ಅತಿ ಹೆಚ್ಚು ಆಸ್ತಿ ಹೊಂದಿರುವ ಟಾಪ್ 10 ಭಾರತೀಯ ನಟರು: ರಾಕಿಂಗ್ ಸ್ಟಾರ್ ಯಶ್‌ಗೆ ಎಷ್ಟನೇ ಸ್ಥಾನ?

First Published | Sep 4, 2024, 3:33 PM IST

ಸಿನಿಮಾ ಲೋಕದಲ್ಲಿ ಸ್ಟಾರ್ ನಟರು ಪಡೆದುಕೊಳ್ಳುವ ಸಂಭಾವನೆ ನೂರು ಕೋಟಿಗೂ ಅಧಿಕವಾಗಿದೆ. ನೂರಾರು ಕೋಟಿ ಸಂಭಾವನೆ ಪಡೆಯುವ ಲಿಸ್ಟ್‌ನಲ್ಲಿ ಚಂದನವನದ ಸ್ಟಾರ್ ನಟ ಸೇರ್ಪಡೆಯಾಗಿದ್ದಾರೆ. 2015ರಿಂದ ಅತಿ ಹೆಚ್ಚು ಆಸ್ತಿ ಹೊಂದಿರುವ ಟಾಪ್ 10 ನಟರ ಹೆಸರು ಇಲ್ಲಿದೆ.

ಪ್ರಭಾಸ್

ಬಾಹುಬಲಿ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಪ್ರಭಾಸ್, ದೇಶದ ತುಂಬೆಲ್ಲಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಾಹುಬಲಿ-2ರ ಬಳಿಕ ಪ್ರಭಾಸ್ ನಟನೆಯ ಸಿನಿಮಾಗಳು ಸೋತರು, ಅತ್ಯಧಿಕ ಆಸ್ತಿ ಹೊಂದಿರುವ ನಟರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ಮೂಲಗಳ ಪ್ರಕಾರ ಪ್ರಭಾಸ್ ಆಸ್ತಿ 5,400 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಇತ್ತೀಚೆಗೆ ತೆರೆಕಂಡಿದ್ದ ಕಲ್ಕಿ ಸಿನಿಮಾ ಪ್ರಭಾಸ್‌ಗೆ ದೊಡ್ಡ ಗೆಲುವು ನೀಡಿದೆ. ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ಪ್ರಭಾಸ್‌ಗೆ ಕಲ್ಕಿ ಗೆಲುವಿನ ಸಂತಸ ನೀಡಿದೆ. 

ಶಾರೂಖ್ ಖಾನ್

ಬಾಲಿವುಡ್ ಕಿಂಗ್ ಖಾನ್ ಅಂತಾನೇ ಕರೆಸಿಕೊಳ್ಳುವ ಶಾರೂಕ್ ಖಾನ್ ಅತಿ ಹೆಚ್ಚು ಆಸ್ತಿ ಹೊಂದಿರುವ ನಟರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ವರದಿಗಳ ಪ್ರಕಾರ ಶಾರೂಖ್ ಖಾನ್ ಆಸ್ತಿ 4,100 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಶಾರೂಖ್ ಸಿನಿಮಾ ತೆರೆಗೆ ಬರೋದನ್ನೇ ಅಭಿಮಾನಿಗಳು ಕಾಯುತ್ತಿರುತ್ತಾರೆ. ಶಾರೂಖ್ ಖಾನ್ ಅಭಿನಯದ ಜವಾನ್ ಚಿತ್ರಮಂದಿರದಲ್ಲಿ ದೊಡ್ಡ ಸದ್ದು ಮಾಡಿತ್ತು. ಈ ಚಿತ್ರದಲ್ಲಿ ಶಾರೂಖ್‌ಗೆ ಜೊತೆಯಾಗಿ ದೀಪಿಕಾ ಪಡುಕೋಣೆ, ನಯನತಾರಾ ನಟಿಸಿದ್ದರು.

Tap to resize

ಆಮೀರ್ ಖಾನ್

ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಚಿತ್ರ ಬರೋದು ವರ್ಷಕ್ಕೆ ಒಂದು ಮಾತ್ರ. ಇತ್ತೀಚೆಗೆ ಆಮೀರ್ ಖಾನ್ ಚಿತ್ರಗಳು ಸೋಲುತ್ತಿವೆ. ಆಮೀರ್ ಖಾನ್  ಅತಿ ಹೆಚ್ಚು ಆಸ್ತಿ ಹೊಂದಿರುವ ನಟರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ತನಗೆ ಸಂಗಾತಿಯ ಅವಶ್ಯಕತೆ ಇದೆ ಎಂದು ಮುಕ್ತವಾಗಿ ಹೇಳಿಕೊಂಡಿದ್ದರು. ಆಮೀರ್ ಪುತ್ರ ಜುನೈದ್ ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದು, ಮೊದಲ ಚಿತ್ರ ಮಹಾರಾಜ ತೆರೆಕಂಡಿದೆ. ಆಮೀತ್ ಖಾನ್ ಒಟ್ಟು ಆಸ್ತಿ 3,980 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.
 

ಸಲ್ಮಾನ್ ಖಾನ್

ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅತಿ ಹೆಚ್ಚು ಆಸ್ತಿ ಹೊಂದಿರುವ ನಟರ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಿನಿಮಾ ಜೊತೆಯಲ್ಲಿ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳನ್ನು ಸಹ ನಿರೂಪಣೆ ಮಾಡುತ್ತಾರೆ. ಸಲ್ಮಾನ್ ಖಾನ್ ಒಟ್ಟು ಆಸ್ತಿ 3,508 ರೂಪಾಯಿ ಎಂದು ಹೇಳಲಾಗುತ್ತದೆ. ಸಲ್ಮಾನ್ ಖಾನ್ ಮುಂದಿನ ಚಿತ್ರಕ್ಕೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಹತ್ಯೆಗೆ ಸಂಚು ಸಹ ನಡೆದಿದೆ ಎಂಬ ಸುದ್ದಿಗಳು ಇತ್ತೀಚೆಗೆ ಟ್ರೆಂಡ್ ಆಗಿವೆ.

ರಜನೀಕಾಂತ್

ತಲೈವಾ ರಜನೀಕಾಂತ್  ಅತಿ ಹೆಚ್ಚು ಆಸ್ತಿ ಹೊಂದಿರುವ ನಟರ ಪೈಕಿ ಐದನೇ ಸ್ಥಾನದಲ್ಲಿದ್ದಾರೆ. ವಯಸ್ಸು ಜಸ್ಟ್ ನಂಬರ್ ಅಂತ ಹೇಳುವ ರಜನೀಕಾಂತ್ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೈಲರ್ ಸಿನಿಮಾ ಬಾಕ್ಸ್‌ ಆಫಿಸ್‌ ದೋಚಿತ್ತು. ರಜನೀಕಾಂತ್ ಮುಂದಿನ ಚಿತ್ರದಲ್ಲಿ ನಟಿ ರಚಿತಾ ರಾಮ್ ನಟಿಸುತ್ತಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ. ವರದಿಗಳ ಪ್ರಕಾರ ರಜನೀಕಾಂತ್ ಅವರ ಒಟ್ಟು ಆಸ್ತಿ 2,680 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.
 

ಜೂನಿಯರ್ ಎನ್‌ಟಿಆರ್

ಜೂನಿಯರ್ ಎನ್‌ಟಿಆರ್ ಅಭಿನಯದ ದೇವರ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್‌ಗೆ ಜೊತೆಯಾಗಿ ಬಾಲಿವುಡ್ ಚೆಲುವೆ ಜಾಹ್ನವಿ ಕಪೂರ್ ನಟಿಸಿದ್ದಾರೆ. ಅಪಾರ ಅಭಿಮಾನಿಗಳ ಬಳಗ ಹೊಂದಿರುವ ಜೂನಿಯರ್ ಎನ್‌ಟಿಆರ್, ಇತ್ತೀಚೆಗಷ್ಟೇ ಕರ್ನಾಟಕದ ಕುಂದಾಪುರಕ್ಕೆ ಭೇಟಿ ನೀಡಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ವರದಿಗಳ ಪ್ರಕಾರ ಜೂನಿಯರ್ ಎನ್‌ಟಿಆರ್ ಆಸ್ತಿ 1,918 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

ರಾಮ್ ಚರಣ್

ಟಾಲಿವುಡ್ ಅಂಗಳದ ಮಗಧೀರ ರಾಮ್‌ ಚರಣ್ ಸಹ ಅತಿ ಹೆಚ್ಚು ಆಸ್ತಿ ಹೊಂದಿರುವ ನಟರ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ರಾಮ್ ಚರಣ್ ಒಟ್ಟು ಆಸ್ತಿ 1,971 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ರಾಮ್ ಚರಣ್ ಮುಂದಿನ ಸಿನಿಮಾ ಗೇಮ್ ಚೇಂಜರ್ ಆಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಮಗಧೀರ್, ಆರ್‌ಆರ್‌ಆರ್, ರಂಗಸ್ಥಳಂ, ಜಂಜೀರ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆರ್‌ಆರ್‌ಆರ್ ಚಿತ್ರ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ

ರಣ್‌ಬೀರ್ ಕಪೂರ್

ಬಾಲಿವುಡ್ ಚಾಕ್ಲೆಟ್ ಹೀರೋ, ಪ್ಲೇ ಬಾಯ್ ಅಂತಾನೇ ಗುರುತಿಸಿಕೊಳ್ಳುವ ರಣ್‌ಬೀರ್ ಕಪೂರ್ ಒಟ್ಟು ಆಸ್ತಿ 1,866 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಅನಿಮಲ್ ಚಿತ್ರ ರಣ್‌ಬೀರ್ ನಟನೆಯ ಬಿಡುಗಡೆಯಾದ ಕೊನೆ ಚಿತ್ರ. ಈ ಸಿನಿಮಾದಲ್ಲಿಯೂ ಕನ್ನಡ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಸಾವಾರಿಯಾ ಚಿತ್ರದ ಮೂಲಕ ರಣ್‌ಬೀರ್ ಕಪೂರ್ ಬಾಲಿವುಡ್ ಪ್ರವೇಶಿಸಿದ್ದರು. ಸಿನಿಮಾಗಿಂತಲೂ ನಟಿಯರ ಜೊತೆಗಿನ ರಿಲೇಶನ್‌ಶಿಪ್ ವಿಚಾರವಾಗಿಯೇ ರಣ್‌ಬೀರ್ ಕಪೂರ್ ಸುದ್ದಿಯಲ್ಲಿದ್ದರು. ನಟಿ ಆಲಿಯಾ ಭಟ್‌ ಅವರನ್ನು ಮದುವೆಯಾಗಿರುವ ರಣ್‌ಬೀರ್ ಕಪೂರ್ ಮುದ್ದು ಮಗಳ ತಂದೆಯಾಗಿದ್ದಾರೆ.

ದಳಪತಿ ವಿಜಯ್

ಮೋಸ್ಟ್ ಟ್ಯಾಲೆಂಟ್ ನಟ ದಳಪತಿ ವಿಜಯ್ ಅತಿ ಹೆಚ್ಚು ಆಸ್ತಿ ಹೊಂದಿರುವ ನಟರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಚಿತ್ರರಂಗದ ಬಹು ಬೇಡಿಕೆಯ ನಟರಾಗಿರುವ ದಳಪತಿ ವಿಜಯ್, ಕಥೆಗಳನ್ನು ತುಂಬಾ ಜಾಗರೂಕತೆಯಿಂದ ಆಯ್ಕೆ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ದಳಪತಿ ವಿಜಯ್ ನಟನೆಯ ಚಿತ್ರ ನೋಡುಗರನ್ನು ಮಂತ್ರಮುಗ್ದರನ್ನಾಗಿಸಿತ್ತು. ವರದಿಗಳ ಪ್ರಕಾರ ದಳಪತಿ ವಿಜಯ್ ಒಟ್ಟು ಆಸ್ತಿ 1,842 ಕೋಟಿ ರೂಪಾಯಿ ಆಗಿದೆ.
 

ಯಶ್

ಚಂದನವನದ ರಾಜಾಹುಲಿ, ರಾಕಿಂಗ್ ಸ್ಟಾರ್ ಯಶ್ ಸಹ  ಅತಿ ಹೆಚ್ಚು ಆಸ್ತಿ ಹೊಂದಿರುವ ಟಾಪ್ 10 ನಟರ ಪಟ್ಟಿಯಲ್ಲಿದ್ದಾರೆ, ಕೆಜಿಎಫ್ ಚಾಪ್ಟರ್ 1, ಕೆಜಿಎಫ್ ಚಾಪ್ಟರ್ 2 ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಕೆಲ ವರದಿಗಳ ಪ್ರಕಾರ ರಾಕಿಂಗ್ ಸ್ಟಾರ್ ಒಟ್ಟು ಆಸ್ತಿ 1,578 ಕೋಟಿ ರೂಪಾಯಿ ಆಗಿದೆ. ಸದ್ಯ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದಾರೆ. 
 

Latest Videos

click me!