ಬೆಂಗಳೂರು(ಫೆ. 26) ದಿವಂಗತ ಪುನೀತ್ ರಾಜ್ ಕುಮಾರ್ (Puneeth Rajkumar) ಸಮಾಧಿಗೆ ಭೇಟಿ ನೀಡಿದ ತಮಿಳು ಸ್ಟಾರ್ ಇಳೆಯ ದಳಪತಿ ವಿಜಯ್ (Thalapathy Vijay) ನಮನ ಸಲ್ಲಿಸಿದರು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಅಭಿಮಾನಿಗಳೊಂದಿಗೆ ವಿಜಯ್ ಪುನೀತ್ ಗೆ ನಮನ ಸಲ್ಲಿಸಿದರು.
ಪುನೀತ್ ರಾಜ್ ಕುಮಾರ್ ಕುಟುಂಬಕ್ಕೂ ಸಣ್ಣ ಸುಳಿವು ಕೂಡ ನೀಡದಂತೆ ವಿಜಯ್ ಆಗಮಿಸಿದ್ದರು. ಕಂಠೀರವ ಸ್ಟುಡಿಯೋದಲ್ಲಿನ (Bengaluru) ನಟ ಪುನೀತ್ ರಾಜ್ ಕುಮಾರ್ ಅವರ ಸಮಾಧಿಯ ದರ್ಶವವನ್ನು ವಿಜಯ್ ಪಡೆದುಕೊಂಡರು.