ಪುಷ್ಟ 2 ಚಿತ್ರದ ಸಂಭಾವನೆಯಲ್ಲಿ ಸ್ಟಾರ್‌ ನಟನನ್ನೇ ಮೀರಿಸಿದ ಕನ್ನಡತಿ ರಶ್ಮಿಕಾ ಮಂದಣ್ಣ!

Published : Nov 15, 2024, 11:52 AM IST

ಪುಷ್ಪ ಸಿನಿಮಾ ವಿಶ್ವಾದ್ಯಂತ ಭಾರೀ ಜನಪ್ರಿಯತೆಯನ್ನ ಗಳಿಸಿತ್ತು. ಪುಷ್ಪ ಬಿಡುಗಡೆಯಾಗಿ ಭಾರೀ ಕಲೆಕ್ಷನ್‌ ಕೂಡ ಮಾಡಿತ್ತು. ಈ ಚಿತ್ರದ ಮೂಲಕ ಸ್ಟೈಲಿಷ್ ಸ್ಟಾರ್‌ ಅಲ್ಲು ಅರ್ಜುನ್‌ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿತ್ತು. ಇದೀಗ ಪುಷ್ಟ 2 ಚಿತ್ರ ಮತ್ತೊಮ್ಮೆ ಮ್ಯಾಜಿಕ್‌ ಮಾಡಲು ಬರುತ್ತಿದೆ. ಈ ಚಿತ್ರಕ್ಕೆ ನಾಯಕ ನಟಿ ರಶ್ಮಿಕಾ ಮಂದಣ್ಣ ಅವರೂ ಕೂಡ ಭಾರೀ ಸಂಭಾವನೆಯನ್ನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. 

PREV
16
ಪುಷ್ಟ 2 ಚಿತ್ರದ ಸಂಭಾವನೆಯಲ್ಲಿ ಸ್ಟಾರ್‌ ನಟನನ್ನೇ ಮೀರಿಸಿದ ಕನ್ನಡತಿ ರಶ್ಮಿಕಾ ಮಂದಣ್ಣ!

ಈಗಾಗಲೇ ಪುಷ್ಪ 2 ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಡಿಸೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಭಾರೀ ಪ್ರಚಾರದ ಹಿನ್ನಲೆಯಲ್ಲಿ ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ. ಪುಷ್ಪ 2 ರಿಲೀಸ್‌ ಮುನ್ನವೇ ಸುಮಾರು ರೂ. 1000 ಕೋಟಿ ರೂ. ಬಿಸಿನೆಸ್ ಆಗಿದೆ ಎಂದು ವರದಿಯಾಗಿದೆ. ಉತ್ತರ ಭಾರತದ ಪ್ರೇಕ್ಷಕರಲ್ಲಿ ಈ ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿದೆ.

26

ಪುಷ್ಪ 2 ಚಿತ್ರದ ಶೂಟಿಂಗ್‌ ವಿಳಂಬವಾದ ಕಾರಣ ಸುಮಾರು ರೂ. 500 ಕೋಟಿಗೆ ಬಜೆಟ್‌ ತಲುಪಿದೆ. ಆಗಸ್ಟ್ 15ಕ್ಕೆ ಬಿಡುಗಡೆಯಾಗಬೇಕಿದ್ದ ಪುಷ್ಪ ಡಿಸೆಂಬರ್ 2ಕ್ಕೆ ಮುಂದೂಡಿಕೆಯಾಗಿದೆ. ನಿಗದಿತ ಸಮಯಕ್ಕೆ ಶೂಟಿಂಗ್ ಮುಗಿಯದ ಕಾರಣ ಹಾಗೂ ನಿರ್ದೇಶಕ ಮತ್ತು ನಾಯಕನ ನಡುವೆ ಭಿನ್ನಾಭಿಪ್ರಾಯಗಳಿದ್ದ ಕಾರಣ ಅಲ್ಲು ಅರ್ಜುನ್ ಸುಕುಮಾರ್ ಮೇಲೆ ಕೋಪಗೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

36

ಪುಷ್ಪ 2 ಚಿತ್ರದ ಬಹುಪಾಲು ಬಜೆಟ್ ಸಂಭಾವನೆಯ ರೂಪದಲ್ಲಿ ಖರ್ಚಾಗಿದೆ. ಲಾಭದ ಪಾಲು ಕೇಳಿದ ಅಲ್ಲು ಅರ್ಜುನ್ ಗೆ ರೂ. 300 ಕೋಟಿ ಸಂಭಾವನೆ ನೀಡಲಾಗಿದೆ ಎಂದು ವರದಿಯಾಗಿದೆ. ಇದೇ ನಿಜವಾದರೆ ಅಲ್ಲು ಅರ್ಜುನ್ ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋ ಆಗಲಿದ್ದಾರೆ.

46

ಇನ್ನು ರಶ್ಮಿಕಾ ಮಂದಣ್ಣ ಕೂಡ ದೊಡ್ಡ ಸಂಭಾವನೆಯನ್ನ ಪಡೆದಿದ್ದಾರೆ. ಇದು ಅವರ ವೃತ್ತಿಜೀವನದಲ್ಲಿ ಪಡೆದ  ಅತ್ಯಧಿಕ ಸಂಭಾವನೆಯಾಗಿದೆ. ಪುಷ್ಪ 2 ಚಿತ್ರದ ನಿರ್ಮಾಪಕರು ರಶ್ಮಿಕಾ ಮಂದಣ್ಣಗೆ 10 ಕೋಟಿ ಸಂಭಾವನೆ ನೀಡಿದ್ದಾರೆ ಎಂದು ವರದಿಯಾಗಿದೆ. ರಶ್ಮಿಕಾ ಸಹ ನಾಯಕಿಯರನ್ನು ಮೀರಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ. ಪುಷ್ಪ 2ಕ್ಕೆ ಫಹಾದ್ ಫಾಜಿಲ್ ರೂ. 8 ಕೋಟಿ ರೂ. ಸಂಭಾವನೆಯನ್ನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. 

56

2021 ರಲ್ಲಿ ಬಿಡುಗಡೆಯಾದ ಪುಷ್ಪಾ ಭಾರೀ ದಾಖಲೆಯನ್ನು ಮಾಡಿತ್ತು. ವಿಶ್ವಾದ್ಯಂತ ರೂ. 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಅದರಲ್ಲೂ ಹಿಂದಿ ಆವೃತ್ತಿ ರೂ. 100 ಕೋಟಿ ಮ್ಯಾಜಿಕ್ ನಂಬರ್‌ ದಾಟಿದೆ. ಅಲ್ಲು ಅರ್ಜುನ್ ಗೆ ಉತ್ತರ ಭಾರತದಲ್ಲಿ ಭಾರೀ ಕ್ರೇಜ್ ತಂದುಕೊಟ್ಟಿತ್ತು.

66

ಇದರ ಮುಂದುವರಿದ ಭಾಗ ಪುಷ್ಪ 2 ದಾಖಲೆ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುತ್ತಿದೆ. ಪುಷ್ಪ 2 ಹಿಂದಿ ಆವೃತ್ತಿ ರೂ. 500 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಲಿದೆ ಎಂದು ಸಿನಿ ಪಂಡಿತರು ಅಂದಾಜಿಸಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories