ನೈಸಾ ಜೊತೆ ಕಾಜೋಲ್‌ ಫೋಟೋಶೂಟ್‌; ಅಮ್ಮ ಮಗಳ ಜೋಡಿಗೆ ಹಾಟ್ ಎಂದ ನೆಟ್ಟಿಗರು!

First Published Apr 4, 2023, 2:32 PM IST

90ರ ದಶಕದ ಬಾಲಿವುಡ್‌ ಚೆಲುವೆ ಕಾಜೋಲ್‌ ಇಂದಿಗೂ ತಮ್ಮದೇ ಆದ ಫ್ಯಾನ್ಸ್‌ ಬಳಗ ಹೊಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಕಾಜೋಲ್‌ ಇತ್ತೀಚಿನ ಪೋಟೋಶೂಟ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಳೆದ ದಿನಗಳಲ್ಲಿ ಮುಂಬೈನಲ್ಲಿ ನಡೆದ  NMACC ಗಾಲಾದಲ್ಲಿ ಇಂಡಿಯಾ ಇನ್ ಫ್ಯಾಶನ್ ಪ್ರದರ್ಶನದಲ್ಲಿ  ಬಾಲಿವುಡ್‌ ನಟಿ ಕಾಜೋಲ್‌ ಭಾಗವಹಿಸಿದ್ದರು. ಅಲ್ಲದೇ ಬಾಲಿವುಡ್‌ನ ಬಹುತೇಕ ತಾರೆಯರು ಪಾಲ್ಗೊಂಡು, ತಮ್ಮದೇ ಡ್ರೆಸ್ ಸೆನ್ಸ್‌ನಿಂದ ಸುದ್ದಿಯಾದರು.

Kajol

ಆ ಸಮಯದಲ್ಲಿ  ಕಾಜೋಲ್‌ ಧರಿಸಿದ್ದ ಔಟ್‌ಫಿಟ್‌ ಮತ್ತು ಲುಕ್‌ನಲ್ಲಿಯೇ ನಟಿ ಫೋಟೋಶೂಟ್‌ಗೆ  ಪೋಸ್‌ ನೀಡಿದ್ದಾರೆ ಮತ್ತು ಅವುಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮುತ್ತು ಮತ್ತು ಪಚ್ಚೆ ಚೋಕರ್, ಬನ್ ಹೇರ್‌ ಸ್ಟೈಲ್, ಮಾವ್ ಲಿಪ್ ಶೇಡ್, ಐಲೈನರ್, ಮಸ್ಕರಾ ಮತ್ತು ಬೀಮಿಂಗ್ ಹೈಲೈಟರ್‌ಗಳ ಮೂಲಕ ಕಾಜೋಲ್‌ ತಮ್ಮ ಲುಕ್‌ ಪೂರ್ಣ ಗೊಳಿಸಿದ್ದಾರೆ.

ಕಾಜೊಲ್‌ ತಮ್ಮ ಫೋಟೋಗಳಿಗೆ  'ಆತ್ಮವಿಶ್ವಾಸ ಎಂಬುದು ಮನಸ್ಸಿನಲ್ಲಿ ಮಾತ್ರವಲ್ಲ. ಇದು ಗಲ್ಲದ ಓರೆಯಲ್ಲಿದೆ. ಇದು ಕಣ್ಣುಗಳ ಅಂಚಿನಲ್ಲಿದೆ. ನೀವು ನಿಮ್ಮನ್ನು ಹಿಡಿದಿಟ್ಟುಕೊಳ್ಳುವ ರೀತಿಯಲ್ಲಿ ಇದೆ. ಇದು. ನನಗೆ ಗೊತ್ತು ನಾನು ಸುಂದರವಾಗಿದ್ದೇನೆ ಎಂಬ ನಗು ನಿಮ್ಮ ಆತ್ಮವಿಶ್ವಾಸವನ್ನು  ತೋರಿಸುತ್ತದೆ,' ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಕಾಜೋಲ್ ಅವರ ಜೊತೆ ಮಗಳು ನೈಸಾ ದೇವಗನ್ ಸಹ  ಮುಂಬೈನ NMACC ಗಾಲಾದಲ್ಲಿ ಇಂಡಿಯಾ ಇನ್ ಫ್ಯಾಶನ್ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಇವರನ್ನು ಸೆಲೆಬ್ರಿಟಿ ಸ್ಟೈಲಿಸ್ಟ್ ಆಸ್ತಾ ಶರ್ಮಾ ಅವರು ರೆಡಿ ಮಾಡಿದ್ದಾರೆ.

ಇಂದು ಕಾಜೋಲ್‌ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅಮ್ಮ ಮತ್ತು ಮಗಳು ಜೋಡಿ NMACC ಇವೆಂಟ್‌ನ ಎರಡನೇ ದಿನದ ತಮ್ಮ ಲುಕ್‌ ಅನ್ನು ಪ್ರದರ್ಶಿಸಿದ್ದಾರೆ.

ಕಾಜೋಲ್ ಅವರ ಮಗಳು ನೈಸಾ ಡೀಪ್‌ ವಿ ನೆಕ್‌ಲೈನ್,  ಕಟ್-ಔಟ್‌ ವೇಸ್ಟ್, ಬೆಳ್ಳಿಯ ಗರಿಗಳು ಮತ್ತು ಟಸೆಲ್ ಡಿಸೈನ್‌ ಹೊಂದಿದ  ಸ್ಕರ್ಟ್‌ ಜೊತೆ  ದಂತದ ಬಣ್ಣದ ನೆಟ್‌ ಕೇಪ್-ದುಪಟ್ಟಾವನ್ನು ಪೇರ್‌ ಮಾಡಿಕೊಂಡಿದ್ದಾರೆ. 

NMACC ಇವೆಂಟ್‌ಗಾಗಿ ಕಾಜೋಲ್‌ ಮತ್ತು ನೈಸಾ ಇಬ್ಬರೂ  ಡಿಸೈನರ್‌ ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ ಐವರಿ ಮತ್ತು ಸಿಲ್ವರ್‌ ಕಾಂಬಿನೇಷನ್‌ನ ಔಟ್‌ಫಿಟ್‌ ಆಯ್ಕೆ ಮಾಡಿಕೊಂಡಿದ್ದಾರೆ.

click me!