ಕಾಜೋಲ್ ಪತಿ ಅಜಯ್ ದೇವಗನ್ ಜೊತೆಗಿನ ಹಳೆಯ ಫೋಟೋವನ್ನು Instagramನಲ್ಲಿ ಹಂಚಿಕೊಂಡಿದ್ದಾರೆ. 'ಓಡುತ್ತಾ, ನಡೆಯುತ್ತಾ, ಕುಂಟುತ್ತಾ, ಒದೆಯುತ್ತಾ, ಕಿರುಚುತ್ತಾ, 23 ವರ್ಷಗಳ ನಂತರ ನಾವು ಇಲ್ಲಿದ್ದೇವೆ. ನಾವು ಪದಕಗಳಿಗೆ ಅರ್ಹರೇ? ಆದರೆ ಪ್ರಶಸ್ತಿ ಸಮಾರಂಭಗಳ ಬಗ್ಗೆ ನಾವು ಹೇಗೆ ಯೋಚಿಸುತ್ತೇವೆ ಎಂಬುದು ನಮಗಿಬ್ಬರಿಗೂ ಗೊತ್ತು ' ಎಂದು ಫೋಟೋವನ್ನು ಹಂಚಿಕೊಂಡ ಅವರು ಬರೆದಿದ್ದಾರೆ.
ಅದೇ ಸಮಯದಲ್ಲಿ, ಅಜಯ್ ದೇವಗನ್ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 'ಅವಳು ಇನ್ನೂ ನನ್ನೊಂದಿಗೆ ಇದ್ದಾಳೆ ಎಂದು ನನಗೆ ಆಶ್ಚರ್ಯವಾಗಿದೆ. ಇದನ್ನು ಕೇಳಿದಾಗ ಕಾಜೋಲ್ ಮುಖ ನೋಡಲೇಬೇಕು ಎಂದು ಅವರು ವೀಡಿಯೋದಲ್ಲಿ ಹೇಳಿದ್ದಾರೆ. 1999- ಪ್ಯಾರ್ ತೋ ಹೋನಾ ಹಿ ಥಾ, 2022- ಪ್ಯಾರ್ ಹಮೇಶಾ ರಹೇಗಾ. Happy Anniversary @kajol' ಎಂದು ಅಜಯ್ ದೇವಗನ್ ವೀಡಿಯೊಗೆ ಕ್ಯಾಪ್ಷನ್ ನೀಡಿದ್ದಾರೆ.
ಕಾಜೋಲ್ ಮತ್ತು ಅಜಯ್ ದೇವಗನ್ ದಂಪತಿಗೆ ನ್ಯಾಸಾ ಮತ್ತು ಯುಗ್ ಎಂಬ ಇಬ್ಬರು ಮಕ್ಕಳಿದ್ದು, ಇಬ್ಬರೂ ಪೋಷಕರ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಮದುವೆಯ ನಂತರ ಕಾಜೋಲ್ ಸಿನಿಮಾಗಳಲ್ಲಿ ಸಕ್ರಿಯವಾಗಿಲ್ಲ.
ಅಜಯ್ ದೇವಗನ್ ಮತ್ತು ಕಾಜೋಲ್ ಮನೆಯ ಟೇರಸ್ ಮೇಲೆ ಸಪ್ತಪದಿ ತುಳಿದರು. ಅಜಯ್ ಮತ್ತು ಕಾಜೋಲ್ ಮಾಧ್ಯಮದವರ ಕಣ್ಣು ತಪ್ಪಿಸಲು ಹೀಗೆ ಮಾಡಿದ್ದಾರೆ. ಮಾಧ್ಯಮದವರಿಗೆ ತಪ್ಪಾದ ಸ್ಥಳವನ್ನು ಹೇಳಿದ್ದರು. ದಂಪತಿ ಪ್ರಚಾರದಿಂದ ದೂರವಿರಲು ಬಯಸುತ್ತಾರೆ.
ಹಲ್‌ಚಲ್ ಚಿತ್ರದ ಶೂಟಿಂಗ್ ವೇಳೆ ಇವರಿಬ್ಬರೂ ಮೊದಲ ಸಲ ಭೇಟಿಯಾಗಿದ್ದರು. ಕಾಜೋಲ್ ಮೊದಲ ಬಾರಿಗೆ ಅಜಯ್ ಅವರನ್ನು ಭೇಟಿಯಾದಾಗ, ಅವರು ಒಂದೇ ಕಡೆ ಕುಳಿತುಕೊಳ್ಳಲು ಇಷ್ಟಪಡುತ್ತಾರೆ ಮತ್ತು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದು ಗಮನಿಸಿದರು. ಆದರೆ ಯಾರಾದರೂ ಹೇಗೆ ಮಾತನಾಡದೇ ಸುಮ್ಮನೆ ಇರಲು ಸಾಧ್ಯ ಎಂದು ಕಾಜೋಲ್ ಯೋಚಿಸುತ್ತಿದ್ದರು.
ಆದರೆ ಕ್ರಮೇಣ ಅವರು ಕಾಜೋಲ್ ಜೊತೆ ಮಾತನಾಡಲು ಪ್ರಾರಂಭಿಸಿದರು ಮತ್ತು ಅವರು ಸ್ನೇಹಿತರಾದರು.ಅಜಯ್ ಮತ್ತು ಕಾಜೋಲ್ ಅವರ ಪ್ರೀತಿಯು ಕಾಲಾನಂತರದಲ್ಲಿ ಅರಳಿತು ಮತ್ತು ಅಂತಿಮವಾಗಿ ಇಬ್ಬರೂ 1999ರಲ್ಲಿ ವಿವಾಹವಾದರು. ದೇವಗನ್ ಹೌಸ್‌ನಲ್ಲಿ ಮಹಾರಾಷ್ಟ್ರದ ಸಾಂಪ್ರದಾಯಿಕ ಶೈಲಿಯಲ್ಲಿ ವಿವಾಹ ನೆರವೇರಿತು.
ನಾನು ಮತ್ತು ಅಜಯ್ ದೇವಗನ್ ಮದುವೆಯಾಗುವುದು ಯಾರಿಗೂ ಇಷ್ಟವಿರಲಿಲ್ಲ ಎಂದು ಕಾಜೋಲ್ ಚಾಟ್ ಶೋವೊಂದರಲ್ಲಿ ಹೇಳಿದ್ದರು. ನನ್ನ ಕುಟುಂಬ ತುಂಬಾ ಗೊಂದಲಕ್ಕೊಳಗಾಯಿತು.ನಾನು ಅಜಯ್‌ನನ್ನು ಮದುವೆಯಾಗ ಬೇಕೆಂದು ನನ್ನ ತಂದೆಗೆ ಹೇಳಿದಾಗ, ಅವರು ನನ್ನೊಂದಿಗೆ ಒಂದು ವಾರ ಮಾತನಾಡಲಿಲ್ಲ.
ವೃತ್ತಿ ಜೀವನವು ಉತ್ತಮವಾಗಿ ಸಾಗುತ್ತಿದೆ ಮತ್ತು ಮದುವೆಗೆ ಇನ್ನೂ ತುಂಬಾ ಚಿಕ್ಕವಳು ಎಂದು ಕಾಜೋಲ್ ತಂದೆ ಮದುವೆಗೆ ವಿರೋಧಿಸಿದ್ದರು. ಆದರೆ ಕಾಜೋಲ್ ತನ್ನ ಮಾತಿಗೆ ಬದ್ಧಳಾಗಿದ್ದಳು. ಜೀವನ ಮತ್ತು ವೃತ್ತಿ ಜೀವನದಲ್ಲಿ ವಿರಾಮವನ್ನು ಬಯಸುವುದಾಗಿ ಕಾಜೋಲ್ ಬಹಿರಂಗಪಡಿಸಿದ್ದರು. ಅದಕ್ಕಾಗಿಯೇ ಅವರು ಮದುವೆಯಾಗಲು ನಿರ್ಧರಿಸಿದರು ಎಂದು ಸಂದರ್ಶನವೊಂದರಲ್ಲಿ ಕಾಜೋಲ್ ದೇವಗನ್ ಅವರನ್ನು ಮದುವೆಯಾಗಲು ಕಾರಣವನ್ನು ಹೇಳಿದ್ದರು.