ಕನ್ನಡ ಬಿಗ್ ಬಾಸ್‌ನಲ್ಲಿ ಕಿಚ್ಚ, ಹಿಂದಿಯಲ್ಲಿ ಸಲ್ಮಾನ್ ನಿರೂಪಣೆ ಖಚಿತ, ಸ್ಪರ್ಧಿಗಳ ಸಂಭಾವ್ಯ ಪಟ್ಟಿ!

First Published | Sep 3, 2024, 8:06 PM IST

ಕನ್ನಡ ಬಿಗ್ ಬಾಸ್ ಪ್ರೋಮೊ ರೀಲಿಸ್ ಆಗಿದೆ. ಕಿಚ್ಚ ಸುದೀಪ್ ನಿರೂಪಣೆ ಬಹುತೇಕ ಖಚಿತವಾಗಿದೆ. ಇತ್ತ ಗಾಯಗೊಂಡಿರುವ ಸಲ್ಮಾನ್ ಖಾನ್ ಹಿಂದಿ ಬಿಗ್ ಬಾಸ್ ನಿರೂಪಣೆಯಿಂದ ದೂರ ಉಳಿಯಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಸಲ್ಮಾನ್ ಖಾನ್ ನಿರೂಪಕ ಅನ್ನೋದು ಖಚಿತವಾಗಿದೆ. ಇದರ ಜೊತೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಬಿಡುಗಡೆಯಾಗಿದೆ.

ಕನ್ನಡ ಬಿಗ್ ಬಾಸ್ ವೇದಿಕೆ ಸಜ್ಜಾಗುತ್ತಿದೆ. ಹೊಸ ಪ್ರೊಮೋ ರಿಲೀಸ್ ಮಾಡಲಾಗಿದೆ. ಈ ಪ್ರೊಮೊದಲ್ಲಿ ಕಿಚ್ಚಸುದೀಪ್ ಹ್ಯಾಶ್ ಟ್ಯಾಗ್ ಬಳಸಿ ಪೋಸ್ಟ್ ಮಾಡಲಾಗಿದೆ. ಹೀಗಾಗಿ ಈ ಬಾರಿ ಕನ್ನಡದ ಬಿಗ್ ಬಾಸ್ ಶೋ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಾರೆ ಅನ್ನೋದು ಬಹುತೇಕ ಪಕ್ಕಾ ಆಗಿದೆ. ಇದರ ಜೊತೆಗೆ ಸ್ಪರ್ಧಿಗಳ ಪಟ್ಟಿಗಳು ಹರಿದಾಡುತ್ತಿದೆ.

ಇದೀಗ ಹಿಂದಿ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನು ನಟ ಸಲ್ಮಾನ್ ಖಾನ್ ನಡೆಸಿಕೊಡಲಿದ್ದಾರೆ ಅನ್ನೋದು ಸ್ಪಷ್ಟವಾಗಿದೆ. ಪಕ್ಕೆಲುಬು ಗಾಯಗೊಂಡಿರುವ ಕಾರಣ ಸಲ್ಮಾನ್ ಖಾನ್ ಈ ಬಾರಿಯ ನಿರೂಪಣೆಯಿಂದ ಹಿಂದೆ ಸರಿಯಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ಊಹಾಪೋಹಳಿಗೆ ಬ್ರೇಕ್ ಬಿದ್ದಿದೆ. ಸಲ್ಮಾನ್ ಕಾರ್ಯಕ್ರಮ ಹೋಸ್ಟ್ ಮಾಡಲಿದ್ದಾರೆ.

Tap to resize

ಮೂಲಗಳ ಪ್ರಕಾರ ಸಲ್ಮಾನ್ ಖಾನ್ ಶೀಘ್ರದಲ್ಲೆ ಬಿಗ್ ಬಾಸ್ ಪ್ರೋಮೋ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಲ್ಮಾನ್ ಖಾನ್ ಗಾಯಗೊಂಡ ಕಾರಣ ಪ್ರೋಮೋ ಶೂಟಿಂಗ್ ಕೆಲ ದಿನ ವಿಳಂಬವಾಗಿದೆ. ಆದರೆ ಚೇತರಿಸಿಕೊಳ್ಳುತ್ತಿರುವ ಸಲ್ಮಾನ್ ಖಾನ್ ಇದೀಗ ಪ್ರೋಮೋ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಮಾಹಿತಿ ಬಹಿರಂಗವಾಗಿದೆ.

ಬಿಗ್ ಬಾಶ್ ಕಾರ್ಯಕ್ರಮದ ಜನಪ್ರಿಯತೆ ಹೆಚ್ಚಿಸಲು ನಿರೂಪಕ ಸಲ್ಮಾನ್ ಕೊಡುಗೆ ಅಪಾರವಾಗಿದೆ. ಹೀಗಾಗಿ ಸಲ್ಮಾನ್ ಹೊರತುಪಡಿಸಿ ಇದೀಗ ಹಿಂದಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಊಹಿಸಿಕೊಳ್ಳಲು ಸಾಧ್ಯವಾಗದಷ್ಟು ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದೆ. 

ಇತ್ತ ಹಿಂದಿ ಬಿಗ್ ಬಾಸ್ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಬಿಡುಗಡೆಯಾಗಿದೆ. ಈ ಪೈಕಿ ಸ್ತ್ರೀ 2 ಚಿತ್ರದಲ್ಲಿ ಕಾಣಿಸಿಕೊಂಡ ಸುನಿಲ್ ಕುಮಾರ್ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ತನ್ನ ದೈತ್ಯ ದೇಹದ ಹಾಗೂ ಅಭಿನಯದ ಮೂಲಕ ಸದ್ದು ಮಾಡಿದ ಸುನಿಲ್ ಕುಮಾರ್ ಈ ಬಾರಿ ಹಿಂದಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಸ್ಮಾಲ್ ಸ್ಕ್ರೀನ್ ನಟ ನಟಿಯರು, ಸಿನಿಮಾ ನಟ ನಟಿಯರು ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳಾಗಿದ್ದಾರೆ. ನಟಿ ಸಮೀರಾ ರೆಡ್ಡಿಯೂ ಹಿಂದಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಝಾನ್ ಖಾನ್, ಮೀರಾ ದಿಯೋಸ್ತಲೆ, ಅನಿತಾ ಹಸನಂದಾನಿ, ಸುರಭಿ ಜ್ಯೋತಿ, ದೀಪಿಕಾ ಆರ್ಯ, ಸೋಮ್ಯ ಆಲಿ, ಅರ್ಜುನ್ ಬಿಜಿಲಾನಿ ಸೇರಿದಂತೆ ಹಲವು ಸಂಭಾವ್ಯ ಹೆಸರುಗಳು ಬಹಿರಂಗವಾಗಿದೆ.

Latest Videos

click me!