ಕನ್ನಡ ಮಾತನಾಡಿ ಕನ್ನಡಿಗರ ಮನಗೆದ್ದ ತೆಲುಗು ಹೀರೋ ಜೂ. NTR ನಿಜ ಜೀವನದಲ್ಲಿ ಅಭಿಮಾನಿಗಳ ಪಾಲಿನ ದೇವತಾ ಮನುಷ್ಯ!

First Published | Sep 3, 2024, 4:03 PM IST

ಬಾಲಿವುಡ್ ಗೆ ಹೋಲಿಕೆ ಮಾಡಿದ್ರೆ, ದಕ್ಷಿಣ ಭಾರತದ ಸೆಲೆಬ್ರಿಟಿಗಳು ತಮ್ಮ ಉತ್ತಮ ನಡವಳಿಕೆ ಮತ್ತು ಜೀವಂತಿಕೆಗೆ ಹೆಸರುವಾಸಿಯಾಗಿದ್ದಾರೆ ಅನ್ನೋದ್ರಲ್ಲಿ ತಪ್ಪಿಲ್ಲ. ಅದರಲ್ಲೂ ನಾಯಕ ನಟರು ತಮ್ಮ ಸಹ ನಟರು, ಅಭಿಮಾನಿಗಳೊಂಡಿಗೆ ತುಂಬಾನೆ ಉತ್ತಮ ರೀತಿಯಲ್ಲಿ ವರ್ತಿಸುತ್ತಾರೆ. ಹೆಚ್ಚಿನ ನಟರು ತಮ್ಮ ಯಶಸ್ಸಿನಿಂದ ಅಹಂಕಾರ ತೋರಿಸುವಂತವರು ಅಲ್ವೇ ಅಲ್ಲ, ಅವರಲ್ಲಿ ಒಬ್ಬರು ಜೂ. NTR. 
 

ಬಾಲಿವುಡ್ ಮಂದಿಗೆ ತಮ್ಮ ನಾಯಕರು ಅಂದ್ರೆ ಕ್ರೇಜ್ ಜಾಸ್ತಿಯಾಗಿದ್ರೆ, ನಮ್ಮ ದಕ್ಷಿಣದ ಜನರು ಹೆಚ್ಚಾಗಿ ತಮ್ಮ ಹೀರೋಗಳನ್ನು ದೇವರಂತೆ ನೋಡ್ಕೋತಾರೆ. ಉದಾಹರಣೆಗೆ ಡಾ. ರಾಜಕುಮಾರ್ ಇರಬಹುದು, ಪುನೀತ್ ರಾಜಕುಮಾರ್ (Puneeth Rajkumar), ರಜನಿಕಾಂತ್ ಇವರಲ್ಲೆಲ್ಲಾ ಅಭಿಮಾನಿಗಳು ದೇವರನ್ನ ಕಂಡಿದ್ದಾರೆ. ಕಾರಣ ಇವರು ನಿಜ ಜೀವನದಲ್ಲಿ ಹೀರೋಗಳಂತೆ ಇರದೇ, ಸಾಮಾನ್ಯ ಜನರೊಂದಿಗೆ ಸಾಮಾನ್ಯನಾಗಿದ್ದುಕೊಂಡು ಸಹಾಯ ಮಾಡುವ ರೀತಿ. 
 

ಇವತ್ತು ಅಂತದ್ದೇ ಒಬ್ಬ ನಟನ ಬಗ್ಗೆ ಹೇಳ್ತಿದ್ದೀವಿ. ಇವರು ತೆಲುಗಿನ ಸೂಪರ್ ಸ್ಟಾರ್ ನಟ, ಆದರೆ ಅಭಿಮಾನಿಗಳು ಅಂದ್ರೆ ಇವರಿಗೆ ಪ್ರಾಣ. ಅಭಿಮಾನಿಗಳಿಗಾಗಿ ತುಂಬಾನೆ ಡೆಡಿಕೇಟ್ ಆಗಿರುವ ನಟ ಜೂನಿಯರ್ NTR. ನಿಸ್ವಾರ್ಥ ಭಾವದಿಂದ ಇವರು ಮಾಡುತ್ತಿರೋ ಸೇವೆಗಳ ಬಗ್ಗೆ ತಿಳಿದ್ರೆ ನಿಮಗೆ ಶಾಖ್ ಆಗಬಹುದು. 
 

Latest Videos


ಆರ್ ಆರ್ ಆರ್ ಖ್ಯಾತಿಯ ನಟ ಜೂನಿಯರ್ ಎನ್’ಟಿಆರ್ (Jr NTR) ಸುಮಾರು 11 ವರ್ಷಗಳಿಂದ ಯಾವುದೇ ಸ್ವಾರ್ಥವಿಲ್ಲದೆ ತನ್ನ ಮೃತ ಅಭಿಮಾನಿಯೊಬ್ಬರ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾರೆ ಅಂದರೆ ನೀವು ನಂಬುತ್ತೀರಾ? ಜನರು ತಮ್ಮ ಮನೆಯವರನ್ನೇ ಸರಿಯಾಗಿ ನೋಡಿಕೊಳ್ಳಲ್ಲ, ಇನ್ನು ಬೇರೆಯವರನ್ನ ನೋಡಿಕೊಳ್ಳೊ ಮಾತೆಲ್ಲಿಂದ ಅಲ್ವಾ? ಆದರೆ NTR ಬರೋಬ್ಬರಿ 11 ವರ್ಷಗಳಿಂದ ತನ್ನ ಮೃತ ಅಭಿಮಾನಿಯ ಕುಟುಂಬದ ಪೂರ್ತಿ ಜವಾಬ್ಧಾರಿಯನ್ನು ಹೊತ್ತಿದ್ದಾರೆ. 
 

2013 ರಲ್ಲಿ ಜೂನಿಯರ್ ಎನ್ಟಿಆರ್ ಅವರ 'ಬಾದ್ಶಾ' ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಈ ಘಟನೆ ನಡೆದಿತ್ತು. ನಟನ ಲಕ್ಷಾಂತರ ಅಭಿಮಾನಿಗಳು (fans) ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಸಮಯದಲ್ಲಿ ಜನರಲ್ಲಿ ಕ್ರೇಜ್ ಎಷ್ಟಿತ್ತು ಎಂದರೆ ನೂಕು ನುಗ್ಗಲು ಉಂಟಾಗಿ ಹಲವು ಸಮಸ್ಯೆಗಳು ಸಂಭವಿಸಿತ್ತು. ಈ ಸಂದರ್ಭದಲ್ಲಿಎನ್’ಟಿಆರ್ ಅಭಿಮಾನಿಯೊಬ್ಬ ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದನು. 
 

ವಿಷಯ ತಿಳಿದ ನಂತರ ದುಃಖಿತರಾದ ಜೂನಿಯರ್ ಎನ್ಟಿಆರ್ ಮೊದಲು ಅಭಿಮಾನಿಯ ಕುಟುಂಬವನ್ನು ಭೇಟಿ ಮಾಡಿ ಸಮಾಧಾನ ಮಾಡಿದರು. ಜೊತೆಗೆ ತಕ್ಷಣ ಆ ಕುಟುಂಬಕ್ಕೆ ಸುಮಾರು 5 ಲಕ್ಷ ರೂಪಾಯಿಗಳ ಧನ ಸಹಾಯ (financial help)  ಕೂಡ ಮಾಡಿದರು. . ಅಷ್ಟೇ ಅಲ್ಲ, ಕಳೆದ 11 ವರ್ಷಗಳಿಂದ, ನಟ ಆ ಮೃತ ಅಭಿಮಾನಿಯ ಕುಟುಂಬದ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಆ ಕುಟುಂಬವನ್ನು ಸಲಹುತ್ತಿದ್ದಾರೆ ಅನ್ನೋದು ನಿಜ. 
 

ಇದಲ್ಲದೆ, ಜೂನಿಯರ್ ಎನ್ಟಿಆರ್ ಅಂದ್ರೆ ಜನರಿಗೆ ಎಷ್ಟೊಂದು ಕ್ರೇಜ್ ಇತ್ತು ಅನ್ನೋದಕ್ಕೆ ಇನ್ನೊಂದು ಉದಾಹರಣೆ ಇದು.  2004 ರಲ್ಲಿ ನಟನ ಚಿತ್ರ 'ಆಂಧ್ರವಾಲಾ' ಬಿಡುಗಡೆಯಾದಾಗ, ಅದರ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಸುಮಾರು 10 ಲಕ್ಷ ಜನರು ಬಂದಿದ್ದರು. ಇಷ್ಟು ದೊಡ್ಡ ಜನಸಮೂಹವನ್ನು ಯಾರೂ ನಿರೀಕ್ಷಿಸಿರಲಿಲ್ಲ, ಆದ್ದರಿಂದ ಈ ಜನರಿಗೆ ಯಾವುದೇ ವಿಶೇಷ ವ್ಯವಸ್ಥೆ ಕೂಡ ಮಾಡಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರವೇ ಮಧ್ಯಪ್ರವೇಶಿಸಿ ನಟನ ಅಭಿಮಾನಿಗಳಿಗಾಗಿ ಸುಮಾರು 9 ವಿಶೇಷ ರೈಲುಗಳನ್ನು ಓಡಿಸಬೇಕಾಯಿತು. ಅಭಿಮಾನಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ 9 ವಿಶೇಷ ರೈಲುಗಳನ್ನ ಓಡಿಸಿದ ಕೀರ್ತಿ ಎನ್‌ಟಿಆರ್ ಗೆ ಸಲ್ಲುತ್ತದೆ. 
 

ಇನ್ನು ಈಗ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ 31 ಜನರು ಸಾವನ್ನಪ್ಪಿದ್ದು ಮತ್ತು ವ್ಯಾಪಕ ಹಾನಿ ಕೂಡ ಸಂಭವಿಸಿದೆ. ಪರಿಹಾರ ಕಾರ್ಯಗಳು ಪ್ರಗತಿಯಲ್ಲಿವೆ. ಈ ಸಂದರ್ಭದಲ್ಲಿ ಜೂನಿಯರ್ ಎನ್‌ಟಿಆರ್ ಪರಿಹಾರ ನಿಧಿಗೆ ₹1 ಕೋಟಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.ಇದಲ್ಲದೇ ಹಲವು ರೀತಿಯಲ್ಲಿ ಸಮಾಜ ಸೇವೆಗಳನ್ನು ಮಾಡುತ್ತ ಬಂದಿದ್ದಾರೆ. ಈ ಎಲ್ಲಾ ಕಾರ್ಯಗಳನ್ನ ನೋಡಿದ್ರೆ ಖಂಡಿತವಾಗಿಯೂ ಎನ್‌ಟಿಆರ್ ಅವರನ್ನು ದೇವತಾ ಮನುಷ್ಯ ಅಂತಾನೆ ಹೇಳಬಹುದು. 

click me!