ನಿಜವಾಗ್ಲೂ ವಿರಾಟ್ ಕೊಹ್ಲಿ ಜೊತೆ ತಮನ್ನಾ ಡೇಟಿಂಗ್ ಮಾಡ್ತಿದ್ರಾ? ಏನ್ ಹೇಳಿದ್ರು ಮಿಲ್ಕಿ ಬ್ಯೂಟಿ

First Published | Jul 17, 2024, 3:44 PM IST

ಈ ಹಿಂದೆ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಮಿಲ್ಕಿ ಬ್ಯೂಟಿ ತಮನ್ನಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ರೂಮರ್ಸ್ ಹರಡಿತ್ತು. ಈ ಬಗ್ಗೆ ಕೊನೆಗೂ ಮೌನ ಮುರಿದ ತಮನ್ನಾ ಹೇಳಿದ್ದೇನು ಗೊತ್ತಾ?
 

ಬಾಲಿವುಡ್ ನಟರು ಮತ್ತು ಕ್ರಿಕೆಟ್ ಆಟಗಾರರ ನಡುವಿನ ಪ್ರೇಮಕಥೆಗಳು ಇಂದು ನಿನ್ನೆಯದಲ್ಲ, ಹಲವಾರು ಸಮಯದಿಂದ ನಡೆದುಕೊಂಡು ಬಂದಿದೆ. ಇದೆಲ್ಲದರ ನಡುವೆ ನಟಿ ತಮನ್ನಾ ಭಾಟಿಯಾ ಮತ್ತು ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿ ಡೇಟಿಂಗ್ ಮಾಡುತ್ತಿದ್ದಾರೆಂಬ ರೂಮರ್ಸ್ ಭಾರಿ ಸುದ್ದಿಯಾಗಿತ್ತು. 
 

ತಮನ್ನಾ ಭಾಟಿಯಾ (Tamanna Bhatia) ಮತ್ತು ವಿರಾಟ್ ಕೊಹ್ಲಿ 2012 ರಲ್ಲಿ ಒಟ್ಟಿಗೆ ಜಾಹೀರಾತಿನಲ್ಲಿ ನಟಿಸಿದ ನಂತರ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆಂಬ ವದಂತಿಗಳು ಹರಡಲು ಪ್ರಾರಂಭಿಸಿದವು. ವದಂತಿಗಳು ಎಷ್ಟರ ಮಟ್ಟಿಗೆ ಸದ್ದು ಮಾಡಿದ್ದವು ಅಂದ್ರೆ, ಸ್ವಲ್ಪ ಸಮಯದ ಬಳಿಕ ಇಬ್ಬರ ಬ್ರೇಕ್ ಅಪ್ ಆಯ್ತು ಎಂದು ಸಹ ಜನ ಮಾತನಾಡಿಕೊಂಡಿದ್ದರು. 
 

Tap to resize

ಕೊಹ್ಲಿ (Virat Kohli) -ತಮನ್ನಾ ಡೇಟಿಂಗ್, ಬ್ರೇಕ್ ಅಪ್ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದರೂ ಸಹ ಕ್ರಿಕೆಟರ್ ಆಗಲಿ, ನಟಿಯಾಗಲಿ ಆ ಬಗ್ಗೆ ಎಂದಿಗೂ ಎಲ್ಲಿಯೂ ಮಾತನಾಡಲಿಲ್ಲ, ಅದು ಸುಳ್ಳು ಅಂತಾನೂ ಹೇಳಿರಲಿಲ್ಲ. ಆದರೆ ಕೊನೆಗೆ ಇದೆಲ್ಲಾ ಆಗಿ ಎಷ್ಟೊ ವರ್ಷಗಳ ಬಳಿಕ ಮೌನ ಮುರಿದದ್ದು ತಮನ್ನಾ ಭಾಟಿಯಾ. 
 

ಸಂದರ್ಶನವೊಂದರಲ್ಲಿ ಈ ಡೇಟಿಂಗ್ ರೂಮರ್ (Dating rumours) ಬಗ್ಗೆ ಮಾತನಾಡಿದ ತಮನ್ನಾ, ನನ್ನ ಮತ್ತು ವಿರಾಟ್ ನಡುವೆ ಏನು ನಡೆಯಿತು ಅನ್ನೋದರ ಬಗ್ಗೆ ಜನರಿಗೆ ಒಂದು ಸಣ್ಣ ಕ್ಲೂ ಕೂಡ ಇಲ್ಲ. ಜಾಹೀರಾತು ಶೂಟಿಂಗ್ ಸಮಯದಲ್ಲಿ ನಾವು ನಾಲ್ಕು ಪದಗಳನ್ನು ಮಾತನಾಡಿದ್ದೇವೆ ಅಷ್ಟೇ, ಅದರ ನಂತ್ರ ನಾವಿಬ್ಬರು ಮಾತನಾಡಿಯೇ ಇಲ್ಲ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದರು. 
 

ಜಾಹೀರಾತು ಶೂಟಿಂಗ್ (Add Shooting) ನಂತರ, ನಾನು ವಿರಾಟ್ ಅವರನ್ನು ಭೇಟಿ ಮಾಡಿಲ್ಲ ಅಥವಾ ಮಾತನಾಡಿಯೂ ಇಲ್ಲ. ಆದರೆ, ನಾವು ಕೆಲಸ ಮಾಡುವ ಹೆಚ್ಚಿನ ನಟರಿಗಿಂತ ವಿರಾಟ್ ಕೊಹ್ಲಿ ಬೆಸ್ಟ್ ಆಗಿದ್ದರು ಅನ್ನೋದನ್ನ ಹೇಳಲೇಬೇಕು ಎಂದು ಸಹ ತಮನ್ನಾ ಹೇಳಿದ್ದರು. 
 

ಅದಲ್ಲದೇ ವಿರಾಟ್ ಮತ್ತು ಅನುಷ್ಕಾ ಸುಂದರ ಜೋಡಿ, ಅವರಿಬ್ಬರು ಜೊತೆಯಾಗಿರೋ ಫೋಟೋ ನೊಡಿದ್ರೆ ಖುಷಿಯಾಗುತ್ತೆ, ಅವರ ವೈವಾಹಿಕ ಜೀವನ ಖುಷಿಯಾಗಿರಲಿ ಎಂದಷ್ಟೇ ನಾನು ಹೇಳ್ತಿನಿ ಎನ್ನುತ್ತಾ, ತಮ್ಮ ಮತ್ತು ವಿರಾಟ್ ನಡುವೆ ಏನೂ ಇರಲಿಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. 
 

ಸದ್ಯಕ್ಕಂತೂ ತಮನ್ನಾ ಹಿಂದಿ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದು, ನಟರಾದ ವಿಜಯ್ ವರ್ಮಾ (Vijay Verma) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿತ್ತು, ಆದರೆ ಇಬ್ಬರು ನಟರು ಆ ಬಗ್ಗೆ ಎಲ್ಲಿಯೂ ಮಾಹಿತಿ ಬಿಟ್ಟು ಕೊಟ್ಟಿಲ್ಲ. 
 

Latest Videos

click me!