ಅಂಬಾನಿ ಮದ್ವೇಲಿ ರಶ್ಮಿಕಾ ಮಂದಣ್ಣ, ಈಕೆ ಹೀರೋಯಿನ್ ಅಲ್ಲ ಬಾಡಿ ಬಿಲ್ಡರ್ ಅನ್ನೋದಾ ನೆಟ್ಟಿಗರು!

First Published | Jul 17, 2024, 3:53 PM IST

ಅನಂತ್ ಅಂಬಾನಿ ಮತ್ತು ರಾಧಿಕ ಮರ್ಚಂಟ್ ಮದುವೇಲಿ ಮಿಂಚಿದ ರಶ್ಮಿಕಾ ಮಂದಣ್ಣ ನೋಡಿ ಈಕೆ ಹೀರೋಯಿನ್ ಥರ ಕಾಣ್ತಿಲ್ಲಾ ಬಾಡಿ ಬಿಲ್ಡರ್ ಅಂತಿದ್ದಾರೆ ಜನ. 
 

ದೇಶ ವಿದೇಶದಿಂದ ಸೆಲೆಬ್ರಿಟಿಗಳು, ರಾಜಕೀಯ ವ್ಯಕ್ತಿಗಳು, ಗಣ್ಯರು ಭಾಗಿಯಾದ ಅಂಬಾನಿ ಕುಟುಂಬದ ಕುಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅದ್ದೂರಿ ಮದುವೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡ ಭಾಗಿಯಾಗಿದ್ದರು. 
 

ರಶ್ಮಿಕಾ ಮಂದಣ್ಣ (Rashmika Mandanna) ಮಿರರ್ ವರ್ಕ್ ಮತ್ತು ಗೋಲ್ಡನ್ ಡಿಸೈನ್ ಇರುವಂತಹ ಕಪ್ಪು ಬಣ್ಣದ ಸೀರೆಯುಟ್ಟು ಅದಕ್ಕೆ, ಕಪ್ಪು ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ತೊಟ್ಟು, ತಲೆಗೆ ದುಂಡು ಮಲ್ಲಿಗೆ ಹೂವು ಮುಡಿದು ಮುದ್ದಾಗಿಯೇ ಕಾಣಿಸುತ್ತಿದ್ರು. ಆದ್ರೆ ನೆಟ್ಟಿಗರ ಕಟ್ಟು ಹೋಗಿದ್ದು ಮಾತ್ರ ಬೇರೆ ಕಡೆಗೆ. 
 

Tap to resize

ರಶ್ಮಿಕಾ ಪಾಪರಾಜಿಗಳ ಮುಂದೆ ಕಾಣಿಸಿಕೊಂಡಿದ್ದು, ಬೇರೆ ಬೇರೆ ಭಂಗಿಯಲ್ಲಿ ಪೋಸ್ ಕೊಡುತ್ತಾ, ತಮ್ಮ ಐಕಾನಿಕ್ ಹಾರ್ಟ್ ಸಿಂಬಲ್ ತೋರಿಸುತ್ತಾ, ಪುಷ್ಪಾ ಸ್ಟೈಲ್ ಕೂಡ ಮಾಡ್ತಾ ಪೋಸ್ ನೀಡ್ತಿರೋ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ರಶ್ಮಿಕಾ ಮುಖಕ್ಕಿಂತ ಹೆಚ್ಚಾಗಿ ಆಕೆಯ ಮಸಲ್ಸ್ (Muscles) ನೋಡಿಯೇ ಜನ ಶಾಕ್ ಆಗಿದ್ದಾರೆ. 
 

ಸದಾ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾ, ಒಂದು ದಿನವೂ ಮಿಸ್ ಮಾಡದೇ ಜಿಮ್, ವರ್ಕೌಟ್ ಮಾಡುವ ರಶ್ಮಿಕಾ, ಅಂಬಾನಿ ಮದ್ವೆಲಿ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ರಿಂದ ಅವರ ಮಸ್ಕ್ಯುಲರ್ ಬಾಡಿ, ಮಸಲ್ಸ್ ಎದ್ದು ಕಾಣುತ್ತಿತ್ತು. ಇದನ್ನ ನೋಡಿ ಜನ ತರಹೇವಾರಿ ಕಾಮೆಂಟ್ ಮಾಡಿದ್ದಾರೆ. 
 

ರಶ್ಮಿಕಾ ಮಂದಣ್ಣ ನೋಡಿದ್ರೆ ಹೀರೋಯಿನ್ ಥರ ಕಾಣಿಸ್ತಿಲ್ಲಾ, ಬಾಡಿ ಬಿಲ್ಡರ್ (body builder) ಥರ ಕಾಣಿಸ್ತಿದ್ದಾರೆ. ಸಿನಿಮಾ ರಂಗದ ಹೆಚ್ಚಿನ ನಟರಿಗಿಂತ ರಶ್ಮಿಕಾ ಹೆಚ್ಚು ಮಸ್ಕ್ಯುಲರ್ ಆಗಿ ಕಾಣಿಸ್ತಿದ್ದಾರೆ. ಬೈಸೆಪ್ಸ್ ನೋಡಿ, ಆರ್ಮ್ಸ್ ಹೇಗಿದೆ ನೋಡಿ, ಲೇಡಿ ಬಾಡಿ ಬಿಲ್ಡರ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಇನ್ನೊಂದಿಷ್ಟು ಜನ ರಶ್ಮಿಕಾ ತನ್ನ ನ್ಯಾಚುರಲ್ ಬ್ಯೂಟಿನೆ ಕಳ್ಕೊಂಡು ಬಿಟ್ಟಿದ್ದಾರೆ. ಹಿಂದೆಯಿಂದ ನೋಡಿದ್ರೆ ಹುಡುಗರ ಥರನೇ ಕಾಣಿಸ್ತಿದ್ದಾರೆ. ಇವರನ್ನ ಹೀರೋಯಿನ್ ಆಗಿ ಇಷ್ಟ ಪಡ್ತಿರೋ ಜನ ಯಾರಪ್ಪ ಅಂತಾನೂ ಕೇಳಿದ್ದಾರೆ. ಇನ್ನೂ ಕೆಲವರಂತೂ ರಶ್ಮಿಕಾ ಪೂರ್ತಿ ವಿಡಿಯೋ ನೋಡೋ ಮೊದಲು, ಆಕೆಯ ಬ್ಯಾಕ್ ಪೋಸ್ ನಲ್ಲಿ ರಶ್ಮಿಕಾ ಬಾಡಿ ನೋಡಿ ಟ್ರಾನ್ಸ್ ಜೆಂಡರ್ ಆಗಿರ್ಬಹುದು ಅಂದ್ಕೊಂಡೆ ಅಂತಾನೂ ಹೇಳಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ, ಪಾಪರಾಜಿಗಳ ಮುಂದೆ ಸದಾ ತಮ್ಮ ಓವರ್ ಆಕ್ಟೀಂಗ್ ನಿಂದಲೇ ಸುದ್ದಿಯಾಗುವ ರಶ್ಮಿಕಾ, ಸದ್ಯಕ್ಕಂತೂ ಸಿನಿಮಾ ಇಂಡಷ್ಟ್ರಿಯ ಬ್ಯುಸಿ ನಟಿ. ಸಾಲು ಸಾಲು ಚಿತ್ರಗಳು ಇವರ ಕೈಯಲ್ಲಿದೆ. ಪುಷ್ಪಾ 2, ರೈನ್ ಬೋ, ದ ಗರ್ಲ್ ಫ್ರೆಂಡ್, ಚವ್ವಾ, ಸಿಕಂದರ್, ಕುಬೇರ ಹೀಗೆ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. 
 

Latest Videos

click me!