ಬ್ಯಾಕ್‌ ಟು ಬ್ಯಾಕ್‌ ಫ್ಲಾಪ್‌ ನಂತರವೂ ಶಾರುಖ್ ಮೇಲೆ ಹೂಡಿರುವ ಮೊತ್ತ ಕೇಳಿದರೆ ತಲೆ ತಿರುಗುತ್ತೆ

First Published | Nov 1, 2022, 5:33 PM IST

ಬಾಲಿವುಡ್ ನಲ್ಲಿ ಕಿಂಗ್ ಖಾನ್ ಎಂದೇ ಖ್ಯಾತರಾಗಿರುವ ಶಾರುಖ್ ಖಾನ್ (Shah Rukh Khan) ನವೆಂಬರ್ 2ಕ್ಕೆ 57ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಶಾರುಖ್ ಖಾನ್ ಅವರ ಹಿಂದಿನ ಚಿತ್ರಗಳು (ಜಬ್ ಹ್ಯಾರಿ ಮೆಟ್ ಸಜಲ್ ಮತ್ತು ಝೀರೋ) ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗಿರಬಹುದು ಮತ್ತು 4 ವರ್ಷಗಳಿಂದ ಅವರ ಯಾವುದೇ ಚಿತ್ರ ತೆರೆಗೆ ಬಂದಿಲ್ಲ, ಆದರೆ ಇಂದಿಗೂ ಚಿತ್ರ ನಿರ್ಮಾಪಕರು ಅವರ ಸಾಮರ್ಥ್ಯದ ಮೇಲೆ ಸಂಪೂರ್ಣನಂಬಿಕೆ ಹೊಂದಿದ್ದಾರೆ ಮತ್ತು ಮುಂಬರುವ ವರ್ಷದಲ್ಲಿ, ಅವರ ಮೇಲೆ ಸುಮಾರು 800 ಕೋಟಿಗಳಷ್ಟು  ಹೂಡಿಕೆ ಮಾಡಿದ್ದಾರೆ.   2023 ರಲ್ಲಿ ಶಾರುಖ್ ಖಾನ್ ಅವರ ನಾಲ್ಕು ಚಿತ್ರಗಳು ಬರಲಿವೆ ಮತ್ತು ಈ ಎಲ್ಲಾ ಚಿತ್ರಗಳ ಒಟ್ಟು ಬಜೆಟ್ 800 ಕೋಟಿಗೂ ಹೆಚ್ಚು. ಈ ನಾಲ್ಕು ಚಿತ್ರಗಳು ಯಾವುದು ನೋಡೋಣ.

1. ಪಠಾಣ್:
ಪಠಾಣ್ ಶಾರುಖ್ ಖಾನ್ ಅವರ ಪುನರಾಗಮನದ ಚಿತ್ರವಾಗಿದ್ದು, ಇದನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಆದಿತ್ಯ ಚೋಪ್ರಾ ಅವರ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ ಮತ್ತು ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ, ಅಶುತೋಷ್ ರಾಣಾ ಮತ್ತು ಡಿಂಪಲ್ ಕಪಾಡಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಜೆಟ್ ಸುಮಾರು 250 ಕೋಟಿ ಆಗಿದ್ದು, ನಿರ್ಮಾಪಕರು ಇದರ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ.ಈ ಸಿನಿಮಾ 25 ಜನವರಿ 2023ರಂದು ಬಿಡುಗಡೆಯಾಗಲಿದೆ

2. ಟೈಗರ್‌ 3:
ಶಾರುಖ್ ಖಾನ್ ಈ ಚಿತ್ರದಲ್ಲಿ ಪೂರ್ಣ ಪಾತ್ರವನ್ನು ಹೊಂದಿಲ್ಲ, ಆದರೆ ಅವರ ಅತಿಥಿ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರ ಕೂಡ ಯಶ್ ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದ ಬಜೆಟ್ ಸುಮಾರು 225 ಕೋಟಿ. ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೆ, ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು  21 ಏಪ್ರಿಲ್ 2023 ಈ ಸಿನಿಮಾದ ಬಿಡುಗಡೆ ದಿನಾಂಕವಾಗಿದೆ.

Tap to resize

3. ಜವಾನ್:
2 ಜೂನ್ 2023ರಂದು ಬಿಡುಗಡೆಯಾಗುಲಿರುವ ಜವಾನ್‌ ಚಿತ್ರವನ್ನು ಅಟ್ಲೀ ಕುಮಾರ್ ನಿರ್ದೇಶಿಸಿದ್ದಾರೆ ಮತ್ತು ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರು ತಮ್ಮ ರೆಡ್ ಚಿಲ್ಲಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಶಾರುಖ್ ಜೊತೆಗೆ ವಿಜಯ್ ಸೇತುಪತಿ, ನಯನತಾರಾ ಮತ್ತು ಪ್ರಿಯಾಮಣಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದ ಬಜೆಟ್ ಸುಮಾರು 180 ಕೋಟಿ ಎಂದು ಹೇಳಲಾಗುತ್ತಿದೆ.

4. ಡುಂಕಿ:
ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರೊಂದಿಗೆ ಶಾರುಖ್ ಖಾನ್ ಅವರ ಮೊದಲ ಚಿತ್ರ ಇದಾಗಿದೆ. ರೆಡ್ ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದರಲ್ಲಿ ತಾಪ್ಸಿ ಪನ್ನು ಮತ್ತು ಬೊಮನ್ ಇರಾನಿ ಕೂಡ ನಟಿಸಿದ್ದಾರೆ. ಈ ಚಿತ್ರದ ಬಜೆಟ್ 150-200 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.ಆದರೆ ಈ ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಲಭ್ಯವಿಲ್ಲ.

Latest Videos

click me!