ಈ ವಾರ ಓಟಿಟಿಯಲ್ಲಿ ರಿಲೀಸ್ ಆಗಿರುವ ಸೂಪರ್ ಸಿನಿಮಾಗಳಿವು

First Published | Nov 15, 2024, 12:15 PM IST

ಈ ವಾರ ಒಟಿಟಿಯಲ್ಲಿ ಯಾವ್ಯಾವ ಸಿನಿಮಾಗಳು ಬಿಡುಗಡೆಯಾಗುತ್ತಿವೆ ಎಂದು ನೋಡೋಣ.

ಸೂರ್ಯ ನಟಿಸಿರುವ 'ಕಂಗುವಾ' ಸಿನಿಮಾ ಥಿಯೇಟರ್‌ಗಳಲ್ಲಿ ಸೋತಿದೆ ಎನ್ನಲಾಗುತ್ತಿದೆ. 'ಕಂಗುವಾ' ನೋಡಿ ಬೇಸರಗೊಂಡಿರುವ ಪ್ರೇಕ್ಷಕರಿಗೆ ಈ ವಾರ ಒಟಿಟಿಯಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಹಾಗಿದ್ರೆ ಈ ವಾರ ಒಟಿಟಿಯಲ್ಲಿ ಯಾವ್ಯಾವ ಸಿನಿಮಾಗಳು ರಿಲೀಸ್ ಆಗ್ತಿದೆ ಅಂತ ನೋಡೋಣ.

ಪೇಟ ರ‍್ಯಾಪ್

ಎಸ್.ಜೆ.ಸಿನು ನಿರ್ದೇಶನದಲ್ಲಿ ಪ್ರಭುದೇವ ನಟಿಸಿರುವ ಸಿನಿಮಾ 'ಪೇಟ ರ‍್ಯಾಪ್'. ವೇದಿಕಾ ನಾಯಕಿಯಾಗಿದ್ದು. ಸನ್ನಿ ಲಿಯೋನ್ ಕೂಡ ಈ ಸಿನಿಮಾದಲ್ಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ಥಿಯೇಟರ್‌ಗೆ ಬಂದ ಈ ಸಿನಿಮಾ ಈ ವಾರ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ.

Tap to resize

ನಯನತಾರಾ Beyond The Fairy Tale

ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಮದುವೆಯ ಡಾಕ್ಯುಮೆಂಟರಿಯನ್ನು ನೆಟ್‌ಫ್ಲಿಕ್ಸ್ ನಿರ್ಮಿಸಿದೆ. ಗೌತಮ್ ಮೆನನ್ ನಿರ್ದೇಶಿಸಿರುವ ಈ ಡಾಕ್ಯುಮೆಂಟರಿ ನವೆಂಬರ್ 18 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಸಾರ್

ಬೋಸ್ ವೆಂಕಟ್ ನಿರ್ದೇಶನದ, ವಿಮಲ್ ನಟಿಸಿರುವ 'ಸಾರ್' ತಮಿಳು ಸಿನಿಮಾ ಅಕ್ಟೋಬರ್ 18 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಈಗ ಈ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ.

ಇತರೆ ಭಾಷಾ ಸಿನಿಮಾಗಳು

ಹಾಗೆಯೇ ಮಲಯಾಳಂನ 'ಅಡಿತಟ್ಟು' ಅಮೆಜಾನ್ ಪ್ರೈಮ್‌ನಲ್ಲೂ, ತೆಲುಗಿನ 'ರೇವು' ಆಹಾ ಒಟಿಟಿಯಲ್ಲೂ, 'ಉಷಾ ಪರಿಣಯಂ' ಈಟಿವಿ ವಿನ್‌ನಲ್ಲೂ, 'ಮಾ ನಾನಾ ಸೂಪರ್‌ಹೀರೋ' ಅಮೆಜಾನ್ ಪ್ರೈಮ್‌ನಲ್ಲೂ ಬಿಡುಗಡೆಯಾಗಿವೆ. ಹಿಂದಿಯ 'ದಿ ಮ್ಯಾಜಿಕ್ ಆಫ್ ಶ್ರೀ' ಜಿಯೋ ಸಿನಿಮಾ ಮತ್ತು 'ಫ್ರೀಡಂ ಅಟ್ ಮಿಡ್‌ನೈಟ್' ಸೋನಿ ಲಿವ್‌ನಲ್ಲೂ, ಇಂಗ್ಲಿಷ್‌ನ 'ಡೆಡ್‌ಪೂಲ್ ಅಂಡ್ ವೂಲ್ವೆರಿನ್' ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲೂ ಬಿಡುಗಡೆಯಾಗಿವೆ.

Latest Videos

click me!