ಟೈಗರ್ 3 ನಿಂದ RRRವರೆಗೆ... ರಷ್ಯಾ-ಉಕ್ರೇನ್‌ನಲ್ಲಿ ಶೂಟ್ ಮಾಡಲಾದ ಸಿನಿಮಾಗಳು
First Published | Feb 24, 2022, 8:56 PM ISTರಷ್ಯಾ (Russia)ಉಕ್ರೇನ್ (Ukraine) ಜೊತೆ ಯುದ್ಧವನ್ನು ಪ್ರಾರಂಭಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಉಕ್ರೇನ್‌ನಲ್ಲಿ ಸೇನಾ ಕಾರ್ಯಾಚರಣೆಗೆ ಆದೇಶ ನೀಡಿದ ನಂತರ, ಉಕ್ರೇನ್‌ನ ಹಲವೆಡೆ ಸ್ಫೋಟದ ಸದ್ದು ಕೇಳಿಬಂದಿದ್ದು, ಜನರು ಭಯಭೀತರಾಗಿದ್ದಾರೆ. ರಷ್ಯಾ- ಉಕ್ರೇನ್ ಅತ್ಯಂತ ಸುಂದರವಾದ ದೇಶ ಮತ್ತು ಭಾರತವು ಅವರೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ವಾಸ್ತವವಾಗಿ, ಇಲ್ಲಿ ಅನೇಕ ಬಾಲಿವುಡ್ ಚಿತ್ರಗಳ ಚಿತ್ರೀಕರಣ ನಡೆದಿದೆ ಮತ್ತು ಕೆಲವು ಚಿತ್ರಗಳ ಚಿತ್ರೀಕರಣವೂ ನಡೆಯುತ್ತಿದೆ. ಅಂದಹಾಗೆ, ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಮತ್ತು ಹಾಲಿವುಡ್‌ನ ಅನೇಕ ಚಲನಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ.ಅದೇ ಸಮಯದಲ್ಲಿ, ಮುಂಬರುವ ಸಮಯದಲ್ಲೂ ಇಲ್ಲಿ ಅನೇಕ ಚಿತ್ರಗಳ ಶೂಟಿಂಗ್ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.