ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದಾಗ, ಮೊದಲ ದಿನ, ಮೊದಲ ಪ್ರದರ್ಶನ ನೋಡಲು ಅಭಿಮಾನಿಗಳು ಕಾತುರರಾಗಿರುತ್ತಾರೆ. ಶಿಳ್ಳೆ, ಕೇಕೆ, ಹಾಡು, ನೃತ್ಯಗಳೊಂದಿಗೆ ಚಿತ್ರಮಂದಿರಗಳು ಹಬ್ಬದ ವಾತಾವರಣದಲ್ಲಿರುತ್ತವೆ. 2023 ರವರೆಗೆ ತಮಿಳುನಾಡಿನಲ್ಲಿ ಬೆಳಿಗ್ಗೆ 4 ಗಂಟೆಗೆ ಪ್ರದರ್ಶನಗಳನ್ನು ತೋರಿಸಲಾಗುತ್ತಿತ್ತು. ಆದರೆ, ತುಣಿವು ಚಿತ್ರ ವೀಕ್ಷಿಸಲು ಬಂದ ಅಭಿಮಾನಿಯೊಬ್ಬರು ಮೃತಪಟ್ಟ ನಂತರ, ಬೆಳಗಿನ ಪ್ರದರ್ಶನಗಳಿಗೆ ನಿಷೇಧ ಹೇರಲಾಗಿದೆ.