ಇತ್ತೀಚಿನ ವರದಿಗಳ ಪ್ರಕಾರ, ಏಸ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿರುದ್ಧದ ಮಾನನಷ್ಟ ಮೊಕದ್ದಮೆಯಲ್ಲಿ ದಕ್ಷಿಣ ನಟ ಸಿದ್ಧಾರ್ಥ್ ಅವರನ್ನು ಚೆನ್ನೈ ಪೊಲೀಸರು ಸಮನ್ಸ್ ಮಾಡಿದ್ದಾರೆ. ಚೆನ್ನೈ ಪೊಲೀಸ್ ಆಯುಕ್ತ ಶಂಕರ್ ಜಿವಾಲ್ ಪ್ರಕಾರ, ಹೈದರಾಬಾದ್ ಪೊಲೀಸರು ನೀಡಿದ ದೂರಿನ ಮೇರೆಗೆ ನಟನಿಗೆ ಸಮನ್ಸ್ ನೀಡಲಾಗಿದೆ.
ಆದರೆ, ಸಿದ್ಧಾರ್ಥ್ ವಿರುದ್ಧ ಯಾವುದೇ ಕ್ರಿಮಿನಲ್ ಕ್ರಮ ಜರುಗಿಸುವುದಿಲ್ಲ. ಕಾನೂನು ಅಭಿಪ್ರಾಯದ ಪ್ರಕಾರ ಅವರು ಕೇವಲ ಮಾನನಷ್ಟಕ್ಕಾಗಿ ಮಾತ್ರ ಕ್ರಮವನ್ನು ಎದುರಿಸಬೇಕಾಯಿತು. 'COVID-19 ಕಾರಣ, ಹೇಳಿಕೆಯನ್ನು ಹೇಗೆ ಪಡೆಯುವುದು ಎಂಬುದರ ಕುರಿತು ನಾವು ಯೋಚಿಸುತ್ತಿದ್ದೇವೆ. ನಾವು ನಟ ಸಿದ್ಧಾರ್ಥ್ ಅವರನ್ನು ಕರೆಸಿದ್ದೇವೆ'ಎಂದು ಚೆನ್ನೈ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ದೇಶದಲ್ಲಿ ಭಾರಿ ಸದ್ದು ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಪ್ರಕರಣದ ಕುರಿತು ಸಾಕಷ್ಟು ಪರ ವಿರೋಧದ ಚರ್ಚೆಗಳು ನಡೆದವು. ಈ ಬೆನ್ನಲ್ಲೇ ಭಾರತದ ತಾರಾ ಟೆನಿಸ್ ಆಟಗಾರ್ತಿ ಸೈನಾ ನೆಹ್ವಾಲ್ ಸಹ ಟ್ವೀಟ್ ಮಾಡಿದ್ದರು.
'ಯಾವುದೇ ರಾಷ್ಟ್ರವು ತನ್ನ ಸ್ವಂತ ಪ್ರಧಾನಿಯ ಭದ್ರತೆಗೆ ರಾಜಿ ಮಾಡಿಕೊಂಡರೆ ತಾನು ಸುರಕ್ಷಿತ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಪ್ರಬಲವಾದ ಪದಗಳಲ್ಲಿ ಇದನ್ನು ಖಂಡಿಸುತ್ತೇನೆ, ಅರಾಜಕತಾವಾದಿಗಳ ಹೇಡಿತನದ ದಾಳಿಯನ್ನು ನಾನು ಖಂಡಿಸುತ್ತೇನೆ. #BharatStandsWithModi #PMModi'ಎಂದು ಜನವರಿ 5 ರಂದು ನೆಹ್ವಾಲ್ ಟ್ವೀಟ್ ಮಾಡಿದ್ದರು.
Image: Sadhguru, Saina Nehwal, SiddharthInstagram
ಆದರೆ ಸೈನಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ನಟ ಸಿದ್ಧಾರ್ಥ್ ಆಕೆಯ ವಿರುದ್ಧ ಅಸಹ್ಯಕರ ಪದವನ್ನು ಬಳಸಿದ್ದರು.ಹೀಗಾಗಿ ನೆಟ್ಟಿಗರು ನಟ ಸಿದ್ಧಾರ್ಥ್‌ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬೆನ್ನಲ್ಲೇ ಕ್ರಿಕೆಟಿಗ ಸುರೇಶ್ ರೈನಾ ಸೈನಾ, ಸದ್ಗುರು ನೆಹ್ವಾಲ್‌ಗೆ ತಮ್ಮ ಬೆಂಬಲ ಸೂಚಿಸಿದ್ದರು.
ನಂತರ ಅವರು ಸೈನಾ ನೆಹ್ವಾಲ್ ಅವರಿಗೆ ಮಾಡಿದ ಅಸಭ್ಯ ಜೋಕ್‌ಗಾಗಿ ಕ್ಷಮೆಯಾಚಿಸಿದರು. 'ಒಂದು ಜೋಕನ್ನು ವಿವರಿಸಿ ಹೇಳಬೇಕಾದರೆ ಅದು ಉತ್ತಮ ಜೋಕ್ ಅನ್ನಿಸಿಕೊಳ್ಳುವುದಿಲ್ಲ. ಆದಾಗ್ಯೂ ಅನೇಕರು ಭಾವಿಸಿದಂತೆ ನನ್ನ ಮಾತು ಮತ್ತು ಹಾಸ್ಯವು ಯಾವುದೇ ದುರುದ್ದೇಶ ಹೊಂದಿಲ್ಲ' ಎಂದು ಟ್ವೀಟ್ ಮಾಡಿದ್ದರು.
'ಇದು ಮಹಿಳೆಯರ ವಿಷಯ, ಸಿದ್ದಾರ್ಥ ಮಹಿಳೆಯನ್ನು ಗುರಿಯಾಗಿಸಬಾರದು ಆದರೆ ಪರವಾಗಿಲ್ಲ, ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ನನ್ನ ಜಾಗದಲ್ಲಿ ನಾನು ಸಂತೋಷವಾಗಿದ್ದೇನೆ ಮತ್ತು ದೇವರು ಅವರನ್ನು ಆಶೀರ್ವದಿಸಲಿ' ಎಂದು ಸೈನಾ ಪ್ರತಿಕ್ರಿಯಿಸಿದ್ದಾರೆ.
ಏತನ್ಮಧ್ಯೆ, ಸಿದ್ಧಾರ್ಥ್ ಅವರ ಹೇಳಿಕೆಗಾಗಿ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಈಗ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತರೊಬ್ಬರು ಅವರ ವಿರುದ್ಧ ಅಧಿಕೃತ ದೂರು ದಾಖಲಿಸಿದ ನಂತರ ಸಿದ್ಧಾರ್ಥ್ ವಿರುದ್ಧ ಸೆಕ್ಷನ್ 509 IPC, ಸೆಕ್ಷನ್ 67 IT ACT ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.