ಮಗ ಅಯಾನ್‌ ಹುಟ್ಟುಹಬ್ಬಕ್ಕೆ ಅಲ್ಲು ಅರ್ಜುನ್ ವಿ ಶ್‌ ಮಾಡಿದ್ದು ಹೀಗೆ

Published : Apr 03, 2023, 05:35 PM IST

ಸೌತ್‌ ಸೂಪರ್‌ ಸ್ಟಾರ್‌  ಅಲ್ಲು ಅರ್ಜುನ್  (Allu Arjun) ಅವರು ತನ್ನ ಮಗ ಅಯಾನ್‌ (Allu Ayan)) ಹುಟ್ಟುಹಬ್ಬಕ್ಕೆ ಶುಭ ಹಾರೈಸಲು ಮುದ್ದಾದ ಪೋಸ್ಟ್ ಮಾಡಿದ್ದಾರೆ. ಮಗನನ್ನು 'ಅವರ ಜೀವನದ ಪ್ರೀತಿ' ಎಂದು ಕರೆದು ವಿಶ್‌ ಮಾಡಿದ್ದಾರೆ.

PREV
19
ಮಗ ಅಯಾನ್‌  ಹುಟ್ಟುಹಬ್ಬಕ್ಕೆ ಅಲ್ಲು ಅರ್ಜುನ್ ವಿ ಶ್‌ ಮಾಡಿದ್ದು ಹೀಗೆ

ಅಲ್ಲು ಅರ್ಜುನ್ ಸಾಮಾಜಿಕ ಮಾಧ್ಯಮದಲ್ಲಿ ಅವರ ಮಗ ಅಯಾನ್ ಅವರ ಜನ್ಮದಿನದಂದು ಶುಭ ಹಾರೈಸಿದ್ದಾರೆ. ಮಗನ ಜೊತೆ ಇರುವ ಅಡರೋಬಲ್‌ ಫೋಟೋವೊಂದನ್ನು ಈ ಸಮಯದಲ್ಲಿ ಅಲ್ಲು ಶೇರ್‌ ಮಾಡಿದ್ದಾರೆ.

29

ಕ್ಯುಟ್‌ ಸ್ಮೈಲ್‌ನೊಂದಿಗೆ ಅಪ್ಪ ಮತ್ತು ಮಗನ ಜೋಡಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ನಟ  ಸಂಪೂರ್ಣವಾಗಿ ಕಪ್ಪು ಉಡುಪು ಧರಿಸಿರುವುದನ್ನು ನೋಡಬಹುದು.

39

ಮಗನ ಜೊತೆಗಿರುವ ಕ್ಯಾಂಡಿಡ್ ಏಕವರ್ಣದ ಫೋಟೋವನ್ನು ಪೋಸ್ಟ್ ಮಾಡಿ ,'ನನ್ನ ಜೀವನದ ಪ್ರೀತಿಗೆ ಜನ್ಮದಿನದ ಶುಭಾಶಯಗಳು. ನನ್ನ ಸ್ವೀಟ್‌  ಚಿನ್ನಿ ಬಾಬು' ಎಂದು ಕ್ಯಾಪ್ಷನ್‌ ನೀಡಿದ್ದಾರೆ ಅಲ್ಲು ಅರ್ಜುನ್.

49

ಅಲ್ಲು ಅಯಾನ್ ಟಾಲಿವುಡ್‌ನ ಅತ್ಯಂತ ಜನಪ್ರಿಯ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರು. ಆಕ್ಷನ್ ಚಿತ್ರಗಳ ಮೇಲಿನ  ಪ್ರೀತಿ, ಫುಟ್ ಟ್ಯಾಪಿಂಗ್ ಡ್ಯಾನ್ಸ್ ಸ್ಟೆಪ್ಸ್ ಮತ್ತು ತಮ್ಮ ಅಡುಗೆ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ಅವರು ಯಾವಾಗಲೂ ಜನರ ಗಮನ ಸೆಳೆಯುತ್ತಾರೆ.

59

ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 'ರೆಡ್ ಹಾರ್ಟ್' ಎಮೋಟಿಕಾನ್‌ನೊಂದಿಗೆ ಫೋಟೋವನ್ನು ಮರು ಹಂಚಿಕೊಂಡಿದ್ದಾರೆ.ಈ ದಂಪತಿಗೆ ಕಿರಿಯ ಮಗಳು ಅರ್ಹಾ, 

69

ಈ ದಂಪತಿಯ ಕಿರಿಯ ಮಗಳು ಅರ್ಹಾ ಈಗಾಗಲೇ ದಕ್ಷಿಣ ಭಾರತದ ಪ್ರಖ್ಯಾತ ನಟಿ ಸಮಂತಾ ಜೊತೆ ಶಾಕುಂತಲಂ ಚಿತ್ರದಲ್ಲಿ ನಟಿಸಿದ್ದು, ಅಪ್ಪನಂತೆ ದೊಡ್ಡ ಸ್ಟಾರ್ ಆಗುವ ಭರವಸೆ ಮೂಡಿಸಿದ್ದಾರೆ. 

79

6 ವರ್ಷ ವಯಸ್ಸಿನ ಅಲ್ಲು ಅವರ ಮಗಳು  ಸಮಂತಾ ರುತ್ ಪ್ರಭು ಅವರ ಮುಂಬರುವ ಚಿತ್ರ ಶಾಕುಂತಲಂನೊಂದಿಗೆ ಚಲನಚಿತ್ರಗಳಲ್ಲಿ ಪಾದಾರ್ಪಣೆ ಮಾಡಲು ಸಿದ್ಧಳಾಗಿದ್ದು ಚಿತ್ರವು ಏಪ್ರಿಲ್ 14 ರಂದು ಬಿಡುಗಡೆಗೆ ಸಿದ್ಧವಾಗಿದೆ.
 

89

ಸುಕುಮಾರ್ ನಿರ್ದೇಶನದ ಬ್ಲಾಕ್‌ಬಸ್ಟರ್ ಚಿತ್ರ ಪುಷ್ಪ: ದಿ ರೈಸ್‌ನ ಮುಂದುವರಿದ ಭಾಗವಾದ ಪುಷ್ಪ: ದಿ ರೂಲ್‌ನಲ್ಲಿ  ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಅವರ ಜೊತೆ ಕೆಲಸ ಮಾಡಲಿದ್ದಾರೆ. ವೈಜಾಗ್‌ನಲ್ಲಿ ಮೊದಲ ಶೆಡ್ಯೂಲ್ ನಂತರ, ನಟ ವಿರಾಮ ತೆಗೆದುಕೊಂಡಿದ್ದು ವಿಯೆಟ್ನಾಂನಲ್ಲಿ ತಮ್ಮ ಪತ್ನಿ ಮತ್ತು ಸ್ನೇಹಿತರೊಂದಿಗೆ ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾರೆ.  

99

ಅಲ್ಲು ಅರ್ಜುನ್ ಅವರ ಬಹು ನಿರೀಕ್ಷಿತ ಚಿತ್ರ ಪುಷ್ಪ: ದಿ ರೂಲ್‌ನ ಮೊದಲ ಪ್ರೋಮೋ ನಟನ ಹುಟ್ಟುಹಬ್ಬದ ಏಪ್ರಿಲ್ 8 ರಂದು ಬಿಡುಗಡೆಯಾಗಲಿದೆ. ಪುಷ್ಪಾ ನಂತರ, ನಟ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ಅವರು 2024 ರಲ್ಲಿ  ಒಂದು ಪ್ರಾಜೆಕ್ಟ್‌ಗಾಗಿ ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೆ ಮತ್ತೆ ಒಂದಾಗಲಿದ್ದಾರೆ.

Read more Photos on
click me!

Recommended Stories