೇದನ ಪ್ರಕರಣಗಳು ಕ್ಯಾನ್ಸಲ್ ಆಗಿದ್ದವಂತೆ. ಅಂದ್ರೆ ಒಂದು ಸಿನಿಮಾಗೆ ಸಂಬಂಧವನ್ನು ಉಳಿಸುವ ತಾಕತ್ತು ಕೂಡ ಇದೆ ಅನ್ನೋದು ಗೊತ್ತಾಗುತ್ತೆ ಅಲ್ವಾ? ಹಾಗಿದ್ರೆ ಆ ಸಿನಿಮಾ ಯಾವುದು? ಅದರ ಕತೆ ಏನು ನೋಡೋಣ.

27
ಇರಗಪಟ್ರು ಸಿನಿಮಾ

‘ಇರಗಪಟ್ರು’ ತಮಿಳು ಭಾಷೆಯಲ್ಲಿ ಬಿಡುಗಡೆಯಾದ ಸಿನಿಮಾ, ಚಿತ್ರವನ್ನು ಯುವರಾಜ ದಯಾಲನ್ ನಿರ್ದೇಶನ ಮಾಡಿದ್ದಾರೆ. 2023ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಮತ್ತು ವಿಕ್ರಮ್ ಪ್ರಭು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇರಗಪಟ್ರು ಅಂದರೆ ಗಟ್ಟಿಯಾಗಿ ಹಿಡಿದಿಟ್ಟುಕೋ ಎಂದು ಅರ್ಥ. ಇದು ಪ್ರೀತಿಯ ಕಥೆಯನ್ನು ಹೇಳುವ ಕಥೆಯಾಗಿದ್ದು, ದಾಂಪತ್ಯ ಜೀವನದ ಕುರಿತಾಗಿ ನಿರ್ದೇಶಕರು ಅದ್ಭುತವಾಗಿ ಸೂಕ್ಷ್ಮವಾಗಿ ಕಥೆಯನ್ನು ನೆಯ್ದಿದ್ದಾರೆ.

37
ಜೀವನಕ್ಕೆ ತುಂಬಾ ಹತ್ತಿರವಾದ ಸಿನಿಮಾ

ಈ ಚಿತ್ರದಲ್ಲಿ ನಿರ್ದೇಶಕ ಯುವರಾಜ ದಯಾಲನ್ ದಾಂಪತ್ಯ ಜೀವನದಲ್ಲಿನ ಪ್ರತಿಯೊಂದು ಸಂಬಂಧ, ಸನ್ನಿವೇಶವನ್ನು ನಮ್ಮ- ನಿಮ್ಮ ಜೀವನದ ಕಥೆ ಎನ್ನುವಂತೆ ತೋರಿಸಿದ್ದಾರೆ. ರೌಡಿಸಂ, ರೊಮ್ಯಾನ್ಸ್ ಎಲ್ಲಾ ಅಬ್ಬರಗಳ ಮಧ್ಯೆ ಈ ತಮಿಳು ಸಿನಿಮಾ ವಿಭಿನ್ನವಾಗಿ ಆದರೆ ನಿಜಜೀವನಕ್ಕೆ ತುಂಬಾ ಹತ್ತಿರವಾಗಿ ನಿಲ್ಲುತ್ತೆ. ಯಾಕಂದ್ರೆ ಇದು ನಮ್ಮ ನಿಮ್ಮ ಸಂಸಾರದಲ್ಲಿ ನಡೆಯುವ ಘಟನೆಯೇ… ಹಾಗಾಗಿ ನಿಮ್ಮ ಸಂಗಾತಿ ಜೊತೆ ಕುಳಿತು ನೋಡಲೇಬೇಕಾದ ಸಿನಿಮಾ.

47
ಕಥೆಯಲ್ಲಿ ಏನಿದೆ?

ದಾಂಪತ್ಯದ ವಿವಿಧ ಹಂತದಲ್ಲಿರುವ ಮೂರು ಜೋಡಿಗಳ ಈ ಕಥೆ ಸಾಗುತ್ತಾ ಹೋದಂತೆ, ನಮಗೂ ನಮ್ಮ ಜೀವನದಲ್ಲಿ ನಡೆದ ಘಟನೆಗಳಿಗೆ ರಿಲೇಟ್ ಆಗುತ್ತಾ ಹೋಗುತ್ತೆ. ಜಗಳಮಾಡದೇ, ಕೋಪ ಮಾಡದೇ ಯಾವಾಗಲೂ ಖುಷಿಯಾಗಿರೋ ಕಪಲ್ಸ್, ಪ್ರೀತಿ ಮಾಡಿ ಮದುವೆಯಾಗಿ ನಂತರ ನಿರ್ಲಕ್ಷಕ್ಕೆ ಒಳಗಾಗೋ ಜೋಡಿಗಳು, ಮದುವೆಯಾಗಿ ಮಗು ಆದ ಮೇಲೆ ಹೆಂಡತಿ ದಪ್ಪ ಇದ್ದಾಳೆ ಎಂದು ಹೆಂಡತಿಯನ್ನು ಧೂಷಿಸುವ ಜೋಡ. ಹೀಗೆ ನಮ್ಮ ನಿಮ್ಮಲ್ಲಿ, ಅಥವಾ ನಮ್ಮ ನಡುವೆ ಇರುವ ಮೂರು ರೀತಿಯ ಸಂಬಂಧಗಳಲ್ಲಿ ಸಿಕ್ಕು ನಿಜವಾದ ಪ್ರೀತಿ ಅಂದರೆ ಏನು ? ದಾಂಪತ್ಯ ಜೀವನ ಅಂದ್ರೇನು ಅಂತಾನೆ ಮರಿತಿರೋ ಜೋಡಿಗಳ ಕಥೆ ಜೊತೆ ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತಲೇ ಹೋಗುತ್ತೇವೆ.

57
ಪರ್ಫೆಕ್ಟ್ ಜೋಡಿಗಳು

ಮ್ಯಾರೇಜ್ ಕೌನ್ಸಿಲರ್ ಮತ್ತು ಸೈಕಲಾಜಿಸ್ಟ್ ಆಗಿ ಮಿತ್ರ ಮನೋಹರ್, ಇತರ ಜೋಡಿಗಳಿಗೆ ದಾಂಪತ್ಯ ಜೀವನದ ಸಲಹೆ ನೀಡುತ್ತಾ, ಅವರ ಸಮಸ್ಯೆಗಳನ್ನು ಕೇಳುತ್ತಾ,, ತನ್ನ ಜೀವನದಲ್ಲಿ ಈ ರೀತಿ ಆಗಲೇಬಾರದು ಎನ್ನುವ ಸೈಕಲಾಜಿಯನ್ನು ಗಂಡನಿಗೆ ವಿವರಿಸುತ್ತಾ, ಅದೇ ಸ್ಟ್ರಾಟರ್ಜಿಯಲ್ಲಿ ಕೋಪ ಮಾಡದೇ ಪರ್ಫೆಕ್ಟ್ ಕಪಲ್ಸ್ ಆಗಲು ಬಯಸಿ, ಸಂಸಾರದ ಸ್ವಾಧವನ್ನೇ ಕಳೆದುಕೊಳ್ಳುಬಿಡುತ್ತಾಳೆ. ಮತ್ತೊಂದೆಡೆ ರಂಗೇಶ್ ಮತ್ತು ಪವಿತ್ರ ಜೋಡಿ. ಐಟಿಯಲ್ಲಿ ಕೆಲಸ ಮಾಡುವ ರಂಗೇಶ್, ತನ್ನ ಹೆಂಡತಿ, ತಿನ್ನುತ್ತಾ, ಮಗುವಾದ ಬಳಿಕ ತೂಕ ಹೆಚ್ಚಿಸಿಕೊಂಡಿದ್ದಾಳೆ ಎಂದು ಅವಳ ಮೇಲೆ ಹರಿಹಾಯ್ದುಕೊಂಡಿರ್ತಾನೆ. ಕೊನೆಗೆ ಡಿವೋರ್ಸ್ ಕೊಡಲು ನಿರ್ಧರಿಸುತ್ತಾನೆ. ಆದರೆ ನಿಜವಾಗಿಯೂ ಸಮಸ್ಯೆ ಇರೋದು ಹೆಂಡತಿಯಲ್ಲಿ ಅಲ್ಲ, ತನ್ನ ಬಾಲ್ಯದ ಟ್ರೌಮಾದಲ್ಲಿ ಅನ್ನೋದನ್ನು ತಿಳಿಯುತ್ತಾನೆ.

67
ಪ್ರೀತಿ ಮಾಡಿ ಡಿವೋರ್ಸ್ ಕೊಡೋದು ಯಾಕೆ?

ಇನ್ನೊಂದು ಜೋಡಿ ದಿವ್ಯ ಮತ್ತು ಅರ್ಜುನ್. ಪ್ರೀತಿಸಿ ಮದುವೆಯಾದ 20ರ ಹರೆಯದಲ್ಲಿರುವ ಜೋಡಿ, ನಂತರ ಹೇಗೆ ಬದಲಾಗುತ್ತಾರೆ. ಕೊನೆಗೆ ದಿವ್ಯನಿಗೆ ಗಂಡನ ಜೊತೆ ಮಾತನಾಡಲು ಬೇಸರವಾಗುವಂತಹ ಖಿನ್ನತೆ ಕಾಡುತ್ತದೆ. ಮತ್ತೆ ಸಂಸಾರ ಸರಿಪಡಿಸಲು ಮ್ಯಾರೇಜ್ ಕೌನ್ಸಿಲರ್ ಮೊರೆ ಹೋಗುವ ಅರ್ಜುನ್ ಗೆ ತನ್ನ ತಪ್ಪು ಏನು ಅನ್ನೋದು ತಿಳಿಯುತ್ತೆ….

77
ಪ್ರತಿಯೊಬ್ಬರು ನೋಡಲೇಬೇಕಾದ ಸಿನಿಮಾ

ಇಂದಿನ ಸಮಯದಲ್ಲಿ ಎಲ್ಲಾದಕ್ಕೂ ಡಿವೋರ್ಸ್ ಒಂದೇ ಉತ್ತರ ಅಂತ ಯೋಚನೆ ಮಾಡುತ್ತಿರುವ ಜೋಡಿಗಳು, ತಾವು ಪರ್ಫೆಕ್ಟ್ ಕಪಲ್ ಆಗಿರಬೇಕೆಂದು, ಇಷ್ಟ ಇಲ್ಲದೇ ಇದ್ರೂ ಎಲ್ಲವನ್ನೂ ಮಾಡುವ ಜೋಡಿಗಳು, ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಾಗದೇ ಅದರ ಒತ್ತಡವನ್ನು ಸಂಸಾರದ ಮೇಲೆ ತೋರಿಸುವ ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ ಇದು. ದಾಂಪತ್ಯ ಜೀವನದಲ್ಲಿ ಪ್ರೀತಿ ಅನ್ನೋದು ಎಷ್ಟು ಮುಖ್ಯ , ಎಲ್ಲಾದಕ್ಕೂ ಡಿವೋರ್ಸ್ ಉತ್ತರ ಅಲ್ಲ, ಇಬ್ಬರು ಕುಳಿತು ಮನಸು ಬಿಚ್ಚಿ ಮಾತನಾಡಿದರೆ, ಬಗೆಹರೆಯದ ಸಮಸ್ಯೆಗಳೇ ಇಲ್ಲ ಅನ್ನೋದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸಮಸ್ಯೆ ಬಂದರೆ ಸಂಬಂಧವನ್ನು ಬಿಟ್ಟುಕೊಡಬೇಡಿ. ಗಟ್ಟಿಯಾಗಿ ಹಿಡಿಯಿರಿ ಎಂದು ನಿರ್ದೇಶಕರು ಹೇಳಿದ್ದಾರೆ. ಅಂದಹಾಗೇ Netflix ನಲ್ಲಿ ಸಿನಿಮಾ ಇದೆ. ಫ್ರೀ ಇದ್ರೆ ನೋಡಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories