ನ್ಯೂಡ್ ಫೋಟೋಶೂಟ್ ಮಾಡಿದ ವೀಣಾ ಮಲಿಕ್‌ಗೆ ಗಂಡಸರೆಂದರೆ ಹೊಟ್ಟೆಕಿಚ್ಚು, ಕಾರಣ ತಿಳಿದರೆ ಬೆಚ್ಚಿ ಬೀಳುತ್ತೀರಿ!

Contributor Asianet   | Asianet News
Published : Feb 26, 2022, 06:08 PM IST

ಪಾಕಿಸ್ತಾನ ಹಾಗೂ ಭಾರತದಲ್ಲಿ ಹೆಸರು ಮಾಡಿರುವ ವೀಣಾ ಮಲಿಕ್ (Veena Malik) ಫೆಬ್ರವರಿ 26 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟಿ ತನ್ನ ಹಾಟ್ ಆಕ್ಟ್‌ಗಳು ಮತ್ತು ಅವರ ಬೋಲ್ಡ್‌ ಹೇಳಿಕೆಗಳಿಗಾಗಿ ಅನೇಕ ಬಾರಿ ಸುದ್ದಿಯಾಗಿದ್ದಾರೆ. ಅವರ ವೃತ್ತಿಜೀವನವು ಪಾಕಿಸ್ತಾನದಲ್ಲಿ ನಟನೆಯಿಂದ ಪ್ರಾರಂಭವಾಯಿತು ಮತ್ತು ಬಾಲಿವುಡ್‌ಗೂ ತಲುಪಿತು. ಭಾರತದಲ್ಲೂ  ವೀಣಾ ಮಲಿಕ್ ಹೆಸರು ಮಾಡಿದೆ. ತಾನು ಪಾಕಿಸ್ತಾನಿಯಾಗಿರುವಷ್ಟೇ ಹಿಂದೂಸ್ತಾನಿಯೂ ಹೌದು ಎಂದು ವೀಣಾ ಮಲಿಕ್ ಹೇಳುತ್ತಾರೆ. ರಾವಲ್ಪಿಂಡಿಯಲ್ಲಿ ಜನಿಸಿದ ವೀಣಾ ಮಲಿಕ್ ಅವರ ಜನ್ಮದಿನದಂದು ಅವರ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್‌ ಸಂಗತಿಗಳು ಇಲ್ಲಿವೆ.

PREV
19
ನ್ಯೂಡ್ ಫೋಟೋಶೂಟ್ ಮಾಡಿದ ವೀಣಾ ಮಲಿಕ್‌ಗೆ  ಗಂಡಸರೆಂದರೆ ಹೊಟ್ಟೆಕಿಚ್ಚು, ಕಾರಣ ತಿಳಿದರೆ ಬೆಚ್ಚಿ ಬೀಳುತ್ತೀರಿ!

ವೀಣಾ ಮಲಿಕ್ ಭಾರತದಲ್ಲಿ 'ಬಿಗ್ ಬಾಸ್' ಮೂಲಕ ಗಮನ ಸೆಳೆದರು. ಅವರು ಬಿಗ್ ಬಾಸ್‌ನ ನಾಲ್ಕನೇ ಸೀಸನ್‌ನಲ್ಲಿ ಕಾಣಿಸಿಕೊಂಡರು. ಅಶ್ಮಿತ್ ಪಟೇಲ್ ಮತ್ತು ಅವರ ನಡುವೆ ಆತ್ಮೀಯತೆ ಹೆಚ್ಚಿತ್ತು. ಆದರೆ, ಮನೆಯಿಂದ ಹೊರಗೆ ಬಂದ ನಂತರ ಇಬ್ಬರೂ ಒಟ್ಟಿಗೆ ಕಾಣಿಸಲಿಲ್ಲ.
 


 

29

ವೀಣಾ ಮಲಿಕ್ 10 ವರ್ಷದವರಿದ್ದಾಗ ನೋಟ್ ಬುಕ್ ಮೇಲೆ ಹೈ ಹೀಲ್ಸ್, ಪೌಚ್, ಲಾಂಗ್ ಲೆನ್ಸ್ ಗಳ ಚಿತ್ರವನ್ನು ನೋಡದೇ ಬಿಡಿಸುತ್ತಿದ್ದರು. ಒಮ್ಮೆ ಅಜ್ಜಿ ಅವರನ್ನು ನೀನು ಇದೆಲ್ಲವನ್ನು ಎಲ್ಲಿ ನೋಡಿದೆ ಎಂದು ಕೇಳಿದಾಗ, ಅವರ ಬಳಿ ಉತ್ತರವಿರಲಿಲ್ಲ. ಬಹುಶಃ ಅದೇ ಸಮಯದಲ್ಲಿ ನಟಿಯಾಗಬೇಕೆಂಬ ಅವಳ ಕನಸು ಅವರಲ್ಲಿ ಬೆಳೆಯುತ್ತಿತ್ತು.


 

39

15 ಅಥವಾ 16 ವರ್ಷದವರಿದ್ದಾಗ ನಾಯಕಿಯಾಗಬೇಕು ಎಂದು ನಿರ್ಧರಿಸಿದ್ದೆ ಎಂದು ವೀಣಾ ಮಲಿಕ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ವೀಣಾ ಮೊದಲು ಟಿವಿ ಶೋ 'ಪ್ರೈಮ್ ಗಾಸಿಪ್' ನಲ್ಲಿ ಕೆಲಸ ಮಾಡಿದರು. 

49

ನಂತರ, 'ಹಮ್ ಸಬ್ ಉಮೀದ್ ಸೆ ಹೈ' ಮೂಲಕ ಫೇಮಸ್‌ ಆದರು. ಅವರು 'ದಾಲ್ ಮೇ ಕುಚ್ ಕಾಲಾ ಹೈ' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಆದರೆ, ಈ ಸಿನಿಮಾದಲ್ಲಿ ವಿಶೇಷ ಗಮನ ಸೆಳೆಯಲಿಲ್ಲ. 

59

ಇದಾದ ನಂತರ ವೀಣಾ   ‘ಜಿಂದಗಿ 50-50’ ಚಿತ್ರದಲ್ಲಿ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದರು. ಇದಲ್ಲದೇ ಸೌತ್ ಇಂಡಿಯಾದಲ್ಲಿ ತಯಾರಾದ 'ಡರ್ಟಿ ಪಿಕ್ಚರ್' ಚಿತ್ರದಲ್ಲಿ ಸಿಲ್ಕ್ ಸ್ಮಿತಾ ಪಾತ್ರವನ್ನು ನಿರ್ವಹಿಸಿದರು.ವೀಣಾ ಅವರು 'ಸೂಪರ್ ಮಾಡೆಲ್', 'ಗಲಿ ಗಲಿ ಚೋರ್ ಹೈ' ಮುಂತಾದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

69

ತಾನು ಪುರುಷರ ಬಗ್ಗೆ ಅಸೂಯೆ ಪಟ್ಟಿದ್ದೇನೆ ಎಂದು ವೀಣಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಯಾಕೆಂದರೆ ಗಂಡಸರು ನಾಲ್ಕಾರು ಮದುವೆ ಮಾಡುತ್ತಾರೆ. ಆದರೆ ನಾವು ಅದನ್ನು ಮಾಡಲು ಸಾಧ್ಯವಿಲ್ಲ. ಮಹಿಳೆಯರಿಗೂ ಈ ಹಕ್ಕು ಸಿಗಬೇಕು ಎಂಬುದು ವೀಣಾ ಅವರ ನಂಬಿಕೆ.


 

79

ಎಫ್‌ಎಚ್‌ಎಂ ಮ್ಯಾಗಜೀನ್‌ಗಾಗಿ ವೀಣಾ ನ್ಯೂಡ್ ಫೋಟೋಶೂಟ್ ಮಾಡಿದ್ದಾರೆ. ಅದರ ನಂತರ ಅವರು ಸಾಕಷ್ಟು ಪ್ರಚಾರ ಪಡೆದರು. ಆದರೆ ನಂತರ ಪತ್ರಿಕೆ ತನ್ನ ಫೋಟೋವನ್ನು ಟ್ಯಾಂಪರ್ ಮಾಡಿದೆಮತ್ತು ಅವರು ಅಂತಹ ಫೋಟೋಶೂಟ್ ಮಾಡಿರಲಿಲ್ಲ  ಎಂದು ಹೇಳಿಕೆ ನೀಡಿದ್ದಾರೆ . ಈ ಫೋಟೋಶೂಟ್‌ಗಾಗಿ ಅವರು ಕೈಯಲ್ಲಿ ಐಎಸ್‌ಐ ಎಂದು ಬರೆದು ಪೋಸ್ ನೀಡಿದ್ದಾರೆ.


 

89

ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಜೊತೆ ವೀಣಾ ಮಲಿಕ್ ಅಫೇರ್ ಹೊಂದಿದ್ದರು. ಆದರೆ ನಂತರ ವೀಣಾ ಸಂಬಂಧ ಮುರಿದುಕೊಂಡು ಆಸಿಫ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು.
 


 

99

ಮಲಿಕ್ ಅವರು ಉದ್ಯಮಿ ಅಸದ್ ಬಶೀರ್ ಖಾನ್ ಖಟ್ಟಕ್ ಅವರನ್ನು 25 ಡಿಸೆಂಬರ್ 2013 ರಂದು ದುಬೈನಲ್ಲಿ ವಿವಾಹವಾದರು. ಈ ದಂಪತಿಗಳಿಗೆ  ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮಗನ ಹೆಸರು ಅಬ್ರಾಮ್ ಖಾನ್ ಖಟ್ಟಕ್ ಮತ್ತು ಮಗಳು ಅಮಲ್ ಅಶಾದ್ ಖಾನ್.

Read more Photos on
click me!

Recommended Stories