ಮಾಜಿ ಪ್ರಧಾನಿ ಮೊಮ್ಮಗಳು, ರಾಜಮನೆತನಕ್ಕೆ ಸೇರಿದ ಈ ನಟಿ ಸ್ಟಾರ್ ನಟನ ಪತ್ನಿ: ಯಾರಿವರು ಗೆಸ್ ಮಾಡಿ

Published : Feb 04, 2025, 04:13 PM IST

ಈ ನಟಿ ರಾಜಮನೆತನಕ್ಕೆ ಸೇರಿದವರು ಬರೀ ಅಷ್ಟೇ ಅಲ್ಲ ದೇಶದ ಮಾಜಿ ಪ್ರಧಾನಿಯವರ ಮೊಮ್ಮಗಳು ಆದರೆ ಮೊದಲ ಮದುವೆ ಮುರಿದು ಬಿದ್ದರೂ ಸ್ಟಾರ್ ನಟನ 2ನೇ ಬಾರಿ ಕೈ ಹಿಡಿದ ಈಕೆ ಈಗ ಸುಖಿ ಸಂಸಾರ ಮಾಡ್ತಿದ್ದಾರೆ. ಹಾಗಿದ್ರೆ ಯಾರು ಈ ನಟಿ

PREV
15
ಮಾಜಿ ಪ್ರಧಾನಿ ಮೊಮ್ಮಗಳು, ರಾಜಮನೆತನಕ್ಕೆ ಸೇರಿದ ಈ ನಟಿ ಸ್ಟಾರ್ ನಟನ ಪತ್ನಿ: ಯಾರಿವರು ಗೆಸ್ ಮಾಡಿ

ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟೋ ಹೀರೋಯಿನ್ಸ್‌ಗಳು ಬಂದು ಹೋಗಿದ್ದಾರೆ. ಇನ್ನು ಬರ್ತಾನೆ ಇರ್ತಾರೆ. ಇಂಡಸ್ಟ್ರಿಯಲ್ಲೇ ಕೊನೆವರೆಗೂ ನಟಿಸಿದವರೂ ಇದ್ದಾರೆ. ಹೀರೋಗಳಲ್ಲಿ ಬಲವಾದ ಬ್ಯಾಕ್‌ಗ್ರೌಂಡ್  ಇರುವಂತೆಯೇ, ಹೀರೋಯಿನ್‌ಗಳಲ್ಲೂ ಕೆಲವರು ಗಟ್ಟಿಯಾದ ಹಿನ್ನೆಲೆಯ ಇದ್ದೂ ಸಿನಿಮಾಗೆ ಬಂದಿದ್ದಾರೆ. ಅಂತಹವರಲ್ಲಿ ರಾಜಮನೆತನಕ್ಕೆ ಸೇರಿದವರು ಇದ್ದಾರೆ. ಈಗ ನಾವು ಹೇಳ್ತಿರೋ ನಟಿ ಕೂಡ ರಾಜಮನೆತನಕ್ಕೆ ಸೇರಿದವರೇ ಆಗಿದ್ದಾರೆ. 

25

ಈ ಹೀರೋಯಿನ್ ಬೇರೆ ಯಾರೂ ಅಲ್ಲ ಅದಿತಿ ರಾವ್ ಹೈದರಿ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈ ಬ್ಯೂಟಿ ಸ್ವಲ್ಪ ತಡವಾಗಿ ಇಂಡಸ್ಟ್ರಿಗೆ ಬಂದ್ರು. ಆದ್ರೆ ಇವ್ರಿಗೆ ಎರಡು ದೊಡ್ಡ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇದೆ. ಇವರ ತಾತ (ಅಪ್ಪನ ತಂದೆ) ಅಕ್ಬರ್ ಹೈದರಿ. ಹೈದರಾಬಾದ್ ಭಾರತಕ್ಕೆ ಸೇರುವ ಮೊದಲು ಅದರ ಪ್ರಧಾನಿಯಾಗಿದ್ರು. ಇನ್ನೊಬ್ಬ ತಾತ ರಾಮೇಶ್ವರರಾವ್ (ಅಮ್ಮನ ತಂದೆ) ವನಪರ್ತಿ ಸಂಸ್ಥಾನದವರು.

35

ಅದಿತಿ ರಾವ್ ಹೈದರಿ ಮೊದಲು ಬಾಲಿವುಡ್ ಹೀರೋ, ನಿರ್ಮಾಪಕ ಸತ್ಯದೇವ್ ಮಿಶ್ರಾ ಅವ್ರನ್ನ ಮದುವೆ ಆಗಿದ್ದರು. ಆದರೆ ಅದೇನಾಯ್ತೋ ನಾಲ್ಕು ವರ್ಷ ಆಗೋಷ್ಟರಲ್ಲಿ ವಿಚ್ಛೇದನ ಪಡೆದ್ರು. ಆಮೇಲೆ ತಮ್ಮ ಕೆರಿಯರ್ ಮೇಲೆ ಗಮನ ಹರಿಸಿದ್ರು. ಮಾಡೆಲಿಂಗ್ ಜೊತೆಗೆ ಸಿನಿಮಾಗಳಲ್ಲೂ ಎಂಟ್ರಿ ಕೊಟ್ರು. ಹೀರೋಯಿನ್ ಆಗಿ ನಾಲ್ಕು ಭಾಷೆಗಳಲ್ಲಿ ಒಳ್ಳೆ ಹೆಸರು ಮಾಡಿದ್ರು.

 

45

ಇಂಡಸ್ಟ್ರಿಯಲ್ಲಿ ಮುಂದುವರಿಯುವಾಗ ಮತ್ತೊಬ್ಬ ಹೀರೋ ಜೊತೆ ಪ್ರೀತಿಯಲ್ಲಿ ಬಿದ್ದ ಅದಿತಿ ಅವರನ್ನು ಮದುವೆಯೂ ಆದರು. ಅವರೇ  ಸಿದ್ಧಾರ್ಥ್‌. ಅದಿತಿ 'ಮಹಾಸಮುದ್ರಂ' ಸಿನಿಮಾ ಸಮಯದಲ್ಲಿ ಹೀರೋ ಸಿದ್ದಾರ್ಥ್ ಜೊತೆ ಪ್ರೀತಿಯಲ್ಲಿ ಬಿದ್ರು. ಇಬ್ಬರೂ ಎರಡು ಮೂರು ವರ್ಷ ಪ್ರೇಮಿಗಳಂತೆ ಸುತ್ತಾಡಿದ್ದು, ಇತ್ತೀಚೆಗೆ ವಿದೇಶದಲ್ಲಿ ಮದುವೆ ಆಗಿ ಫ್ಯಾಮಿಲಿ ಲೈಫ್ ಎಂಜಾಯ್ ಮಾಡ್ತಿದ್ದಾರೆ.

55

ಬಾಲಿವುಡ್ ಸ್ಟಾರ್ ಹೀರೋ ಆಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಅದಿತಿಗೆ ಹತ್ತಿರದ ಸಂಬಂಧಿ. ಅದಿತಿ ಎರಡು ವರ್ಷದವಳಿದ್ದಾಗಲೇ ತಂದೆ ತಾಯಿ ಬೇರೆ ಆಗಿದ್ರು. ಹೀಗಾಗಿ ಅಮ್ಮನ ಜೊತೆ ದೆಹಲಿಗೆ ಬಂದಿದ್ದರು. 2006 ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟರು.

Read more Photos on
click me!

Recommended Stories