ಐಶ್ವರ್ಯಾ ರೈ - ಆಲಿಯಾ ಭಟ್ ವರೆಗೆ ಬಾಲಿವುಡ್‌ನ ಟಾಪ್ 10 ಶ್ರೀಮಂತ ನಟಿಯರು

Published : Apr 04, 2023, 04:58 PM IST

ಬಾಲಿವುಡ್‌ ನಟಿಯರು ನಟರಿಗೆ ಸಮಾನಾಗಿ ಸಂಭಾವನೆ ಪಡೆಯುತ್ತಿದ್ದಾರೆ ಮತ್ತು ಅವರಂತೆ ಲಕ್ಷುರಿಯಸ್‌ ಜೀವನ ನಡೆಸುತ್ತಿದ್ದಾರೆ. ಇನ್ನೂ ಶ್ರೀಮಂತಿಕೆಯಲ್ಲೂ ಸಹ ಈ ನಟಿಯರು ಯಾವುದೇ ನಟನಿಗೂ ಕಡಿಮೆ ಇಲ್ಲ. ಬಾಲಿವುಡ್‌ನ ಟಾಪ್ 10 ಶ್ರೀಮಂತ ನಟಿಯರ ಪಟ್ಟಿ ಇಲ್ಲಿದೆ.  

PREV
111
ಐಶ್ವರ್ಯಾ ರೈ - ಆಲಿಯಾ ಭಟ್ ವರೆಗೆ ಬಾಲಿವುಡ್‌ನ ಟಾಪ್ 10 ಶ್ರೀಮಂತ ನಟಿಯರು

ಐಶ್ವರ್ಯಾ ರೈ ಬಚ್ಚನ್ 100 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಬಾಲಿವುಡ್‌ನ ಅತ್ಯಂತ ಶ್ರೀಮಂತ ನಟಿ ಎಂದು ವರದಿಯಾಗಿದೆ. ಬಚ್ಚನ್ ಮಗನ ಕೈ ಹಿಡಿದ ಮೇಲೆ ಹೆಚ್ಚು ಚಿತ್ರಗಳಲ್ಲಿ ನಟಿಸಿದೇ ಹೋದರೂ, ಹೆಚ್ಚು ಸಂಭಾವನೆ ಪಡೆಯುವ ನಟಿ ಈಕೆ.

211

 70 ಮಿಲಿಯನ್ ನೆಟ್‌ವರ್ತ್‌ ಹೊಂದಿರುವ ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಚೋಪ್ರಾ ಅವರು ಎರಡನೇ ಶ್ರೀಮಂತ ಬಾಲಿವುಡ್ ನಟಿ ಆಗಿದ್ದಾರೆ. ಮದುವೆಯಾಗಿ ಅಮೆರಿಕದಲ್ಲಿ ಸೆಟಲ್ ಆದರೂ, ಹಾಲಿವುಡ್ ಚಿತ್ರಗಳು ಸೇರಿ ಅನೇಕ ಪ್ರಮೋಷನ್ ಆ್ಯಕ್ಟಿವಿಟಿಸ್‌ನಲ್ಲಿ ಈ ನಟಿ ಸಂಪಾದಿಸುತ್ತಾರೆ.

311

ನಂತರ ಕರೀನಾ ಕಪೂರ್ ಖಾನ್ 60 ಮಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ ಮತ್ತು ಇಂದಿಗೂ ಬಾಲಿವುಡ್‌ನಲ್ಲಿ ತಮ್ಮ ಚಾರ್ಮ್‌ ಉಳಿಸಿಕೊಂಡಿದ್ದಾರೆ. ಲಾಲ್ ಸಿಂಗ್ ಚಡ್ಡಾ ನಂತರ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳದೇ ಹೋದರೂ, ಪ್ರಮೋಷನ್ ಮೂಲಕವೇ ನೂರಾರು ಕೋಟಿ ದುಡಿಯುತ್ತಾರೆ ಈ ನಟಿ.

411

ಟಾಪ್‌ ನಟಿ ಎಂದೇ ಪರಿಗಣಿಸಲಾಗುತ್ತಿರುವ ದಿವಾ ದೀಪಿಕಾ ಪಡುಕೋಣೆ 440 ಮಿಲಿಯನ್  ಡಾಲರ್‌ ನೆಟ್‌ ವರ್ತ್‌ ಹೊಂದಿ ನಾಲ್ಕನೇ ಶ್ರೀಮಂತ ಬಾಲಿವುಡ್ ನಟಿ  ಸ್ಥಾನದಲ್ಲಿದ್ದಾರೆ. ಶಾರುಖ್ ಖಾನ್ ಜೊತೆ ಈಕೆ ನಟಿಸಿದ ಪಠಾಣ ಚಿತ್ರದ ನಂತರ ಮತ್ತಷ್ಟು ಚಾರ್ಮ್ ಹೆಚ್ಚಿಸಿಕೊಂಡಿದ್ದಾರೆ ಡಿಪ್ಪಿ.

511

ಅನುಷ್ಕಾ ಶರ್ಮಾ 36 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಈ ಪಟ್ಟಿಯಲ್ಲಿ ಸ್ಥಾನವನ್ನು ಹೊಂದಿದ್ದಾರೆ. ಅನುಷ್ಕಾ ಅವರು ತಮ್ಮದೇ ಪ್ರೊಡಕ್ಷನ್‌ ಹೌಸ್‌ ಸಹ ಹೊಂದಿದ್ದಾರೆ.

611

90ರ ದಶಕ ಬಾಲಿವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರಾದ ಮಾಧುರಿ ದೀಕ್ಷಿತ್ 34 ಮಿಲಿಯನ್ ಡಾಲರ್ ನೆಟ್‌ ವರ್ತ್‌ ಹೊಂದಿದ್ದಾರೆ ಮತ್ತು ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದ್ದಾರೆ.

711

ಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಪತ್ನಿ ಮತ್ತು ನಟಿ ರಾಣಿ ಮುಖರ್ಜಿ ಮುಖರ್ಜಿ ಅವರು 25 ಮಿಲಿಯನ್ ಡಾಲರ್ ಮೌಲ್ಯದ ನೆಟ್‌ ವರ್ತ್‌ ಹೊಂದಿದ್ದಾರೆ ಎಂದು ವರದಿಯಾಗಿದೆ. 

811

ಕಾಜೋಲ್ 24 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಟಾಪ್ 10 ಬಾಲಿವುಡ್ ನಟಿಯರ ಪಟ್ಟಿಯಲ್ಲಿ 8ನೇ ಸ್ಥಾನ ಗಳಿಸಿದ್ದಾರೆ.
 

911

ಈ ಪಟ್ಟಿಯಲ್ಲಿ ಕತ್ರಿನಾ ಕೈಫ್‌ ಸಹ ಇದ್ದಾರೆ. ಕತ್ರಿನಾ ಅವರು 20ಮಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ ಎಂದು ಹೇಳಲಾಗಿದೆ.

1011

ಶಿಲ್ಪಾ ಶೆಟ್ಟಿ, ವಿದ್ಯಾ ಬಾಲನ್‌, ಪ್ರೀತಿ ಜಿಂಟಾ, ಸೋನಂ ಕಪೂರ್ ಮತ್ತು ಕಂಗನಾ ರಣಾವತ್‌ ನಂತರದ ಸ್ಥಾನ ಪಡೆದಿದ್ದಾರೆ ಎಂದು ವರದಿ  ಹೇಳಿದೆ. 

1111

ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಭಟ್ 12 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ 15 ನೇ ಸ್ಥಾನದಲ್ಲಿದ್ದಾರೆ.

Read more Photos on
click me!

Recommended Stories